Advertisement

ದಾವಣಗೆರೆ | 10 ನಿಮಿಷದ ಮಳೆಗೆ ಸಾವಿರಾರು ಎಕರೆ ಭತ್ತ, 4 ಎಕರೆ ಟೊಮೆಟೊ ನಾಶ

[ad_1]

Davanagere

– ನೆಲಕ್ಕೆ ಬಿದ್ದ ವಿದ್ಯುತ್ ಕಂಬಗಳು, ಬೃಹತ್ ಮರಗಳು

ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ (Davanagere) ಕಳೆದ ರಾತ್ರಿ ಸುರಿದ ಹತ್ತೇ ಹತ್ತು ನಿಮಿಷದ ಮಳೆ ದೊಡ್ಡ ಅವಾಂತರವನ್ನೇ ಸೃಷ್ಟಿಮಾಡಿದೆ. ಚನ್ನಗಿರಿ ತಾಲೂಕಿನ ಬಸವಪಟ್ಟಣ ಹಾಗೂ ಶೃಂಗಾರ ಬಾಗು ತಾಂಡದಲ್ಲಿ 20ಕ್ಕೂ ಹೆಚ್ಚು ಮನೆಗಳು ಹಾನಿ 50 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ಬೃಹತ್ ಮರಗಳು ನೆಲಕ್ಕುರುಳಿದೆ.

ಅಲ್ಲದೇ ಗಾಳಿಯ ರಭಸಕ್ಕೆ ಬೃಹತ್ ಮರಗಳು ಮನೆಯ ಮೇಲ ಬಿದ್ದಿದ್ದು, ಮನೆಗಳಿಗೂ ಕೂಡ ಹಾನಿಯಾಗಿದೆ.‌ ನಿನ್ನೆ ಸಂಜೆಯಿಂದ ಎರಡು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದ್ದು ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ. ಕೇವಲ ಹತ್ತು ನಿಮಿಷ ಬಂದ ಗಾಳಿ ಮಳೆಗೆ 2 ಗ್ರಾಮಗಳಲ್ಲಿ ಅವಾಂತರ ಸೃಷ್ಠಿಯಾಗಿದ್ದು ಈ ಗ್ರಾಮದಲ್ಲಿ ಕೂಲಿ ನಾಲಿ ಮಾಡುವ ಜನರೇ ಜಾಸ್ತಿ ಇದ್ದು, ಕೂಡಲೇ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕಾಡಿನಲ್ಲಿ ಅಕ್ರಮವಾಗಿ ಚರ್ಚ್ ನಿರ್ಮಾಣ – ಉದ್ಘಾಟನೆಗೆ ತಮಿಳುನಾಡಿನಿಂದ ಆಗಮಿಸಿದ್ದವರು ವಶಕ್ಕೆ

Davanagere 2

ಅಲ್ಲದೇ ಬಸವಪಟ್ಟಣ ಗ್ರಾಮದಲ್ಲಿ ರೈತರಿಗೆ ತುಂಬಲಾರದ ನಷ್ಟವಾಗಿದೆ. ಅಡಿಕೆ, ತೆಂಗು, ಟೊಮೆಟೊ ಬೆಳೆಗಳು ನೆಲಕಚ್ಚಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಅದರಲ್ಲೂ ರೈತನೊಬ್ಬ ಸಾಲಸೋಲ ಮಾಡಿ 4 ಎಕ್ರೆ ಜಮೀನಿನಲ್ಲಿ ಬೆಳೆದ ಟೊಮೆಟೊ ಬೆಳೆ ನಾಶವಾಗಿದೆ. ಇದನ್ನೂ ಓದಿ: ವಿಜಯ್‌ ಸಿಎಂ ಆದ್ರೆ ನನಗೇಕೆ ಅಸೂಯೆ? ನಾನ್‌ ಅಷ್ಟೊಂದು ಚೀಪ್‌ ಅಲ್ಲ – ಟೀಕೆಗಳಿಗೆ ತಲೈವಾ ತಿರುಗೇಟು

ಎಕರೆಗೆ ಒಂದರಿಂದ ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿದ್ದು, ಇನ್ನೇನು ಬೆಳೆ ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಸಂಪೂರ್ಣ ನೆಲಕಚ್ಚಿದೆ. ಇದರಿಂದ ಟಮೊಟೊ ಕೊಳೆಯುತ್ತವೆ ಎನ್ನುವ ಆತಂಕವನ್ನ ರೈತರು ಎದುರಿಸುತ್ತಿದ್ದಾರೆ. ಜೊತೆಗೆ ಬಿರು ಬೇಸಿಗೆಯಲ್ಲಿ ಬೆಳೆಗಳನ್ನು ಉಳಿಸಿಕೊಳ್ಳೋದೇ ಕಷ್ಟ ಅಂತಿರುವಾಗ ಟ್ಯಾಂಕರ್ ನಿಂದ, ಬೋರ್ ವೆಲ್ ಗಳಿಂದ ನೀರು ಹಾಯಿಸಿ ಬೆಳೆ ಉಳಿಸಿಕೊಂಡಿದ್ದು, ಇನ್ನೇನು ಕೈಗೆ ಬಂದ ತುತ್ತು ಬಾಯಿಗೆ ಬರಬೇಕು ಎನ್ನುವಷ್ಟರಲ್ಲಿ ನೆಲಕಚ್ಚಿದ್ದು ರೈತರು ಕಣ್ಣೀರಿಡುವಂತಾಗಿದೆ.

Davanagere 3

ಇನ್ನೂ ತಾಲೂಕಿನ ತ್ಯಾವಣಿಗಿ, ದೊಡ್ಡಘಟ್ಟ ಗ್ರಾಮದ ಸುತ್ತಾಮುತ್ತ ಸಾವಿರಾರು ಹೆಕ್ಟೇರ್ ಭತ್ತದ ಬೆಳೆ ನಾಶವಾಗಿ ರೈತರನ್ನು ಸಂಕಷ್ಟಕ್ಕೆ ದೂಡಿದೆ.‌ ಎಕರೆಗೆ 40 ರಿಂದ 50 ಸಾವಿರ ರೂಪಾಯಿ ಖರ್ಚು ಮಾಡಿ ಭತ್ತ ಬೆಳೆದಿದ್ದು, ಇನ್ನೊಂದು ವಾರದಲ್ಲಿ ಕಟಾವಿಗೆ ಬಂದಿತ್ತು. ಆದರೆ ನಿನ್ನೆ ಸಂಜೆ ಆಲಿಕಲ್ಲು ಮಳೆ ಬಿದ್ದಿದ್ದರಿಂದ ಭತ್ತದ ತೆನೆಯಿಂದ ಕಾಳುಗಳು ನೆಲದ ಪಾಲಾಗಿದ್ದು, 60 ರಿಂದ 70 ಎಷ್ಟು ಭತ್ತದ ಕಾಳು ನೆಲಕ್ಕೆ ಬಿದ್ದಿವೆ. ಕೇವಲ 30% ರಷ್ಟು ಮಾತ್ರ ಬೆಳೆ ಕೈಗೆ ಸಿಗಲಿದೆ ಪ್ರತಿ ಬಾರಿ ನಷ್ಟವನ್ನು ಅನುಭವಿಸುವಂತಾಗಿದೆ‌ ಎಂದು ಅಳಲಾಗಿದೆ. ಚನ್ನಗಿರಿ ತಾಲ್ಲೊಕಿನಾದ್ಯಂತ ರೈತರಿಗೆ ಸಾಕಷ್ಟು ನಷ್ಟವಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: 20 ಕೋಟಿಗೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡ ಜಿಂದಾಲ್ ಕಾರ್ಖಾನೆ – ವಸೂಲಿಗೆ ಅಧಿಕಾರಿಗಳ ಸರ್ಕಸ್

[ad_2]

Source link publictv.in

Leave a Reply

Your email address will not be published. Required fields are marked *