Advertisement

ಕೇರಳ ರಾಜ್ಯದ 13ನೇ ಮುಖ್ಯಮಂತ್ರಿಯಾಗಿ ವಿ.ಡಿ ಸತೀಶನ್ ಆಯ್ಕೆ

[ad_1]

ತಿರುವನಂತಪುರ : ಈ ಬಾರಿಯ ಕೇರಳ ವಿಧಾನ ಸಭೆಯಲ್ಲಿ ಬಹುಮತ ಗಳಿಸಿಕೊಂಡು ಅಧಿಕಾರಕ್ಕೆ ಬಂದ ಐಕ್ಯರಂಗ ಬಹು ಸಮಯದ ಚರ್ಚೆಯ ಬಳಿಕ ಮುಖ್ಯಮಂತ್ರಿ ಆಯ್ಕೆ ಹೈಕಮಾಂಡ್ ನಡೆಸಿ ಕಳೆದ ವಿಪಕ್ಷ ನಾಯಕ ವಿ.ಡಿ.ಸತೀಶರನ್ನು 13ನೇ ಮುಖ್ಯಮಂತ್ರಿಯಾಗಿ ಘೋಷಿಸಿದೆ. ಎಐಸಿಸಿ ಪ್ರಮುಖರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿ ನಡೆದ ಆಯ್ಕೆ ಕ್ರಮದ ಬಳಿಕ ಇಂದು ಮಧ್ಯಾಹ್ನ 12 ಗಂಟೆಗೆ ದೆಹಲಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ದೀಪಾದಾಸ್ ಮುನ್ನಿ ನೂತನ ಮುಖ್ಯ ಮಂತ್ರಿಯನ್ನು ಘೋಷಿಸಿದರು. ಜಯರಾಮ್ ರಮೇಶ್ ಮೊದಲಾದ ನೇತಾರರು ಘೋಷ್ಠಿಯಲ್ಲಿದ್ದರು.

ಕೇರಳದಲ್ಲಿ ಐಕ್ಯರಂಗ ಬಹುಮತ ಸಾಬೀತುಗೊಂಡ ಬಳಿಕ ಕೆ.ಸಿ.ವೇಣುಗೋಪಾಲ್, ವಿ.ಡಿ.ಸತೀಶನ್, ರಮೇಶ್ ಚೆನ್ನಿತ್ತಲ ಎಂಬ ಮೂವರು ಪ್ರಮುಖ ನಾಯಕರ ಹೆಸರು ಮುಖ್ಯಮಂತ್ರಿ ಗಾದಿಗೆ ಸೂಚಿತವಾಗಿತ್ತು. ಅದರಲ್ಲೂ ಕೆ.ಸಿ.ವೇಣುಗೋಪಾಲ್ ಗೆ ಶಾಸಕರ ಹೆಚ್ಚಿನ ಬೆಂಬಲ ಕಂಡು ಬಂದಿತ್ತು. ಬಳಿಕ ವಿ.ಡಿ.ಸತೀಶನ್ ಬೆಂಬಲಿಗರು ಮುಖ್ಯಮಂತ್ರಿ ಪದವಿ ಆಗ್ರಹಿಸಿ ಬೀದಿಗಿಳಿದಿದ್ದು ಇದೀಗ ನಾಟಕೀಯ ಸನ್ನಿವೇಶಕ್ಕೆ ಅಂತಿಮ ತೆರೆ ಬಿದ್ದು ಮುಖ್ಯಮಂತ್ರಿ ಪದವಿಗೆ ವಿ.ಡಿ.ಸತೀಶನ್ ಅವರ ಹೆಸರು ಘೋಷಣೆಯಾಗಿದೆ.



[ad_2]

Source link

Leave a Reply

Your email address will not be published. Required fields are marked *