Advertisement

ಕೊನೆಯಲ್ಲಿ ಪೂರನ್‌ 6, 6, 6, 6 – ಲಕ್ನೋಗೆ 7 ವಿಕೆಟ್‌ಗಳ ಭರ್ಜರಿ ಜಯ; CSKಗೆ ಪ್ಲೇ ಆಫ್‌ ಹಾದಿ ಕಠಿಣ

[ad_1]

Nicholas Pooran

ಲಕ್ನೋ: ಮಿಚೆಲ್‌ ಮಾರ್ಷ್‌, ನಿಕೋಲಸ್‌ ಪೂರನ್‌ ಸ್ಫೋಟಕ ಬ್ಯಾಟಿಂಗ್‌, ಆಕಾಶ್ ಸಿಂಗ್ ಬೆಂಕಿ ಬೌಲಿಂಗ್‌ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಲಕ್ನೋ ಸೂಪರ್‌ ಜೈಂಟ್ಸ್‌ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರಿಂದ ಸಿಎಸ್‌ಕೆಗೆ ಪ್ಲೇ ಆಫ್‌ ಹಾದಿ ಕಠಿಣವಾಗಿದೆ.

ಇನ್ನೂ 4 ಓವರ್‌ ಬಾಕಿ ಇದ್ದಾಗಲೇ ಎಲ್‌ಎಸ್‌ಜಿ ಗೆಲುವಿಗೆ 24 ರನ್‌ಗಳ ಅಗತ್ಯವಿತ್ತು. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ನಿಕೋಲಸ್‌ ಪೂರನ್‌ ಬ್ಯಾಕ್‌ ಟು ಬ್ಯಾಕ್‌ 4 ಸಿಕ್ಸರ್‌ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 187 ರನ್‌ ಗಳಿಸಿತು. ಕಾರ್ತಿಕ್‌ ಶರ್ಮಾ ಅಬ್ಬರದ ಬ್ಯಾಟಿಂಗ್‌ ನಡೆಸಿ 6 ಫೋರ್‌, 5 ಸಿಕ್ಸರ್‌ಗಳೊಂದಿಗೆ 42 ಬಾಲ್‌ಗೆ 71 ರನ್‌ ಕಲೆಹಾಕಿದರು. ಕಾರ್ತಿಕ್‌ ಆಟದ ನೆರವಿನಿಂದ ಚೆನ್ನೈ ಸವಾಲಿನ ಮೊತ್ತ ಪೇರಿಸಲು ಸಾಧ್ಯವಾಯಿತು. ತಂಡದ ಪರವಾಗಿ ಶಿವಂ ದುಬೆ 32, ಡೆವಾಲ್ಡ್ ಬ್ರೆವಿಸ್ 25, ಸಂಜು ಸ್ಯಾಮ್ಸನ್‌ 20 ರನ್‌ಗಳ ಕೊಡುಗೆ ನೀಡಿದರು. ಲಕ್ನೋ ಪರ ಬೌಲಿಂಗ್‌ನಲ್ಲಿ ಆಕಾಶ್‌ ಸಿಂಗ್‌ 3 ವಿಕೆಟ್‌ ಕಿತ್ತು ಮಿಂಚಿದರು. ಮೊಹಮ್ಮದ್‌ ಶಮಿ ಮತ್ತು ಶೆಹಬಾಜ್‌ ಖಾನ್‌ ತಲಾ 1 ವಿಕೆಟ್‌ ಪಡೆದರು.

ಚೆನ್ನೈ ನೀಡಿದ 188 ರನ್‌ ಗುರಿ ಬೆನ್ನಟ್ಟಿದ ಲಕ್ನೋ ಆರಂಭದಲ್ಲೇ ಸಿಕ್ಸರ್‌, ಫೋರ್‌ಗಳ ಸ್ಫೋಟಕ ಬ್ಯಾಟಿಂಗ್‌ ಮಾಡಿತು. ಮಿಚೆಲ್‌ ಮಾರ್ಷ್‌ ಮತ್ತು ಜೋಶ್‌ ಇಂಗ್ಲಿಸ್‌ ಜೋಡಿ ಚೆನ್ನೈ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಮಾರ್ಷ್‌ 9 ಫೋರ್‌, 7 ಸಿಕ್ಸರ್‌ನೊಂದಿಗೆ 38 ಬಾಲ್‌ಗೆ 90 ರನ್‌ ಗಳಿಸಿದರು. ಇಂಗ್ಲಿಸ್‌ 36 ರನ್‌ ಆಟವು ತಂಡದ ಗೆಲುವಿಗೆ ಕೊಡುಗೆ ನೀಡಿತು. ನಿಕೋಲಸ್‌ ಪೂರನ್‌ (ಔಟಾಗದೇ) ಕೂಡ ಅಬ್ಬರದ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

[ad_2]

Source link publictv.in

Leave a Reply

Your email address will not be published. Required fields are marked *