Advertisement

1 ಪಂದ್ಯ, ಹಲವು ದಾಖಲೆಗಳು- ಕೊಹ್ಲಿ ವಿಶ್ವದಾಖಲೆಯ ಆಟ, ಮೊದಲ ಸ್ಥಾನಕ್ಕೆ ಜಿಗಿದ ಆರ್‌ಸಿಬಿ | Public TV

[ad_1]

ರಾಯ್ಪುರ: ಚೇಸ್‌ ಮಾಸ್ಟರ್‌ ವಿರಾಟ್‌ ಕೊಹ್ಲಿ (Virat Kohli) ವಿಶ್ವದಾಖಲೆಯ ಆಟದ ನೆರವಿನಿಂದ ಕೋಲ್ಕತ್ತಾ ನೈಟ್‌ ರೈಡರ್ಸ್‌ (KKR) ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) 6 ವಿಕೆಟ್‌ಗಳ ಜಯ ಸಾಧಿಸಿದೆ.

193 ರನ್‌ಗಳ ಗುರಿಯನ್ನು ಪಡೆದ ಆರ್‌ಸಿಬಿ ಇನ್ನೂ 5 ಎಸೆತ ಬಾಕಿ ಇರುವಂತೆಯೇ 4 ವಿಕೆಟ್‌ ನಷ್ಟಕ್ಕೆ 194 ರನ್‌ ಹೊಡೆದು ಜಯ ಸಾಧಿಸಿತು. ಈ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದು ಕೊಹ್ಲಿ ಅವರ ಅಜೇಯ ಶತಕದ ಆಟ. ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದ ಕೊಹ್ಲಿ 19.1 ಓವರ್‌ಗಳ ಕಾಲ ಮೈದಾನದಲ್ಲಿದ್ದು ತಂಡಕ್ಕೆ ಜಯವನ್ನು ತಂದುಕೊಟ್ಟರು.

ಆರಂಭದಿಂದಲೇ ಆಕ್ರಮಣಕ್ಕಾರಿ ಆಟವಾಡಿದ ಕೊಹ್ಲಿ 32 ಎಸೆತಗಳಲ್ಲಿ 50 ರನ್‌ ಹೊಡೆದರೆ 58 ಎಸೆತಗಳಲ್ಲಿ ಶತಕ ಬಾರಿಸಿದರು. ಅಂತಿಮವಾಗಿ 105 ರನ್‌(60 ಎಸೆತ, 11 ಬೌಂಡರಿ, 3 ಸಿಕ್ಸ್‌) ಹೊಡೆದು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಈ ಜಯದೊಂದಿಗೆ ಆರ್‌ಸಿಬಿ 12 ಪಂದ್ಯಗಳಿಂದ 1.053 ನೆಟ್‌ ರನ್‌ರೇಟ್‌ನೊಂದಿಗೆ 16 ಅಂಕ ಪಡೆದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ. 16 ಅಂಕ ಪಡೆದಿದ್ದರೂ 0.551 ನೆಟ್‌ ರನ್‌ರೇಟ್‌ ಹೊಂದಿರುವ ಗುಜರಾತ್‌ ಎರಡನೇ ಸ್ಥಾನದಲ್ಲಿದೆ.

14 ಸಾವಿರ ರನ್‌
ಈ ಪಂದ್ಯದಲ್ಲಿ 78 ರನ್‌ ಹೊಡೆದಾಗ ಕೊಹ್ಲಿ ವಿಶಿಷ್ಟ ದಾಖಲೆ ನಿರ್ಮಿಸಿದರು. ಟಿ20 ಕ್ರಿಕೆಟಿನಲ್ಲಿ ಅತಿ ವೇಗವಾಗಿ 14 ಸಾವಿರ ರನ್‌ ಹೊಡೆದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೊಹ್ಲಿ 407 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ನಿರ್ಮಿಸಿದರೆ ವಿಂಡೀಸ್‌ನ ಆಲ್‌ರೌಂಡರ್‌ ಕ್ರಿಸ್‌ ಗೇಲ್‌ 423, ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ 423, ಇಂಗ್ಲೆಂಡಿನ ಜೋಸ್‌ ಬಟ್ಲರ್‌ 468 ಇನ್ನಿಂಗ್ಸ್‌ನಲ್ಲಿ 14 ಸಾವಿರ ರನ್‌ಗಳ ಗಡಿಯನ್ನು ದಾಟಿದ್ದರು. ಇದನ್ನೂ ಓದಿ: ಹೀನಾಯ ಸೋಲಿನ ಬಳಿಕ ಮತ್ತೆ ಶಾಕ್ – SRH ನಾಯಕ ಪ್ಯಾಟ್ ಕಮ್ಮಿನ್ಸ್‌ಗೆ 12 ಲಕ್ಷ ದಂಡ

10 ಶತಕ:
ಈ ಸಾಧನೆಯ ಜೊತೆ ಕೊಹ್ಲಿ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ. ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಹ್ಲಿ ಇಲ್ಲಿಯವರೆಗೆ 10 ಶತಕ ಹೊಡೆದರೆ ಅಭಿಷೇಕ್‌ ಶರ್ಮಾ 9 ಶತಕ ಹೊಡೆದು ಎರಡನೇ ಸ್ಥಾನದಲ್ಲಿದ್ದಾರೆ. ಕೆಎಲ್‌ ರಾಹುಲ್‌(8), ಸಂಜು ಸ್ಯಾಮ್ಸನ್‌(8), ರೋಹಿತ್‌ ಶರ್ಮಾ(8) ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.

400 + ರನ್‌
ಅಜೇಯ 105 ರನ್‌ ಹೊಡೆಯುವ ಮೂಲಕ ಕೊಹ್ಲಿ ಈ ಆವೃತ್ತಿಯಲ್ಲಿ 12 ಪಂದ್ಯಗಳಿಂದ 484 ರನ್‌ ಹೊಡೆದಿದ್ದಾರೆ. ಈ ಮೂಲಕ ಅತಿ ಹೆಚ್ಚು ರನ್‌ ಹೊಡೆದ ಬ್ಯಾಟರ್‌ಗಳ ಪೈಕಿ ಮೂರನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಹೈದರಾಬಾದಿನ ಹೆನ್ರಿಕ್‌ ಕ್ಲಾಸೆನ್‌(508) ಇದ್ದರೆ ಎರಡನೇ ಸ್ಥಾನದಲ್ಲಿ ಸಾಯಿ ಸುದರ್ಶನ್‌(501) ಇದ್ದಾರೆ. ಇದನ್ನೂ ಓದಿ: ಯುರೋಪಿಯನ್ ಟಿ20 ಲೀಗ್‌ನಲ್ಲಿ ತಂಡ ಖರೀದಿಸಿದ ರಾಹುಲ್ ದ್ರಾವಿಡ್



[ad_2]

Source link publictv.in

Leave a Reply

Your email address will not be published. Required fields are marked *