Advertisement

ಟ್ರಂಪ್‌ ಮುಂದೆಯೇ ರೆಡ್‌ಲೈನ್‌ ಎಳೆದು `ಬೆಂಕಿʼ ವಾರ್ನಿಂಗ್‌ ಕೊಟ್ಟ ಕ್ಸಿ ಜಿನ್‌ಪಿಂಗ್‌ | Public TV

[ad_1]

ಬೀಜಿಂಗ್‌: ತೈವಾನ್ ಸಮಸ್ಯೆಯನ್ನು(Taiwan Problem) ಸರಿಯಾಗಿ ನಿರ್ವಹಿಸದಿದ್ದರೆ ಉಭಯ ದೇಶಗಳ ನಡುವೆ ನೇರ ಸಂಘರ್ಷ ಅಥವಾ ಘರ್ಷಣೆ ಸಂಭವಿಸಬಹುದು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ (Xi Jinping) ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಸಮ್ಮುಖದಲ್ಲೇ ನೇರ ಎಚ್ಚರಿಕೆ ನೀಡಿದ್ದಾರೆ.

ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ದಿ ಪೀಪಲ್‌ನಲ್ಲಿ ನಡೆದ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಮಾತನಾಡಿದ ಅವರು ತೈವಾನ್ ವಿಷಯವು ಅಮೆರಿಕ-ಚೀನಾ ಸಂಬಂಧಗಳಲ್ಲೇ ಅತ್ಯಂತ ಸೂಕ್ಷ್ಮ ಮತ್ತು ಪ್ರಮುಖವಾದದ್ದು ಎಂದಿದ್ದಾರೆ.

ಈ ವಿಷಯವನ್ನು ಸರಿಯಾಗಿ ನಿರ್ವಹಿಸದಿದ್ದರೆ ದೊಡ್ಡ ಆರ್ಥಿಕತೆಗಳು ಘರ್ಷಣೆಗೆ ಇಳಿಯಬಹುದು. ತೈವಾನ್ ವಿಚಾರದಲ್ಲಿ ತಪ್ಪು ಹೆಜ್ಜೆ ಇಟ್ಟರೆ ಇಡೀ ಅಮೆರಿಕ-ಚೀನಾ (USA-China) ದ್ವಿಪಕ್ಷೀಯ ಸಂಬಂಧಗಳು ಅತ್ಯಂತ ಅಪಾಯಕಾರಿ ಸ್ಥಿತಿಗೆ ತಳ್ಳಬಹುದು ಎಂದು ವಾರ್ನಿಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ಭರ್ಜರಿ ಸ್ವಾಗತ ಸಿಕ್ಕಿದ ಬೆನ್ನಲ್ಲೇ ಚೀನಾವನ್ನು ಹಾಡಿ ಹೊಗಳಿದ ಟ್ರಂಪ್‌

ಒಂದು ವೇಳೆ ತೈವಾನ್ ವಿಷಯವನ್ನು ಸರಿಯಾಗಿ ನಿಭಾಯಿಸಿದರೆ ಮಾತ್ರ ಉಭಯ ದೇಶಗಳ ಸಂಬಂಧ ಸ್ಥಿರವಾಗಿರಲು ಸಾಧ್ಯ. ಚೀನಾ ಮತ್ತು ಅಮೆರಿಕ ಸ್ಪರ್ಧಿಗಳಾಗುವ ಬದಲು ಪಾಲುದಾರರಾಗಬೇಕು ಎಂದು ಕ್ಸಿ ಜಿನ್‌ಪಿಂಗ್ ಪ್ರತಿಪಾದಿಸಿದ್ದಾರೆ.

trump china xi jinping

ಚೀನಾ ವಿಧಿಸಿದ 4 ಕೆಂಪು ಗೆರೆಗಳು
1 ತೈವಾನ್ ವಿಷಯ
ಇದು ಚೀನಾದ ಅತ್ಯಂತ ಪ್ರಮುಖ ಮತ್ತು ಮೊದಲನೇ ಕೆಂಪು ಗೆರೆಯಾಗಿದೆ. ತೈವಾನ್ ದೇಶವು ಚೀನಾದ ಅವಿಭಾಜ್ಯ ಅಂಗವಾಗಿದ್ದು, ಅಮೆರಿಕ ಅದರ ಸ್ವಾತಂತ್ರ್ಯವನ್ನು ಬೆಂಬಲಿಸಬಾರದು ಮತ್ತು ಅದಕ್ಕೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಪೂರೈಸಬಾರದು. ಇದನ್ನೂ ಓದಿ: ಚೀನಾ-ತೈವಾನ್‌ ಐತಿಹಾಸಿಕ ಮಾತುಕತೆ – ಈ ಭೇಟಿಗೆ ಇಷ್ಟೊಂದು ಮಹತ್ವ ಯಾಕೆ?

2. ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಹಸ್ತಕ್ಷೇಪ
ವಿವರಣೆ: ಪಾಶ್ಚಿಮಾತ್ಯ ದೇಶಗಳು ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಹೆಸರಿನಲ್ಲಿ ಚೀನಾದ ಆಂತರಿಕ ಆಡಳಿತವನ್ನು ಟೀಕಿಸುವುದನ್ನು ಚೀನಾ ವಿರೋಧಿಸುತ್ತದೆ. ಹಾಂಕಾಂಗ್, ಕ್ಸಿಂಜಿಯಾಂಗ್ (ಉಯ್ಘರ್ ಮುಸ್ಲಿಮರ ವಿಷಯ) ಮತ್ತು ಟಿಬೆಟ್ ವಿಷಯಗಳು ಚೀನಾದ ಆಂತರಿಕ ವಿಚಾರಗಳಾಗಿದ್ದು, ಇದರಲ್ಲಿ ಅಮೆರಿಕ ಹಸ್ತಕ್ಷೇಪ ಮಾಡಬಾರದು.

3. ಚೀನಾದ ರಾಜಕೀಯ ವ್ಯವಸ್ಥೆ
ಚೀನಾದಲ್ಲಿ ಕಮ್ಯುನಿಸ್ಟ್ ಪಕ್ಷದ (CPC) ಏಕಪಕ್ಷೀಯ ಆಡಳಿತವಿದೆ. ಅಮೆರಿಕವು ಚೀನಾದ ರಾಜಕೀಯ ವ್ಯವಸ್ಥೆಯನ್ನು ಅಥವಾ ಕಮ್ಯುನಿಸ್ಟ್ ಪಕ್ಷದ ನಾಯಕತ್ವವನ್ನು ಬದಲಾಯಿಸಲು (System Change) ಯಾವುದೇ ರೀತಿಯ ಪರೋಕ್ಷ ಪ್ರಯತ್ನಗಳನ್ನು ಮಾಡಬಾರದು.

4. ಚೀನಾದ ಆರ್ಥಿಕ ಮತ್ತು ತಾಂತ್ರಿಕ ಅಭಿವೃದ್ಧಿ ಹಕ್ಕು
ಚೀನಾದ ತಾಂತ್ರಿಕ ಮತ್ತು ಆರ್ಥಿಕ ಬೆಳವಣಿಗೆಯನ್ನು ತಡೆಯಲು ಅಮೆರಿಕ ಹೇರುತ್ತಿರುವ ನಿರ್ಬಂಧಗಳ ವಿರುದ್ಧ ಈ ನಿಯಮವಿದೆ. ಚೀನಾದ ತಂತ್ರಜ್ಞಾನ ಕಂಪನಿಗಳ ಮೇಲೆ (ಉದಾಹರಣೆಗೆ ಮೈಕ್ರೋಚಿಪ್ಸ್, ಇವಿ ಕಾರುಗಳು, ಎಐ) ಅಮೆರಿಕ ಅನಗತ್ಯ ವ್ಯಾಪಾರ ನಿರ್ಬಂಧಗಳನ್ನು ಹೇರಬಾರದು ಮತ್ತು ಚೀನಾದ ಅಭಿವೃದ್ಧಿಯ ಹಕ್ಕನ್ನು ಕಸಿದುಕೊಳ್ಳಬಾರದು.

ಚೀನಾ ವಿರುದ್ಧ ಆಕ್ರೋಶ:
ತೈವಾನ್‌ನ ವಿದೇಶಾಂಗ ಸಚಿವಾಲಯವು ಜಿನ್‌ಪಿಂಗ್‌ ಅವರ ಹೇಳಿಕೆಯನ್ನು ತಿರಸ್ಕರಿಸಿದ್ದು, “ತೈವಾನ್ ಜಲಸಂಧಿಯಲ್ಲಿನ ಅಸ್ಥಿರತೆಗೆ ಚೀನಾದ ಸರ್ವಾಧಿಕಾರಿ ಮತ್ತು ಆಕ್ರಮಣಕಾರಿ ಧೋರಣೆಯೇ ಏಕೈಕ ಕಾರಣ” ಎಂದು ತಿರುಗೇಟು ನೀಡಿದೆ. ಅಮೆರಿಕವು ತೈವಾನ್‌ಗೆ ತನ್ನ ದೃಢವಾದ ರಕ್ಷಣಾತ್ಮಕ ಮತ್ತು ರಾಜತಾಂತ್ರಿಕ ಬೆಂಬಲವನ್ನು ಮುಂದುವರಿಸಿದೆ ಎಂದು ತೈವಾನ್ ಕೃತಜ್ಞತೆ ಸಲ್ಲಿಸಿದೆ.

ಚೀನಾ ತೈವಾನ್ ಅನ್ನು ತನ್ನದೇ ಒಂದು ಪ್ರಾಂತ್ಯವೆಂದು ಪರಿಗಣಿಸುತ್ತದೆ. ತೈವಾನ್ ತನ್ನನ್ನು ತಾನು ರಿಪಬ್ಲಿಕ್ ಆಫ್ ಚೀನಾ (ROC) ಎಂದು ಕರೆದುಕೊಳ್ಳುತ್ತದೆ. ಆದರೆ ಚೀನಾ ಇದನ್ನು ಒಪ್ಪುವುದಿಲ್ಲ.

[ad_2]

Source link publictv.in

Leave a Reply

Your email address will not be published. Required fields are marked *