Advertisement

ಒಂದೇ ಕುಟುಂಬದ ಐವರಿಗೆ ಮೆಡಿಕಲ್ ಸೀಟ್ – ಸಿಬಿಐಗೆ ಸಿಕ್ತು ಮಹತ್ವದ ಸುಳಿವು

[ad_1]

NEET 02

– ಹಲವು ವರ್ಷಗಳಿಂದ ಪ್ರಶ್ನೆ ಪತ್ರಿಕೆ ಸೋರಿಕೆ

ಜೈಪುರ: ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯಲ್ಲಿ ಹೊಸ ಮಾಹಿತಿಗಳು ಹೊರಬರುತ್ತಿವೆ. ರಾಜಸ್ಥಾನದ ಒಂದೇ ಕುಟುಂಬದ ಐವರು ವೈದ್ಯಕೀಯ ಸೀಟ್ ಪಡೆದಿರುವುದು ಇದೀಗ ಅನುಮಾನಕ್ಕೆ ಕಾರಣವಾಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಜಾಲದ ಸಂಪರ್ಕ ಇದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

ಸಿಬಿಐ ಮಾಹಿತಿ ಪ್ರಕಾರ, ಜೈಪುರ ಗ್ರಾಮೀಣ ಪ್ರದೇಶದ ಜಮ್ಮರಾಮಗಢದ ಒಂದೇ ಕುಟುಂಬದ ಐವರು ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ. ದಿನೇಶ್ ಅವರ ಮಗಳು ಗುಂಜನ್ ಬನಾರಸ್ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದಿದ್ದರೆ, ಕುಟುಂಬದ ಇತರ ಸದಸ್ಯರಾದ ಸೋನಿಯಾ, ಪ್ರಕೃತಿ ಮತ್ತು ವಿಕಾಸ್ ಕೂಡ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಓದುತ್ತಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ರೆ ಏನು ಶಿಕ್ಷೆ

ತನಿಖೆಯಲ್ಲಿ ಈ ಪ್ರಶ್ನೆಪತ್ರಿಕೆ ಸೋರಿಕೆ ಜಾಲ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶಂಕೆ ವ್ಯಕ್ತವಾಗಿದೆ. ಮಹಾರಾಷ್ಟ್ರ, ಹರಿಯಾಣ ಮತ್ತು ರಾಜಸ್ಥಾನವನ್ನು ಸಂಪರ್ಕಿಸುವ ದೊಡ್ಡ ಜಾಲದ ಸುಳಿವು ಸಿಬಿಐಗೆ ಲಭ್ಯವಾಗಿದೆ ಎನ್ನಲಾಗಿದೆ.

ಪರೀಕ್ಷೆಗೆ ಮುನ್ನವೇ ಪ್ರಶ್ನೆಪತ್ರಿಕೆ ದೊರೆಯುತ್ತದೆ ಎಂದು ಭರವಸೆ ನೀಡಿ, ಹಣ ಪಡೆದು ಪ್ರಶ್ನೆಪತ್ರಿಕೆ ಹಂಚಿಕೆ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಪರೀಕ್ಷೆಗೆ ಸುಮಾರು 15 ಗಂಟೆಗಳ ಮೊದಲು ಕೆಲವು ವಿದ್ಯಾರ್ಥಿಗಳ ಕೈಗೆ ಪ್ರಶ್ನೆಪತ್ರಿಕೆ ತಲುಪಿದ್ದ ಮಾಹಿತಿ ತನಿಖೆಗೆ ಮತ್ತಷ್ಟು ವೇಗ ನೀಡಿದೆ.ಇದನ್ನೂ ಓದಿ: ಪರೀಕ್ಷೆ ನಡೆಯುವ 45 ಗಂಟೆ ಮುಂಚೆಯೇ ಪ್ರಶ್ನೆಪತ್ರಿಕೆ ಸೋರಿಕೆ – ಹಗರಣದಲ್ಲಿ ಬಯಲಾಯ್ತು ಅಚ್ಚರಿಯ ಸತ್ಯ!

[ad_2]

Source link publictv.in

Leave a Reply

Your email address will not be published. Required fields are marked *