Advertisement

ರಾಜ್ಯದಲ್ಲೂ ʻSIR’ ಅಭಿಯಾನಕ್ಕೆ ದಿನಾಂಕ ಫಿಕ್ಸ್‌ – ಜೂ.30 ರಿಂದ ಮನೆ ಮನೆಗೆ ಭೇಟಿ

[ad_1]

voters list election

– ಅ.7 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ
– 5.55 ಕೋಟಿ ಮತದಾರರ ಪರಿಷ್ಕರಣೆಗೆ ಸಿದ್ಧತೆ

ಬೆಂಗಳೂರು: ಕರ್ನಾಟಕ (Karnataka) ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಎಸ್‌ಐಆರ್‌ಗೆ (SIR) (ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ) ದಿನಾಂಕ ಘೋಷಣೆ ಆಗಿದೆ. ಜೂನ್ 20ರಿಂದ ತರಬೇತಿ ಮತ್ತು ಮುದ್ರಣ ಕಾರ್ಯ ಶುರುವಾಗುತ್ತದೆ. ಜೂ.30 ರಿಂದ ಜು.29 ರ ವರೆಗೆ ಮನೆ ಮನೆಗೆ ಭೇಟಿ ನೀಡಿ ಪರಿಷ್ಕರಣೆ ನಡೆಸಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತರಾದ ಅನ್ಬುಕುಮಾರ್ ತಿಳಿಸಿದರು.

ಎಸ್‌ಐಆರ್ ಘೋಷಣೆ ಹಿನ್ನೆಲೆ ಕೆ.ಆರ್ ಸರ್ಕಲ್ ಬಳಿ ಇರುವ ಕೇಂದ್ರ ಚುನಾವಣಾ ಆಯೋಗದ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇದನ್ನೂ ಓದಿ: ಕರ್ನಾಟಕ ಸೇರಿದಂತೆ 16 ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಆದೇಶ

Election vote ink 3

ಈಗಾಗಲೇ ಎಸ್‌ಐಆರ್ ಗಾಗಿ ಮ್ಯಾಪ್ ಕಾರ್ಯ ಮಾಡಲಾಗಿದೆ. ಎಸ್‌ಐಆರ್‌ಗೆ ಈಗಾಗಲೇ ಚುನಾವಣಾ ಆಯೋಗ ದಿನಾಂಕ ಘೋಷಿಸಿದೆ. ಜೂನ್ 20ರಿಂದ ತರಬೇತಿ ಮತ್ತು ಮುದ್ರಣ ಕಾರ್ಯ ಶುರುವಾಗುತ್ತದೆ. ಜೂ.30 ರಿಂದ ಜು.29 ರ ವರೆಗೆ ಮನೆ ಮನೆಗೆ ಭೇಟಿ ನೀಡಿ ಪರಿಷ್ಕರಣೆ ಮಾಡಲಾಗುವುದು. ಮತದಾರರ ಪಟ್ಟಿಯಲ್ಲಿ ಸೇರಲು 18 ವರ್ಷ ಪೂರ್ಣವಾಗಿರಬೇಕು. ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸುವುದಾಗಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಮಾಹಿತಿ ನೀಡಿದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಮದ್ಯ ಖರೀದಿಗೆ 21 ವರ್ಷ ಕಡ್ಡಾಯ – ವಿಜಯ್ ಸರ್ಕಾರ ಆದೇಶ

5.55 ಕೋಟಿ ಮತದಾರರನ್ನ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಒಳಪಡಿಸಲಾಗುತ್ತೆ. ಎಸ್‌ಐಆರ್ ಫಾರಂನಲ್ಲಿ ಗಣತಿ ನಮೂನೆಯೇ ಅತ್ಯಂತ ಮುಖ್ಯ. ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿ 2 ಸೆಟ್ ಗಣತಿ ನಮೂನೆಗಳನ್ನ ತಲುಪಿಸಲಿದ್ದಾರೆ. ವಿಶೇಷವೆಂದರೆ, ಗಣತಿ ನಮೂನೆಯಲ್ಲಿರುವ ಪ್ರತಿ ಮತದಾರರಿಗೂ ಪ್ರತ್ಯೇಕ ಕ್ಯೂಆರ್ ಕೋಡ್ ಇರಲಿದೆ. ಬೂತ್ ಮಟ್ಟದ ಅಧಿಕಾರಿಗಳು ಗಣತಿ ನಮೂನೆಯನ್ನ ಮನೆಗೆ ತಂದಾಗ ಸಾರ್ವಜನಿಕರು ಅದರಲ್ಲಿ 1 ಸೆಟ್ ಅನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಅಧಿಕಾರಿಗಳಿಗೆ ಮರಳಿ ನೀಡಬೇಕು. ಮತ್ತೊಂದು ಸೆಟ್ ಗಣತಿ ನಮೂನೆಯನ್ನು ಭವಿಷ್ಯದ ಸಾಕ್ಷಿಗಾಗಿ ಮತದಾರರೇ ತಮ್ಮ ಬಳಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂದು ವಿವರಿಸಿದರು.

election evm vote 1 3

ಇನ್ನು 2002ರ ಮತದಾರರ ಪಟ್ಟಿಯಲ್ಲಿ ಯಾರ ಹೆಸರು ದಾಖಲಾಗಿದೆಯೋ, ಅಂತಹವರ ಹೆಸರುಗಳನ್ನ ಕಡ್ಡಾಯವಾಗಿ ಪರಿಶೀಲನೆಗೆ ಒಳಪಡಿಸಲಾಗುತ್ತದೆ ಎಂದು ಮುಖ್ಯ ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ವೋಟರ್ ಫೆಸಿಲಿಟಿ ಸೆಂಟರ್ ಓಪನ್ ಮಾಡಲಾಗುತ್ತೆ ಮತದಾರರು ಡೌಟ್ ಇದ್ರೆ ಪರಿಹಾರ ಕಂಡುಕೊಳ್ಳಬಹುದು. ಆಗಸ್ಟ್ 8 ರಂದು ಕರುಡು ಮತದಾರರ ಪಟ್ಟಿ ರಿಲೀಸ್ ಮಾಡಲಾಗುತ್ತೆ ಆಕ್ಷೇಪಣೆಗಳನ್ನ ಸಲ್ಲಿಸಬಹುದು ಅಂತ ಅನ್ಬುಕುಮಾರ್ ಸ್ಪಷ್ಟಪಡಿಸಿದರು.

[ad_2]

Source link publictv.in

Leave a Reply

Your email address will not be published. Required fields are marked *