Advertisement

ಸಿಎಂ ಆಗುತ್ತಿದ್ದಂತೆ ನಟಿ ತ್ರಿಷಾಗೆ ಭರ್ಜರಿ ಉಡುಗೊರೆ ಘೋಷಿಸಿದ ವಿಜಯ್!!

[ad_1]

ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಜೊತೆ ನಟಿ ತ್ರಿಷಾ ಕೃಷ್ಣನ್ ಹೆಸರು ಬಹಳ ಹಿಂದಿನಿಂದಲೇ ತಳಕು ಹಾಕಿಕೊಂಡು ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ವಿಜಯ್ ಅವರು ಸಿಎಂ ಆಗುತ್ತಿದ್ದಂತೆ ತ್ರಿಷಾ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಹೀಗಿರುವಾಗಲೇ ಮುಖ್ಯಮಂತ್ರಿ ಆಗುತ್ತಿದ್ದಂತೆ ವಿಜಯ ಅವರು ನಟಿ ತ್ರಿಷಾಗೆ ಭರ್ಜರಿ ಉಡುಗೊರೆಯೊಂದನ್ನು ಘೋಷಿಸಿದ್ದಾರೆ.

ಯೆಸ್, ದಳಪತಿ ವಿಜಯ್ ಅಂಡ್ ತ್ರಿಷಾ ನಂಟಿನ ವಿಷ್ಯ ಈಗ ಸಿನಿರಂಗದಲ್ಲೂ ರಾಜಕೀಯ ರಂಗದಲ್ಲೂ ಹಾಟ್ ಟಾಪಿಕ್ ಆಗಿಬಿಟ್ಟಿದೆ. ಇಬ್ಬರ ರಿಲೇಷನ್​ ಶಿಪ್ ಬಗ್ಗೆ ಭರಪೂರ ಚರ್ಚೆಯಾಗ್ತಾ ಇದೆ. ಹೀಗಿರುವಾಗಲೇ ಸಿಎಂ ಆದ ಮೇಲೆ ಸಿಎಂ ಪಟ್ಟದ ಪವರ್ ಬಳಸಿ ತ್ರಿಷಾಗೊಂದು ಉಡುಗೊರೆ ಕೊಟ್ಟಿದ್ದಾರೆ. ಅಸಲಿಗೆ ಈ ವಾರ ತ್ರಿಷಾ ಮತ್ತು ಸೂರ್ಯ ನಟಿಸಿರೋ ಕರಪ್ಪು ಸಿನಿಮಾ ತೆರೆಗೆ ಬಂದಿದೆ.

ಇತ್ತೀಚಿಗೆ ತಮಿಳುನಾಡಿನಲ್ಲಿ ಸಿನಿಮಾಗಳನ್ನ ಹತ್ತು ಗಂಟೆಗೆ ಮುನ್ನ ರಿಲೀಸ್ ಮಾಡೋದನ್ನ ಬಂದ್ ಮಾಡಲಾಗಿತ್ತು. ಕಾನೂನು ಸುವ್ಯವಸ್ಥೆಗೆ ತೊಂದ್ರೆಯಾಗುತ್ತೆ ಅಂತ ಹಿಂದಿನ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿತ್ತು. ಆದ್ರೆ ಕರಪ್ಪು ಸಿನಿಮಾತಂಡ ವಿಜಯ್ ಗೆ ಮನವಿ ಮಾಡಿ ಈ ನಿಯಮದಿಂದ ವಿನಾಯತಿ ಕೊಡುವಂತೆ ಕೇಳಿಕೊಂಡಿದ್ರು. ಅರ್ಲಿ ಮಾರ್ನಿಂಗ್ ಶೋ ಹಾಕಲಿಕ್ಕೆ ಅವಕಾಶ ಕೊಡಿ ಅಂತ ಮನವಿ ಸಲ್ಲಿಸಿದ್ರು. ವಿಜಯ್ ಕೂಡ ಸಿನಿಮಾದವರೇ. ಜೊತೆಗೆ ಹೇಳಿ ಕೇಳಿ ಗೆಳತಿ ತ್ರಿಷಾ ನಾಯಕಿ ಆಗಿರೋ ಸಿನಿಮಾ. ಸೋ ಹಿಂದೂ ಮುಂದೂ ನೋಡದೇ ವಿಜಯ್ ಇದಕ್ಕೆ ಅನುಮತಿ ಕೊಟ್ಟಿದ್ದಾರೆ. ಅರ್ಲಿ ಮಾರ್ನಿಂಗ್ ಶೋ ಹಾಕುವ ಅನುಮತಿ ಪತ್ರಕ್ಕೆ ಸಹಿ ಹಾಕಿದ್ದಾರೆ.



[ad_2]

Source link

Leave a Reply

Your email address will not be published. Required fields are marked *