Advertisement

ಪತ್ನಿಯಿಂದ ಡಿವೋರ್ಸ್ ಸಿಗೋವರೆಗೂ ನಾನು ಯಾವುದೇ ಸಿನಿಮಾ ಮಾಡಲ್ಲ – ನಟ ಜಯಂ ರವಿ ಕಣ್ಣೀರು | Public TV

[ad_1]

ಚೆನ್ನೈ: ತಮಿಳು ನಟ ಜಯಂ ರವಿ (Jayam Ravi) ಅವರ ಕೌಟುಂಬಿಕ ಕಲಹ ಜೋರಾಗಿದೆ. ಪತ್ನಿಯಿಂದ ಡಿವೋರ್ಸ್ ಸಿಗೋವರೆಗೂ ನಾನು ಯಾವುದೇ ಸಿನಿಮಾ ಮಾಡಲ್ಲ ಅಂತ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಕೌಟುಂಬಿಕ ಕಲಹದ ಬಗ್ಗೆ ಮಾತನಾಡಿದ ಅವರು, ಹೆಂಡತಿ ಬಗ್ಗೆ ಹೆಚ್ಚು ಮಾತಾಡೋದು ಬೇಡ ಅಂತ ಇಷ್ಟು ದಿನ ಬಾಯಿ ಮುಚ್ಚಿಕೊಂಡಿದ್ದೆ. ಆದರೆ, ಈಗ ಆಕೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾಳೆ. ಇನ್ನು ಸುಮ್ಮನಿರೋಕೆ ಆಗಲ್ಲ. ನನ್ನ ಮಕ್ಕಳನ್ನು ಭೇಟಿಯಾಗಲೂ ಬಿಡ್ತಿಲ್ಲ. ಇಬ್ಬರೂ ಮಕ್ಕಳ ಸ್ಕೂಲ್ ಫೀಸ್‌ನ್ನ ನಾನು 8 ವರ್ಷದಿಂದ ಕಟ್ಟುತ್ತಿದ್ದೇನೆ. ಈವರೆಗೆ 50 ಲಕ್ಷ ರೂ. ಖರ್ಚು ಮಾಡಿದ್ದೇನೆ. ಮಕ್ಕಳ ಮೇಲಿನ ಪ್ರೀತಿ ಬಗ್ಗೆ ಯಾರು ಮಾತನಾಡುತ್ತಿಲ್ಲ. ಮಕ್ಕಳ ಮೇಲೆ ಪ್ರೀತಿ ಇಲ್ಲ ಅಂತಾ ನನ್ನನ್ನೇ ಪ್ರಶ್ನಿಸುತ್ತಾರೆ, ಅನುಮಾನಪಡುತ್ತಾರೆ. ಸ್ಕೂಲ್‌ಗೆ ಬಾಡಿಗಾರ್ಡ್ ಜೊತೆ ಕಳುಹಿಸುತ್ತಾರೆ. ನನಗೆ ಇಷ್ಟ ಇಲ್ಲದೇ ಈ ಜೀವನದಿಂದ ಹೊರಬಂದಿದ್ದೇನೆ. ನಾನು ಮಾಡಿದ್ದೆಲ್ಲಾ ಅವಳಿಗೋಸ್ಕರನೇ ಎಂದು ಪತ್ನಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಡಿವೋರ್ಸ್ ಬಳಿಕವೂ ಹಳೆಯ ನೆನಪು ಉಳಿಸಿಕೊಂಡ ಮೌನಿ ರಾಯ್ – ಮದುವೆ ಪೋಸ್ಟ್ ಮತ್ತೆ ವೈರಲ್!

ನಾನು ವೈಯಕ್ತಿಕ ಬ್ಯಾಂಕ್ ಖಾತೆಯನ್ನೂ ಹೊಂದಿಲ್ಲ. ಎಲ್ಲವನ್ನೂ ಹೆಂಡತಿ ಜೊತೆ ಜಂಟಿ ಖಾತೆ ಹೊಂದಿದ್ದೇನೆ. ನಾನು ದುಡಿದ್ದಿದ್ದನ್ನೆಲ್ಲ ಅವಳಿಗೆ ಕೊಟ್ಟಿದ್ದೇನೆ. ನಾನು ಖರ್ಚು ಮಾಡಿದ ಒಂದೊಂದು ಪೈಸೆ ಬಗ್ಗೆಯೂ ಅವಳು ಲೆಕ್ಕ ಕೇಳುತ್ತಿದ್ದಳು. ನನ್ನ ಪೋಷಕರ ವಿರೋಧದ ನಡುವೆಯೂ ಆರತಿಯನ್ನು ಮದುವೆ ಆದೆ. ಈಗ ಪಶ್ಚಾತ್ತಾಪಡುವಂತಾಗಿದೆ. ಪತ್ನಿಯಿಂದ ಡಿವೋರ್ಸ್ ಸಿಗೋವರೆಗೂ ನಾನು ಯಾವುದೇ ಸಿನಿಮಾ ಮಾಡಲ್ಲ ಎಂದು ಕಣ್ಣೀರು ಸುರಿಸಿದ್ದಾರೆ.

ನನ್ನನ್ನು ಮಹಿಳಾ ವಿರೋಧಿ ಅಂತ ಬಿಂಬಿಸ್ತಿದ್ದಾರೆ. ಆದರೆ, ನನ್ನ ಸಿನಿಮಾಗಳನ್ನು ನೋಡಿ. ನನ್ನ ಸಿನಿಮಾಗಳಲ್ಲಿನ ಸಂದೇಶದಂತೆ ನಾನು ನಡೆದುಕೊಂಡಿದ್ದೇನೆ. ಆದರೀಗ, ಹೆಂಡತಿಯಿಂದ ಮಾನಸಿಕವಾಗಿ ನೊಂದಿದ್ದು, ಇದರಿಂದ ಹೊರಬರಲು ಕೈಯನ್ನೆಲ್ಲಾ ಕೊಯ್ದುಕೊಂಡಿದ್ದೇನೆ. ನಾನು ಹೋಗ್ತೀನಿ, ಆದ್ರೆ ನನ್ನ ಜೀವನ ಹಾಳು ಮಾಡಿದ ಎಲ್ಲರ ಕಥೆ ಮುಗಿಸಿ ಬಳಿಕ ಹೋಗ್ತೀನಿ ಅಂತ ಅಬ್ಬರಿಸಿದ್ದಾರೆ.

ಗೆಳತಿ, ಗಾಯಕಿ ಕೆನಿಶಾ ಜೊತೆಗಿನ ಸಂಬಂಧದಿಂದಾಗಿ ಪತ್ನಿ ಆರತಿ ಡಿವೋಸ್ ಕೇಳಿದ್ದು, ತಿಂಗಳಿಗೆ 40 ಲಕ್ಷ ರೂ. ಪರಿಹಾರವನ್ನೂ ಕೇಳಿದ್ದಾರೆ. ಇದು ಕೋರ್ಟ್‌ನಲ್ಲಿದ್ದು ಇತ್ಯರ್ಥವಾಗಿಲ್ಲ. ಈ ಮಧ್ಯೆ, ಗೆಳತಿ ಕೆನಿಶಾ ಕೂಡ ದೂರಾಗಿದ್ದು, ಆಕೆಯನ್ನು ದೂರ ಮಾಡಿದವರ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಚೈತ್ರಾ ಆಚಾರ್ ಪೋಸ್ಟ್‌ಗೆ ಅಸಭ್ಯ ಕಾಮೆಂಟ್ – ಪೊಲೀಸ್ ಪೇದೆ ವಿರುದ್ಧ ನಟಿ ಕೆಂಡಾಮಂಡಲ

[ad_2]

Source link publictv.in

Leave a Reply

Your email address will not be published. Required fields are marked *