Advertisement

ಹಾಲಿನ ದರ 2 ರೂ ಏರಿಕೆ!!

[ad_1]

ದೇಶದ ಜನತೆಗೆ ಶಾಕ್ ಎದುರಾಗಿದ್ದು ಹಾಲಿನ ದರ 2 ರೂಪಾಯಿ ಏರಿಕೆ ಮಾಡಲಾಗಿದೆ. ಹಾಗಂತ ಇದು ನಮ್ಮ ಕರ್ನಾಟಕದ ನಂದಿನಿ ಬ್ರಾಂಡ್ ಹಾಲಿನ ದರ ಏರಿಕೆಯಾಗಿರುವುದಲ್ಲ. ಬದಲಿಗೆ ದೇಶದ ಜನಪ್ರಿಯ ಡೈರಿ ಬ್ರ್ಯಾಂಡ್ ‘ಅಮುಲ್’ ತನ್ನ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡಿದೆ. 

ಹೌದು, ಅಮುಲ್ ತನ್ನ ಎಲ್ಲಾ ಪ್ರಮುಖ ಹಾಲಿನ ಉತ್ಪನ್ನಗಳ ದರವನ್ನು ಪ್ರತಿ ಲೀಟರ್‌ಗೆ 2 ರೂಪಾಯಿಯಷ್ಟು ಹೆಚ್ಚಳ ಮಾಡಿದ್ದು, ಪರಿಷ್ಕೃತ ದರಗಳು ಮೇ 14ರಿಂದಲೇ ಜಾರಿಗೆ ಬರಲಿವೆ. ಈಗಾಗಲೇ ದಿನಸಿ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಅಮುಲ್‌ನ ಈ ನಿರ್ಧಾರವು ಗಾಯದ ಮೇಲೆ ಬರೆ ಎಳೆದಂತಾಗಿದೆ.

​ಬೆಲೆ ಏರಿಕೆಗೆ ಕಾರಣವೇನು?

ಹಾಲಿನ ದರ ಹೆಚ್ಚಳಕ್ಕೆ ಮುಖ್ಯವಾಗಿ ಜಾನುವಾರುಗಳ ಮೇವು (Fodder) ಮತ್ತು ಉತ್ಪನ್ನಗಳ ಪ್ಯಾಕೇಜಿಂಗ್‌ ವೆಚ್ಚದಲ್ಲಿ ಉಂಟಾಗಿರುವ ಏರಿಕೆ ಕಾರಣ ಎಂದು ಕಂಪನಿ ತಿಳಿಸಿದೆ. ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

banner



[ad_2]

Source link

Leave a Reply

Your email address will not be published. Required fields are marked *