Advertisement

ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಸಿಡಿಲಘಾತ: ಗೋಪುರಕ್ಕೆ ಹಾನಿ..!!

[ad_1]

ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಕಾವಳ ಮೂಡೂರು ಗ್ರಾಮದ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಸಿಡಿಲು ಬಡಿದ ಘಟನೆ ಮೇ.16ರ ಶನಿವಾರ ಸಂಭವಿಸಿದೆ.

ಕಾರಿಂಜೇಶ್ವರ ದೇವಸ್ಥಾನ ಬೃಹತ್ ಬಂಡೆಯ ಮೇಲೆ ಇದ್ದು, ಸಂಜೆ ಸುಮಾರು 5 ಗಂಟೆಯ ಹೊತ್ತಿಗೆ ಸಿಡಿಲು ಬಡಿದಿರಬೇಕೆಂದು ಅಂದಾಜಿಸಲಾಗಿದೆ.ಈ ಹೊತ್ತಿನಲ್ಲಿ ಯಾರೂ ದೇವಸ್ಥಾನದಲ್ಲಿ ಇರದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ದೇವಸ್ಥಾನದ ಗರ್ಭಗುಡಿಯ ಮೇಲಿನ ಗೋಪುರ ಕ್ಕೆ ಸಿಡಿಲು ಬಡಿದಿದ್ದು, ನಷ್ಟ ಅಂದಾಜಿಸಲಾಗಿಲ್ಲ. ಈ ಬಗ್ಗೆ ಕಂದಾಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೀರೇಂದ್ರ ಬಿ.ಅಮೀನ್‌ ತಿಳಿಸಿದ್ದಾರೆ.



[ad_2]

Source link

Leave a Reply

Your email address will not be published. Required fields are marked *