[ad_1]

ವಿಜಯಪುರ: ಭಾರೀ ಗಾಳಿ ಮಳೆಗೆ (Rain) ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ಆಲಮೇಲ (Alamela) ತಾಲೂಕಿನ ಮೊರಗಟಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಗ್ರಾಮದ ಗುರುನಾಥ ಬಡಿಗೇರ (35), ಜ್ಯೋತಿ ಬಡಿಗೇರ (28), ಕಾಳಮ್ಮ ಬಡಿಗೇರ (13) ಮತ್ತು ಕೀರ್ತಿ ಬಡಿಗೇರ (9) ಎಂದು ಗುರುತಿಸಲಾಗಿದೆ. ತಮ್ಮ ಮನೆಯ ದುರಸ್ಥಿ ಮಾಡಿಸುತ್ತಿದ್ದ ಗುರುನಾಥ ಬಡಿಗೇರ, ಹಳೆಯ ಮನೆಯೊಂದರಲ್ಲಿ ಬಾಡಿಗೆಗೆ ಇದ್ದರು. ಗುರುವಾರ ರಾತ್ರಿ ಸುರಿದ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದು, ಈ ದುರಂತ ಸಂಭವಿಸಿದೆ. ಇದನ್ನೂ ಓದಿ: ಬಿರುಗಾಳಿಗೆ ತರಗೆಲೆಯಂತೆ 50 ಅಡಿ ಎತ್ತರಕ್ಕೆ ಹಾರಿದ ವೃದ್ಧ – ವಿಡಿಯೋ ವೈರಲ್
ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ನಾಲ್ವರ ಶವ ಹೊರ ತೆಗೆಯಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಾಲ್ವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಮಳೆ ಅವಾಂತರ; 104ಕ್ಕೇರಿದ ಸಾವಿನ ಸಂಖ್ಯೆ – ಪ್ರಯಾಗ್‌ರಾಜ್‌ನಲ್ಲೇ ಅತ್ಯಧಿಕ 21 ಜನ ಬಲಿ
[ad_2]
Source link publictv.in

















Leave a Reply