Advertisement

ವಾರದಲ್ಲಿ 2 ದಿನ Work From Home ಕಡ್ಡಾಯ – ದೆಹಲಿ ಸಿಎಂ ರೇಖಾ ಗುಪ್ತಾ ಆದೇಶ

[ad_1]

Rekha Gupta

ನವದೆಹಲಿ: ಪ್ರಧಾನಿ ಮೋದಿ ಮಿತವ್ಯಯ ಕರೆ ಬೆನ್ನಲ್ಲೇ ದೆಹಲಿ ಸಿಎಂ ರೇಖಾ ಗುಪ್ತಾ (CM Rekha Gupta) ರಾಜ್ಯದ ಸರ್ಕಾರಿ ಉದ್ಯೋಗಿಗಳಿಗೆ ವಾರದಲ್ಲಿ 2 ದಿನ ವರ್ಕ್ ಫ್ರಂ ಹೋಮ್ (Work From Home) ಕೆಲಸ ಮಾಡಲು ಆದೇಶಿಸಿದ್ದಾರೆ.

ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ರಕ್ಷಿಸುವ ಸಲುವಾಗಿ, ಅನಗತ್ಯ ಇಂಧನ ಬಳಕೆ ಕಡಿಮೆ ಮಾಡಲು ಹಾಗೂ 1 ವರ್ಷಗಳ ಕಾಲ ಚಿನ್ನ ಖರೀದಿಯನ್ನು ಮುಂದೂಡುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಯನ್ನು ಪಾಲಿಸಲು ಬಿಜೆಪಿ ಸರ್ಕಾರ ಆಡಳಿತವಿರುವ ರಾಜ್ಯಗಳು ದಿಟ್ಟ ಹೆಜ್ಜೆ ಇಟ್ಟಿದೆ. ದೆಹಲಿ ಸಿಎಂ ರೇಖಾ ಗುಪ್ತಾ, `ನನ್ನ ಭಾರತ, ನನ್ನ ಕೊಡುಗೆ’ (ಮೇರಾ ಭಾರತ್ ಮೇರಾ ಯೋಗಧಾನ್) ಅಭಿಯಾನದಡಿ ನಾಳೆಯಿಂದ (ಮೇ 15) ಜಾರಿಗೆ ಬರುವಂತೆ ಸರ್ಕಾರಿ ನೌಕರರಿಗೆ ಹೊಸದೊಂದು ನಿಯಮಾವಳಿ ಜಾರಿಗೊಳಿಸಿದ್ದಾರೆ. ಅದರಂತೆ ವಾರದಲ್ಲಿ 2 ದಿನ ವರ್ಕ್ ಫ್ರಂ ಹೋಮ್ ಆದೇಶಿಸಿದ್ದಾರೆ. ಇದನ್ನೂ ಓದಿ: ಮೋದಿ ಮಿತವ್ಯಯ ಕರೆ ಬೆನ್ನಲ್ಲೇ ಕಾರು ಬಿಟ್ಟು ಬುಲೆಟ್‌ ಏರಿ ವಿಧಾನ ಭವನಕ್ಕೆ ಬಂದ ಫಡ್ನವೀಸ್

ಸರ್ಕಾರಿ ನೌಕರಿಗೆ ಹೊಸ ರೂಲ್ಸ್‌ಗಳೇನು?
> ವಾರದಲ್ಲಿ 2 ದಿನ `ವರ್ಕ್ ಫ್ರಮ್ ಹೋಮ್’
> ವಾರದಲ್ಲಿ ಒಂದು ದಿನ ಮೆಟ್ರೋ ರೈಲಲ್ಲಿ ಸಂಚಾರ ಕಡ್ಡಾಯ
> ಶೇ.50ರಷ್ಟು ಸರ್ಕಾರಿ ಸಭೆಗಳು ಆನ್‌ಲೈನ್ ಮೂಲಕ
> ಮುಂದಿನ 6 ತಿಂಗಳು ಹೊಸ ವಾಹನ ಖರೀದಿ ಇಲ್ಲ(ಪೆಟ್ರೋಲ್, ಡೀಸೆಲ್, ಎಲೆಕ್ಟಿçಕ್ ಹೊಸ ವಾಹನ ಖರೀದಿ ಇಲ್ಲ)
> ಅಧಿಕಾರಿಗಳ ಪೆಟ್ರೋಲ್ ಮಿತಿಯಲ್ಲಿ ಶೇ.20ರಷ್ಟು ಕಡಿತ (200 ಲೀಟರ್ ಕೊಡ್ತಿದ್ದರು)
> ಅಧಿಕಾರಿಗಳ ವಿದೇಶಿ ಪ್ರವಾಸ ರದ್ದು
> ಸರ್ಕಾರಿ ನೌಕರರ ಕಾಲೋನಿಗೆ 58 ವಿಶೇಷ ಬಸ್‌ಗಳು

ಪ್ರತಿ ಸೋಮವಾರ ಎಲ್ಲಾ ಸಚಿವರು, ಅಧಿಕಾರಿಗಳು ಮತ್ತು ನೌಕರರು ಮೆಟ್ರೋದಲ್ಲಿ ಸಂಚರಿಸುವ ಮೂಲಕ `ಮಂಡೇ ಮೆಟ್ರೋ’ದಲ್ಲಿ ಪಾಲ್ಗೊಳ್ಳುತ್ತಾರೆ. ಪ್ರತಿ ವಾರದ ಒಂದು ದಿನ “ವಾಹನ ರಹಿತ ದಿನ”ವನ್ನು ಆಚರಿಸಲು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಮುಂದಿನ ಆರು ತಿಂಗಳವರೆಗೆ ಪೆಟ್ರೋಲ್, ಡೀಸೆಲ್ ಅಥವಾ ವಿದ್ಯುತ್ ಹೊಸ ವಾಹನ ಖರೀದಿ ಇರುವುದಿಲ್ಲ. ಜೊತೆಗೆ ನೌಕರರಿಗೆ ಸಾರಿಗೆ ಭತ್ಯೆಯನ್ನು 10% ಹೆಚ್ಚಿಸಲಾಗುವುದು. ಇನ್ನೂ ಅಧಿಕಾರಿಗಳ ವಿದೇಶಿ ಪ್ರಯಾಣದ ಮೇಲೂ ನಿಷೇಧ ಹೇರಲಾಗಿದೆ. ದೆಹಲಿ ಸರ್ಕಾರದ ಯಾವುದೇ ಸಚಿವರು ಅಥವಾ ಅಧಿಕಾರಿಗಳು ಮುಂದಿನ ಒಂದು ವರ್ಷ ಯಾವುದೇ ಅಧಿಕೃತ ವಿದೇಶ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂಧನ ಉಳಿತಾಯಕ್ಕೆ ಕ್ರಮ – ಮೋದಿ ಭದ್ರತಾ ವಾಹನಗಳ ಸಂಖ್ಯೆಯಲ್ಲಿ 50% ಕಡಿತ



[ad_2]

Source link publictv.in

Leave a Reply

Your email address will not be published. Required fields are marked *