Advertisement

ಇಂದು ಮಧ್ಯರಾತ್ರಿಯಿಂದ ಖಾಸಗಿ ಬಸ್ ಟಿಕೆಟ್ ದರ ಏರಿಕೆ | Public TV

[ad_1]

– ಪೆಟ್ರೋಲ್, ಡಿಸೇಲ್ ದರ ಏರಿಕೆ ಬೆನ್ನಲ್ಲೇ 20% ರಿಂದ 30% ಹೆಚ್ಚಳ

ಬೆಂಗಳೂರು: ಪೆಟ್ರೋಲ್, ಡಿಸೇಲ್ ದರ ಏರಿಕೆ ಬೆನ್ನಲ್ಲೇ ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಿದ್ದು, ಇಂದು ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ.

ಈ ಕುರಿತು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘ ಮಾಹಿತಿ ನೀಡಿದೆ. 20ರಿಂದ 30% ದರ ಏರಿಕೆ ಮಾಡಲಾಗಿದ್ದು, ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಪ್ರತಿದಿನ ಖಾಸಗಿ ಬಸ್ ಮಾಲೀಕರು ಕನಿಷ್ಠ 150 ಲೀಟರ್ ಆಯಿಲ್ ಹಾಕಿಸಿಕೊಳ್ಳಬೇಕು. ನಮಗೆ ಪ್ರತಿ ಟ್ರಿಪ್‌ಗೆ ಹೆಚ್ಚುವರಿಯಾಗಿ 450 ರೂ. ಅಂದರೆ ಹೊರೆ ಆಗಲಿದೆ. ಹೀಗಾಗಿ ಅನಿವಾರ್ಯವಾಗಿ ದರ ಏರಿಕೆ ಮಾಡುತ್ತಿದ್ದೇವೆ. ಇದರ ಪರಿಣಾಮ ಪ್ರಯಾಣಿಕರ ಮೇಲೆ ಬೀಳಲಿದೆ ಎಂದಿದೆ. ಇದನ್ನೂ ಓದಿ: ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ 47 ವನ್ಯಜೀವಿಗಳ ವಶ

ಇನ್ನೂ `ಪಬ್ಲಿಕ್ ಟಿವಿ’ ಜೊತೆ ಕರ್ನಾಟಕ ರಾಜ್ಯ ಖಾಸಗಿ ಶಾಲಾ ವಾಹನಗಳ ಯುನಿಯನ್ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಸ್ಕೂಲ್ ವಾಹನಗಳ ದರ 10% ವರೆಗೆ ಏರಿಕೆ ಮಾಡಿದ್ದಾಗಿ ತಿಳಿಸಿದ್ದಾರೆ. ಇದರ ಜೊತೆಗೆ ರಾಜ್ಯ ಟ್ರ್ಯಾವೆಲ್‌ ಪಾಸೆಂಜರ್ ವಾಹನಗಳ ದರವೂ 10%-15%ನಷ್ಟು ಏರಿಕೆಯಾಗಲಿದೆ.

ಒಲಾ, ಉಬರ್ ದರ ಏರಿಕೆಯ ಬಗ್ಗೆ ಚರ್ಚೆ ನಡೆಯುತ್ತಿದ್ದು, ಸೋಮವಾರ (ಮೇ 18) ಚಾಲಕರ ಸಂಘದಿಂದ ಸಭೆ ನಡೆಯಲಿದೆ. ಸಭೆಯ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಿದ್ಧತೆ ನಡೆದಿದ್ದು, ದರ ಏರಿಕೆಗೆ ಪ್ರಸ್ತಾವನೆಗೆ ಒತ್ತಡ ಹೇರಲು ತಯಾರಿ ನಡೆಸಿದೆ.ಇದನ್ನೂ ಓದಿ: KRS ಜಲಾಶಯ ನೀರಿನ ಮಟ್ಟ ಕುಸಿತ – 3 ವರ್ಷಗಳ ನಂತ್ರ ಪುರಾತನ ದೇವಾಲಯ ಗೋಚರ

[ad_2]

Source link publictv.in

Leave a Reply

Your email address will not be published. Required fields are marked *