Advertisement

ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ಮುಂಬೈ – ಪಂಜಾಬ್‌ ವಿರುದ್ಧ ವಿಜಯ ʻತಿಲಕʼ

[ad_1]

Tilak Varma

– ಪಂಜಾಬ್‌ಗೆ ಪಂಚ ಸೋಲು – ಪ್ಲೇ ಆಫ್ಸ್‌ ಹಾದಿ ಕಠಿಣ

ಧರ್ಮಶಾಲಾ: ತಿಲಕ್‌ ವರ್ಮಾ‌ ಅಮೋಘ ಅರ್ಧಶತಕ ಹಾಗೂ ವಿಲ್‌ ಜಾಕ್ಸ್‌ ಸಿಕ್ಸರ್‌ ಬೌಂಡರಿ ಬ್ಯಾಟಿಂಗ್‌ ನೆರವಿನಿಂದ ಮುಂಬೈ ಇಂಡಿಯನ್ಸ್‌ ತಂಡವು ಪಂಜಾಬ್‌ ಕಿಂಗ್ಸ್‌ ವಿರುದ್ಧ 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ‌ಕೊನೆಯವರೆಗೂ ಜಿದ್ದಾಜಿದ್ದಿಯಿಂದ ಕೂಡಿದ್ದ ಅಖಾಡದಲ್ಲಿ ಮುಂಬೈ ಗೆದ್ದು ಬೀಗಿದೆ.

ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್‌ 12 ರಲ್ಲಿ 4 ಪಂದ್ಯಗಳನ್ನ ಗೆದ್ದು 9ನೇ ಸ್ಥಾನದಲ್ಲೇ ಮುಂದುವರಿದರೆ, ವಿರೋಚಿತ ಹಾಗೂ ಸತತ 5ನೇ ಸೋಲು ಕಂಡ ಪಂಜಾಬ್‌ ಕಿಂಗ್ಸ್‌ ತಂಡ 4ನೇ ಸ್ಥಾನದಲ್ಲಿದ್ದರೂ ಪ್ಲೇ ಆಫ್‌ ಹಾದಿಯನ್ನ ಕಠಿಣವಾಗಿಸಿಕೊಂಡಿದೆ. ಏಕೆಂದ್ರೆ ತಲಾ 11 ಪಂದ್ಯಗಳನ್ನಾಡಿ 6 ರಲ್ಲಿ ಗೆಲುವು ಸಾಧಿಸಿರುವ ರಾಜಸ್ಥಾನ್‌ ರಾಯಲ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ಪಂಜಾಬ್‌ಗೆ ಪೈಪೋಟಿ ನೀಡುವ ಸಾಧ್ಯತೆ ಇವೆ.

Mumbai Indians

ಗೆಲುವಿಗೆ ಟರ್ನಿಂಗ್‌ ಸಿಕ್ಕಿದ್ದೆಲ್ಲಿ?
15 ಓವರ್‌ ಕಳೆದರೂ 3 ವಿಕೆಟ್‌ ಕಳೆದುಕೊಂಡು 129 ರನ್‌ ಗಳಿಸಿದ್ದ ಮುಂಬೈ ಗುರಿ ತಲುಪುವುದು ಕಷ್ಟಸಾಧ್ಯವೆಂದೇ ಭಾವಿಸಲಾಗಿತ್ತು. ಆದ್ರೆ 16ನೇ ಓವರ್‌ ನಲ್ಲಿ ಬೌಲಿಂಗ್‌ ಮಾಡಿದ ಯುಜುವೇಂದ್ರ ಚಾಹಲ್‌ ಒಂದೇ ಓವರ್‌ನಲ್ಲಿ ಬರೋಬ್ಬರಿ 20 ರನ್‌ ಚಚ್ಚಿಸಿಕೊಂಡರು. ಇದು ಸಾಲದಂತ ಮಾರ್ಕೋ ಜಾನ್ಸೆನ್‌ 18ನೇ ಓವರ್‌ನಲ್ಲಿ 22 ರನ್‌ ಚಚ್ಚಿಸಿಕೊಂಡರು. ಇದು ಮುಂಬೈ ತಂಡದ ಗೆಲುವಿಗೆ ಬಹುದೊಡ್ಡ ಟರ್ನಿಂಗ್‌ ಕೊಟ್ಟಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ ನಿಗದಿತ 20 ಓವರ್‌ಗಳಲ್ಲಿ 200 ರನ್‌ ಗಳಿಸಿತ್ತು. 201 ರನ್‌ಗಳ ಬೃಹತ್‌ ಗುರಿ ಬೆನ್ನಟ್ಟಿದ ಮುಂಬೈ 19.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 205 ರನ್‌ ಬಾರಿಸಿ ಗೆಲುವು ಸಾಧಿಸಿತು.

201 ರನ್‌ಗಳ ಬೃಹತ್‌ ಚೇಸಿಂಗ್‌ ಆರಂಭಿಸಿದ ಮುಂಬೈ 9.3 ಓವರ್‌ಗಳಲ್ಲಿ 88 ರನ್‌ ಗಳಿಸಿದ್ದರೂ, ಪ್ರಮುಖ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ 4ನೇ ವಿಕೆಟ್‌ಗೆ ಜೊತೆಯಾದ ತಿಲಕ್‌ ವರ್ಮಾ ಹಾಗೂ ಶೆರ್ಫೇನ್ ರುದರ್ಫೋರ್ಡ್ ಜೋಡಿ ಉತ್ತಮ ಇನ್ನಿಂಗ್ಸ್‌ ಕಟ್ಟಲು ಪ್ರಯತ್ನಿಸಿದರೂ ನಿಧಾನಗತಿಯ ಬ್ಯಾಟಿಂಗ್‌ ತಂಡವನ್ನು ಸೋಲಿನ ಸುಳಿಗೆ ತಳ್ಳುತ್ತಲೇ ಸಾಗಿತು. ಆದ್ರೆ ಡೆತ್‌ ಓವರ್‌ನಲ್ಲಿ ಬ್ಯಾಟಿಂಗ್‌ ವೇಗ ಬದಲಿಸಿದ ತಿಲಕ್‌ ವರ್ಮಾ ಪಂಬಾಜ್‌ ಬೌಲರ್‌ಗಳನ್ನು ಚೆಂಡಾಡಿದರು.

Mi vs PBKS

ತಿಲಕ್‌ ಅಬ್ಬರದ ಫಿಫ್ಟಿ
ನಿಧಾನಗತಿಯ ಬ್ಯಾಟಿಂಗ್‌ ಆರಂಭಿಸಿದರೂ, ಕೊನೆಯಲ್ಲಿ ಅಬ್ಬರಿಸಿದ ತಿಲಕ್‌ ಕೊನೆಯವರೆಗೂ ಅಜೇಯರಾಗಿ ಕ್ರೀಸ್‌ನಲ್ಲಿ ಉಳಿದರು. 227.27 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ತಿಲಕ್‌ 33 ಎಸೆತಗಳಲ್ಲಿ 75 ರನ್‌ (6 ಸಿಕ್ಸರ್‌, 6 ಬೌಂಡರಿ) ಚಚ್ಚಿದ್ರೆ, ವಿಲ್‌ ಜಾಕ್ಸ್‌ 10 ಎಸೆತಗಳಲ್ಲಿ ಸ್ಫೋಟಕ 25 ರನ್‌, ರಯಾನ್ ರಿಕೆಲ್ಟನ್ 23 ಎಸೆತಗಳಲ್ಲಿ 48 ರನ್‌, ರುದರ್ಫೋರ್ಡ್ 20 ರನ್‌, ರೋಹಿತ್‌ ಶೃಮಾ 25 ರನ್‌ ನಮನ್‌ ಧೀರ್‌ 9 ರನ್‌ ಕೊಡುಗೆ ನೀಡಿದರು.

ಇದಕ್ಕೂ ಮುನ್ನ ಬ್ಯಾಟ್‌ ಬೀಸಿದ ಪಂಜಾಬ್‌ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 200 ರನ್‌ ಗಳಿಸಿತ್ತು. ಆರಂಭದಲ್ಲಿ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಪಂಜಾಬ್‌ಗೆ ಪ್ರಭ್‌ ಸಿಮ್ರನ್‌ ಸಿಂಗ್‌, ಅಜ್ಮತುಲ್ಲಾ ಒಮರ್ಜೈ ಆಸರೆಯಾದರು. ಪ್ರಭ್‌ಸಿಮ್ರನ್‌ 32 ಎಸೆತಗಳಲ್ಲಿ 57 ರನ್‌ ಚಚ್ಚಿದ್ರೆ, ಅಜ್ಮತುಲ್ಲಾ ಒಮರ್ಜೈ 17 ಎಸೆತಗಳಲ್ಲಿ 38 ರನ್‌ ಬಾರಿಸಿದ್ರು. ಇನ್ನೂ ಪ್ರಿಯಾಂಶ್‌ ಆರ್ಯ 22 ರನ್‌, ಕೂಪರ್‌ ಕೊನೊಲಿ 21 ರನ್‌ ಗಳಿಸಿದ್ದು ಬಿಟ್ಟರೆ ಉಳಿದೆಲ್ಲರೂ ಅಲ್ಪಮೊತ್ತಕ್ಕೆ ಔಟಾದರು.

[ad_2]

Source link publictv.in

Leave a Reply

Your email address will not be published. Required fields are marked *