Advertisement

ನಾನು ಎಲ್ಲೂ ಹೋಗಿಲ್ಲ, ಜೆಡಿಎಸ್‌ನಲ್ಲೇ ಇದ್ದೇನೆ: ಜಿಟಿಡಿ ಸ್ಪಷ್ಟನೆ

[ad_1]

g.t.deve gowda meets h.d.deve gowda

– ಹೆಚ್.ಡಿ.ದೇವೇಗೌಡರ ಭೇಟಿಯಾದ ಜಿ.ಟಿ.ದೇವೇಗೌಡ

ಬೆಂಗಳೂರು: ನಾನು ಎಲ್ಲೂ ಹೋಗಿಲ್ಲ, ಜೆಡಿಎಸ್‌ನಲ್ಲೇ (JDS) ಇದ್ದೀನಿ ಎಂದು ಪಕ್ಷದಿಂದ ಅಂತರ ಕಾಯ್ದುಕೊಂಡ ವಿಚಾರಕ್ಕೆ ಶಾಸಕ ಜಿ.ಟಿ.ದೇವೇಗೌಡ (G.T.Deve Gowda) ಸ್ಪಷ್ಟನೆ ನೀಡಿದ್ದಾರೆ.

ಪದ್ಮನಾಭನಗರ ನಿವಾಸದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ (H.D.Deve Gowda) ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿಡಿ, ದೇವೇಗೌಡರ ಹುಟ್ಟುಹಬ್ಬದ ಹಿನ್ನೆಲೆ ಭೇಟಿಯಾಗಿ ಶುಭಾಶಯ ಕೋರಿದ್ದೇನೆ. ಅವರಿಗಾಗಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ಪ್ರಸಾದ ಕೊಟ್ಟು ಶುಭಾಶಯ ಕೋರಿದ್ದೇನೆ. ದೇವೇಗೌಡರು ಆತ್ಮೀಯವಾಗಿ ಮಾತಾಡಿದ್ರು. ಯಾವುದೇ ರಾಜಕೀಯ ವಿಚಾರ ಚರ್ಚೆ ಮಾಡಿಲ್ಲ. ನಾನು ಜೆಡಿಎಸ್‌ನಲ್ಲೇ ಇದ್ದೀನಿ. ಎಲ್ಲೂ ಹೋಗಿಲ್ಲ. 2028 ಚುನಾವಣೆಯಲ್ಲಿ ನಾನು ಜೆಡಿಎಸ್‌ನಿಂದಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತೀನಿ. ಯಾವುದೇ ಕಾರ್ಯಕ್ರಮಕ್ಕೆ ನನಗೆ ಕುಮಾರಸ್ವಾಮಿ, ನಿಖಿಲ್ ಆಗಲಿ, ಪದಾಧಿಕಾರಿಗಳು ಆಗಲಿ ಯಾರು ಕರೆದಿಲ್ಲ. ಅದಕ್ಕೆ ನಾನು ಹೋಗಿಲ್ಲ. ಮುಂದೆ ಕರೆದರೆ ನೋಡ್ತೀನಿ ಎಂದು ತಿಳಿಸಿದರು. ಇದನ್ನೂ ಓದಿ: RSS ಅವ್ರು ಪಾಕಿಸ್ತಾನದ ಏಜೆಂಟ್‌ಗಳು: ಪ್ರಿಯಾಂಕ್ ಖರ್ಗೆ

ಇವತ್ತು ಮಾಜಿ ಪ್ರಧಾನಿ ದೇವೇಗೌಡರನ್ನ ಭೇಟಿ ಮಾಡಿದೆ. ಇಡೀ ದೇಶದಲ್ಲಿ ಪ್ರಧಾನಿಯಾಗಿ ಪ್ರಖ್ಯಾತಿ ಪಡೆದವರು. ಮೋದಿಯವರೇ ಅವರ ಗುಣಗಾನ ಮಾಡಿದ್ದಾರೆ. ರೈತರ ಪರ ನಿಂತು ದುಡಿದವರು. ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗ್ತಿದ್ದಾರೆ. ನನಗೆ ಅವರ ಬಗ್ಗೆ ಅಪಾರ ಗೌರವ ಇದೆ. ತಾಯಿ ಚೆನ್ನಮ್ಮ ಅವರ ಆರೋಗ್ಯ ವಿಚಾರಿಸಿದೆ. ದೇವೇಗೌಡ್ರು ರಾಜಕೀಯ ಮಾತಾಡಿಲ್ಲ, ನಾನು ಮಾತಾಡಿಲ್ಲ. ಚೆನ್ನಾಗಿರು ಒಳ್ಳೆದಾಗಲಿ ಅಂತ ಅಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು.

ನಾನು ಎಷ್ಟು ಪ್ರಾಮಾಣಿಕವಾಗಿ ದುಡಿದ್ದೇನೆ ಅಂತ ಅವರಿಗೆ ಗೊತ್ತಿದೆ. ತಮಿಳುನಾಡಿನಲ್ಲಿ ವಿಜಯ್ 1 ವರ್ಷದಿಂದ ಪಾರ್ಟಿ ಕಟ್ಟಿ ಸಿಎಂ ಆದ್ರು. ಕ್ಷೇತ್ರ ದೊಡ್ಡದಿದೆ. ಹಾಗಾಗಿ, ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿದ್ದೇನೆ ಎಂದರು. ಇದನ್ನೂ ಓದಿ: ನೀಟ್ ಪರೀಕ್ಷೆ ನಡೆಸೋದ್ರಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ: ಸಿದ್ದರಾಮಯ್ಯ

[ad_2]

Source link publictv.in

Leave a Reply

Your email address will not be published. Required fields are marked *