Advertisement

ತಂದೆ, ಆತನ ಸ್ನೇಹಿತನಿಂದಲೇ ಅಪ್ರಾಪ್ತ ಮಗಳ ಮೇಲೆ ಎರಡು ವರ್ಷ ನಿರಂತರ ಅತ್ಯಾಚಾರ

[ad_1]

CRIME 2

ಇಬ್ಬರು ಅರೆಸ್ಟ್‌

ರಾಯಚೂರು: ತಂದೆ ಮತ್ತು ಆತನ ಸ್ನೇಹಿತನಿಂದಲೇ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆದಿರುವ ಅಮಾನವೀಯ ಘಟನೆ ರಾಯಚೂರು (Raichuru) ಜಿಲ್ಲೆಯ ಲಿಂಗಸುಗೂರು (Lingasuguru) ಪಟ್ಟಣದಲ್ಲಿ ನಡೆದಿದೆ.

ಸಂತ್ರಸ್ತೆಯ ತಂದೆ ಅಮರೇಶ್ ಹಾಗೂ ಸ್ನೇಹಿತ ಸೀನು ಬಂಧಿತ ಆರೋಪಿಗಳು. ಎರಡು ವರ್ಷಗಳಿಂದ ಅಪ್ರಾಪ್ತೆ ಮೇಲೆ ಇಬ್ಬರು ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ಇದನ್ನೂ ಓದಿ: ಇಡೀ ಕುಟುಂಬಕ್ಕೆ ವಾರಕ್ಕೆ 500 ರೂ. ಸಂಬಳ, ಶೆಡ್‌ನಲ್ಲಿ ಕೂಡಿ ಹಾಕಿ ಕೆಲಸ – 37 ಮಂದಿ ಜೀತದಿಂದ ಮುಕ್ತಿ

ಸದ್ಯ ಬಾಲಕಿಯನ್ನು ರಕ್ಷಿಸಿ ಪೊಲೀಸರು ಸಾಂತ್ವಾನ ಕೇಂದ್ರಕ್ಕೆ ರವಾನಿಸಿದ್ದಾರೆ. ಸಾಂತ್ವಾನ ಕೇಂದ್ರದಲ್ಲಿ ತಂದೆ ಮತ್ತಾತನ ಸ್ನೇಹಿತನ ಕ್ರೂರತೆ ಬಗ್ಗೆ ಬಾಲಕಿ ಬಾಯ್ಬಿಟ್ಟಿದ್ದಾಳೆ. ಬಾಲಕಿ ಹೇಳಿಕೆ ಮೇರೆಗೆ ಅಪ್ರಾಪ್ತೆಯ ತಂದೆ ಹಾಗೂ ಆತನ ಸ್ನೇಹಿತನ ವಿರುದ್ಧ ಪೋಕ್ಸೋ ಹಾಗೂ ಅಟ್ರಾಸಿಟಿ ಕೇಸ್ ದಾಖಲಾಗಿದೆ.

ಇಬ್ಬರೂ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿರುವುದಾಗಿ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ತಿಳಿಸಿದ್ದಾರೆ.ಇದನ್ನೂ ಓದಿ: ಭಾರೀ ಗಾಳಿ ಮಳೆಗೆ ಮನೆ ಮೇಲ್ಛಾವಣಿ ಕುಸಿತ – ಒಂದೇ ಕುಟುಂಬದ ನಾಲ್ವರು ದುರ್ಮರಣ

[ad_2]

Source link publictv.in

Leave a Reply

Your email address will not be published. Required fields are marked *