Advertisement

2,000 ರೂ. ಬಾಡಿಗೆ ಕಟ್ಟಲಾಗದೇ ಪತ್ನಿ-ಮಗಳನ್ನೇ ಕಾಮುಕರಿಗೆ ಒಪ್ಪಿಸಿದ ಪಾಪಿ: ಮನೆ ಮಾಲೀಕ ಅರೆಸ್ಟ್

[ad_1]

CRIME 2

ಗಾಂಧೀನಗರ: ವ್ಯಕ್ತಿಯೊಬ್ಬ ಮನೆ ಬಾಡಿಗೆ ಕಟ್ಟಲಾಗದೇ ಹೆಂಡತಿ ಮತ್ತು 13 ವರ್ಷದ ಮಗಳನ್ನೇ ಮನೆ ಮಾಲೀಕನಿಗೆ ಅತ್ಯಾಚಾರ ನಡೆಸಲು ಅವಕಾಶ ನೀಡಿರುವ ಅಮಾನವೀಯ ಘಟನೆ ಗುಜರಾತ್‌ನ (Gujarat) ಮೊರ್ಬಿಯಲ್ಲಿ ನಡೆದಿದೆ.

ಈ ಸಂಬಂಧ ಸಂತ್ರಸ್ತೆಯ ತಾಯಿ ಮೇ 1ರಂದು ಮೊರ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಡಿಗೆದಾರಳ ಪತಿ, 55 ವರ್ಷದ ಮನೆ ಮಾಲೀಕ ಹಾಗೂ ಆತನ ಸಂಬಂಧಿಯ ವಿರುದ್ಧ ಪೋಕ್ಸೊ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಚನ್ನಗಿರಿಯಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷನ ಬರ್ಬರ ಹತ್ಯೆ

ಆರು ತಿಂಗಳ ಹಿಂದೆ ಕೆಲಸದ ನಿಮಿತ್ತ ಮೊರ್ಬಿಗೆ ಬಂದ ಕುಟುಂಬ 2000 ರೂಪಾಯಿಗೆ ಬಾಡಿಗೆ ಮನೆಯೊಂದರಲ್ಲಿ ಜೀವನ ನಡೆಸುತ್ತಿತ್ತು. ಆದರೆ ಪತಿಯ ವ್ಯವಹಾರ ಸರಿಯಾಗಿ ನಡೆಯದೇ ಬಾಡಿಗೆ ಬಾಕಿ ಹೆಚ್ಚಾಗಿತ್ತು. ಬಾಡಿಗೆ ಹಣ ಭರಿಸಲಾಗದೇ ಸ್ವತಃ ವ್ಯಕ್ತಿ, ತನ್ನ ಹೆಂಡತಿ ಮತ್ತು 13 ವರ್ಷದ ಮಗಳ ಮೇಲೆ ಮನೆ ಮಾಲೀಕ ಮತ್ತು ಆತನ ಸಂಬಂಧಿಕರು ಪದೇ ಪದೇ ಅತ್ಯಾಚಾರ ನಡೆಸಲು ಅವಕಾಶ ನೀಡಿದ್ದಾನೆ.

ಬಾಡಿಗೆದಾರಳ ಪತಿಯನ್ನು ಈಗಾಗಲೇ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಮನೆ ಮಾಲೀಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಮನೆ ಮಾಲೀಕನ ಸಂಬಂಧಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ ಎಂದು ಮೊರ್ಬಿ ಪೊಲೀಸ್ ಇನ್ಸ್‌ಪೆಕ್ಟರ್‌ ವೈ.ಬಿ.ಜಡೇಜಾ ತಿಳಿಸಿದ್ದಾರೆ. ಇದನ್ನೂ ಓದಿ: ನೆದರ್ಲೆಂಡ್ಸ್‌ಗೆ ಪ್ರಧಾನಿ ಮೋದಿ ಭೇಟಿ

[ad_2]

Source link publictv.in

Leave a Reply

Your email address will not be published. Required fields are marked *