Advertisement

ಅಮೆರಿಕದಲ್ಲೇ ಮೊಬೈಲ್‌ ಬಿಟ್ಟು ಚೀನಾದಲ್ಲಿ ಬರ್ನರ್‌ ಫೋನ್‌ ಬಳಸಿದ ಉದ್ಯಮಿಗಳು – ಏನಿದು ಡಿಜಿಟಲ್‌ ಲಾಕ್‌ಡೌನ್‌?

[ad_1]

Trump officials stripped of all tech devices for China visit and given burner phones

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರೊಂದಿಗೆ ಚೀನಾಕ್ಕೆ ಭೇಟಿ ನೀಡಿದ ಉದ್ಯಮಿಗಳು ಮತ್ತು ಸರ್ಕಾರದ ಅಧಿಕಾರಿಗಳು ಚೈನಾದ (China) ಸೈಬರ್ ಕಣ್ಗಾವಲು ಹಾಗೂ ಹ್ಯಾಕಿಂಗ್‌ನಿಂದ ತಪ್ಪಿಸಿಕೊಳ್ಳಲು ಡಿಜಿಟಲ್ ಲಾಕ್‌ಡೌನ್ (Digital Lockdown) ಮೊರೆ ಹೋಗಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

ಚೀನಾದಲ್ಲಿ ಸೈಬರ್ ಕಣ್ಗಾವಲು ಮತ್ತು ಹ್ಯಾಕಿಂಗ್ ಭೀತಿ ಇರುವುದರಿಂದ ಆಪಲ್ (Apple) ಟಿಮ್ ಕುಕ್, ಎನ್‌ವಿಡಿಯಾ (Nvidia) ಜೆನ್ಸನ್ ಹುವಾಂಗ್, ಮತ್ತು ಟೆಸ್ಲಾ (Tesla) ಎಲೋನ್ ಮಸ್ಕ್ ಸೇರಿದಂತೆ ಉದ್ಯಮಿಗಳು ತಮ್ಮ ಸಾಮಾನ್ಯ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಅಮೆರಿಕದಲ್ಲೇ ಬಿಟ್ಟು ಬಂದಿದ್ದಾರೆ ಎಂದು ವರದಿಯಾಗಿದೆ.

ಪ್ರವಾಸದ ಅವಧಿಗಾಗಿ ಇವರಿಗೆ ಸೀಮಿತ ಸಾಫ್ಟ್‌ವೇರ್ ಹೊಂದಿರುವ ತಾತ್ಕಾಲಿಕ ಕ್ಲೀನ್ ಫೋನ್‌ಗಳನ್ನು (Burner Phones) ಮತ್ತು ಸುರಕ್ಷಿತ ಸಂವಹನ ವ್ಯವಸ್ಥೆಗಳನ್ನು ಒದಗಿಸಲಾಗಿದೆ. ಹೋಟೆಲ್‌ಗಳ ಸಾರ್ವಜನಿಕ ವೈ-ಫೈ (Wi-Fi) ಸಂಪರ್ಕಗಳು ಮತ್ತು ಸಾರ್ವಜನಿಕ ಯುಎಸ್‌ಬಿ (USB) ಚಾರ್ಜಿಂಗ್ ಪೋರ್ಟ್‌ಗಳನ್ನು ಬಳಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಚೀನಾದ ಹೋಟೆಲ್‌ಗಳು, ವಿಮಾನ ನಿಲ್ದಾಣಗಳು ಅಥವಾ ಸರ್ಕಾರಿ ಕಚೇರಿಗಳ ಯಾವುದೇ ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗೆ ಸಂಪರ್ಕಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಕಮ್ಯುನಿಕೇಶನ್ ಸಚಿವಾಲಯವು ಒದಗಿಸಿದ ಎನ್‌ಕ್ರಿಪ್ಟ್ ಮಾಡಿದ ಸ್ಯಾಟಲೈಟ್ ಲಿಂಕ್‌ಗಳು ಮತ್ತು ಕಟ್ಟುನಿಟ್ಟಾದ ಸರ್ಕಾರಿ ವಿಪಿಎನ್ (VPN) ಗಳ ಮೂಲಕ ಮಾತ್ರ ಇಂಟರ್ನೆಟ್ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.  ಇದನ್ನೂ ಓದಿ: ಟ್ರಂಪ್‌ ಮುಂದೆಯೇ ರೆಡ್‌ಲೈನ್‌ ಎಳೆದು `ಬೆಂಕಿʼ ವಾರ್ನಿಂಗ್‌ ಕೊಟ್ಟ ಕ್ಸಿ ಜಿನ್‌ಪಿಂಗ್‌

Trump 2

ಜ್ಯೂಸ್ ಜ್ಯಾಕಿಂಗ್ (ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಹೋಟೆಲ್ ಅಥವಾ ಮಾಲ್‌ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಯುಎಸ್‌ಬಿ (USB) ಚಾರ್ಜಿಂಗ್ ಪೋರ್ಟ್‌ಗಳ ಮೂಲಕ ನಡೆಯುವ ಒಂದು ಅಪಾಯಕಾರಿ ಸೈಬರ್ ದಾಳಿ) ತಡೆಯಲು ಚಾರ್ಜಿಂಗ್ ಸ್ಟೇಷನ್‌ಗಳ ಬಳಕೆಯನ್ನು ನಿಷೇಧಿಸಲಾಗಿದೆ. ಉದ್ಯಮಿಗಳು ಕೇವಲ ಅಮೆರಿಕದಿಂದಲೇ ತಂದಿರುವ ತಮ್ಮ ಪೋರ್ಟಬಲ್ ಪವರ್ ಬ್ಯಾಂಕ್‌ಗಳನ್ನು ಮಾತ್ರ ಬಳಸುತ್ತಿದ್ದಾರೆ.

ಫೋನ್‌ಗಳಲ್ಲಿ ಯಾವುದೇ ಪ್ರಮುಖ ಕಂಪನಿ ಫೈಲ್‌ಗಳು ಅಥವಾ ರಹಸ್ಯ ದಾಖಲೆಗಳನ್ನು ಡೌನ್‌ಲೋಡ್ ಮಾಡಲು ಅನುಮತಿ ಇರಲಿಲ್ಲ. ಫಿಂಗರ್‌ಪ್ರಿಂಟ್ ಅಥವಾ ಫೇಸ್ ಐಡಿ ಲಾಗ್‌ಗಳನ್ನು ಚೀನಾ ಸರ್ವರ್‌ಗಳು ಕದಿಯದಂತೆ ತಡೆಯಲು ಪಾಸ್‌ಕೋಡ್‌ಗಳನ್ನು ಮಾತ್ರ ಬಳಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭರ್ಜರಿ ಸ್ವಾಗತ ಸಿಕ್ಕಿದ ಬೆನ್ನಲ್ಲೇ ಚೀನಾವನ್ನು ಹಾಡಿ ಹೊಗಳಿದ ಟ್ರಂಪ್‌

ಏನಿದು ಬರ್ನರ್‌ ಫೋನ್‌?
ತಾತ್ಕಾಲಿಕವಾಗಿ ಬಳಸಿ, ನಂತರ ಎಸೆದುಬಿಡಬಹುದಾದ ಸಣ್ಣ ಮತ್ತು ಅಗ್ಗದ ಮೊಬೈಲ್ ಫೋನ್‌ಗಳನ್ನು ಬರ್ನರ್‌ ಫೋನ್‌ ಎಂದು ಕರೆಯಲಾಗುತ್ತದೆ. ಇವು ಸಾಮಾನ್ಯವಾಗಿ ಅತ್ಯಂತ ಅಗ್ಗದ ಪ್ರಿಪೇಯ್ಡ್ ಫೀಚರ್ (ಕೀಪ್ಯಾಡ್) ಫೋನ್‌ಗಳಾಗಿರುತ್ತವೆ.

ಈ ಫೋನ್‌ಗಳಲ್ಲಿ ತಾತ್ಕಾಲಿಕ ಪ್ರಿಪೇಯ್ಡ್ ಸಿಮ್ ಕಾರ್ಡ್‌ಗಳನ್ನು ಬಳಸಲಾಗುತ್ತದೆ. ಇವುಗಳಲ್ಲಿ ಸ್ಮಾರ್ಟ್‌ಫೋನ್ ತರಹದ ಸುಧಾರಿತ ಫೀಚರ್‌ಗಳು ಇರುವುದಿಲ್ಲ. ಕೇವಲ ಕರೆ ಮಾಡಲು ಮತ್ತು ಎಸ್‌ಎಂಎಸ್ ಕಳುಹಿಸಲು ಮಾತ್ರ ಬಳಕೆಯಾಗುತ್ತವೆ.

[ad_2]

Source link publictv.in

Leave a Reply

Your email address will not be published. Required fields are marked *