Advertisement

ಆರ್‌ಜಿ ಕರ್ ರೇಪ್ & ಮರ್ಡರ್ ಕೇಸ್ ತನಿಖೆಯಲ್ಲಿ ನಿರ್ಲಕ್ಷ್ಯ – ಮೂವರು IPS ಅಧಿಕಾರಿಗಳು ಸಸ್ಪೆಂಡ್: ಸಿಎಂ

[ad_1]

SUVENDU ADHIKARI 1

ಕೋಲ್ಕತ್ತಾ: ಆರ್‌ಜಿ ಕರ್ ಕಾಲೇಜಿನಲ್ಲಿ ನಡೆದಿದ್ದ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ((RG Kar College Rape and Murder) ತನಿಖೆಯನ್ನು ಸರಿಯಾಗಿ ನಡೆಸದ ಮೂವರು ಐಪಿಎಸ್ ಅಧಿಕಾರಿಗಳನ್ನು ಸಿಎಂ ಸುವೇಂದು ಅಧಿಕಾರಿ (Suvendu Adhikari) ಅಮನಾತುಗೊಳಿಸಿದ್ದಾರೆ.

ನಬನ್ನಾದಲ್ಲಿ ಪ್ರತಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆರ್‌ಜಿ ಕರ್ ಕಾಲೇಜಿನಲ್ಲಿ ನಡೆದಿದ್ದ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ತನಿಖೆ ವೇಳೆ ಸಂತ್ರಸ್ತೆ ಕುಟುಂಬಕ್ಕೆ ಲಂಚ ಕೊಡಲು ಯತ್ನಿಸಿದ್ದಾರೆ. ಅಲ್ಲದೇ ಲಿಖಿತ ಅನುಮತಿ ಪಡೆಯದೇ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಈ ಹಿನ್ನೆಲೆ ಆಗಿನ ಕೋಲ್ಕತ್ತಾ ಪೊಲೀಸ್ ಆಯುಕ್ತ ವಿನೀತ್ ಗೋಯೆಲ್, ಅಭಿಷೇಕ್ ಗುಪ್ತಾ ಹಾಗೂ ಇಂದಿರಾ ಮುಖ್ಯೋಪಾಧ್ಯಾಯ ಮೂವರನ್ನು ಅಮಾನತುಗೊಳಿಸಿದ್ದಾರೆ. ಸದ್ಯ ರ ವಿರುದ್ಧ ಇಲಾಖಾ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪತಿ ರೂಮ್‌ಗೆ ಬರುತ್ತಿದ್ದಂತೆ ಕಾಲ್‌ ಕಟ್‌ – ನವವಿವಾಹಿತೆ ಅನುಮಾನಾಸ್ಪದ ಸಾವು

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಭಾರತೀಯ ಜನತಾ ಪಕ್ಷವು ಈ ವಿಷಯವನ್ನು ಕೆದಕಿ, ಸಂತ್ರಸ್ತೆಯ ತಾಯಿಗೆ ಪಾಣಿಹಟಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಿದ್ದರು. ಜೊತೆಗೆ ಆರ್‌ಜಿ ಕರ್ ಸಂತ್ರಸ್ತೆಗೆ ನ್ಯಾಯ ಒದಗಿಸುವುದು ಬಿಜೆಪಿಯ ಚುನಾವಣಾ ಪೂರ್ವ ಪ್ರಮುಖ ಭರವಸೆಗಳಲ್ಲಿ ಒಂದಾಗಿತ್ತು. ಅದರಂತೆ ರತ್ನ ದೇಬ್ನಾಥ್ ಅವರು ಟಿಎಂಸಿಯ ತೀರ್ಥಂಕರ ಘೋಷ್ ಅವರನ್ನು 28,836 ಮತಗಳ ಅಂತರದಿಂದ ಸೋಲಿಸಿದರು.


[ad_2]

Source link publictv.in

Leave a Reply

Your email address will not be published. Required fields are marked *