Advertisement

IPL 2026 | ʻಜೋಶ್‌ʼನಲ್ಲಿ ಗೆದ್ದ ಆರ್‌ಸಿಬಿ – ಪ್ಲೇ ಆಫ್‌ಗೆ ರಾಯಲ್‌ ಎಂಟ್ರಿ | Public TV

[ad_1]

ಧರ್ಮಶಾಲಾ: ಜೋಶ್‌ ಹೇಜಲ್ವುಡ್‌ ಮಾರಕ ಬೌಲಿಂಗ್‌ ದಾಳಿ ನೆರವಿನಿಂದ ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ಧ 23 ರನ್‌ಗಳ ಅಮೋಘ ಜಯ ಸಾಧಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ‌19ನೇ ಆವೃತ್ತಿಯ ಐಪಿಎಲ್‌ನ ಪ್ಲೇ ಆಫ್‌ಗೆ (IPL Playoffs) ಭರ್ಜರಿ ಎಂಟ್ರಿ ಕೊಟ್ಟಿದೆ. ಈ ಮೂಲಕ ಈ ಆವೃತ್ತಿಯಲ್ಲಿ ಪ್ಲೇ ಆಫ್‌ ಪ್ರವೇಶಿಸಿದ ತಂಡ ಹೆಗ್ಗಳಿಕೆಯನ್ನೂ ಆರ್‌ಸಿಬಿ (RCB) ತನ್ನದಾಗಿಸಿಕೊಂಡಿದೆ.

ಟರ್ನಿಂಗ್‌ ಸಿಕ್ಕಿದ್ದೆಲ್ಲಿ?
ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಂಜಾಬ್‌ ಕಿಂಗ್ಸ್‌ಗೆ ಶಶಾಂಕ್‌ ಸಿಂಗ್‌, ಮಾರ್ಕಸ್‌ ಸ್ಟೋಯ್ನಿಸ್‌ ಆಧಾರವಾಗಿದ್ದರು. 32 ಎಸೆತಗಳಲ್ಲಿ 67 ರನ್‌ ಸಿಡಿಸಿದ್ದ ಈ ಜೋಡಿ ತಂಡಕ್ಕೆ ಗೆಲುವು ತಂದುಕೊಡುವ ನಿರೀಕ್ಷೆಯಲ್ಲಿದ್ದರು. ಆದ್ರೆ ಮಾರಕ ವೇಗಿ ಜೋಶ್‌ ಹೇಜಲ್ವುಡ್‌ ಈ ಜೋಡಿ ಆಟಕ್ಕೆ ಬ್ರೇಕ್‌ ಹಾಕಿದರು.

Josh Hazlewood

16 ಓವರ್‌ಗಳಲ್ಲಿ 160 ರನ್‌ ಗಳಿಸಿದ್ದ ಪಂಜಾಬ್‌ಗೆ ಇನ್ನೂ 24 ಎಸೆತಗಳಲ್ಲಿ 63 ರನ್‌ಗಳ ಅಗತ್ಯವಿತ್ತು. 19ನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ಜೋಶ್‌ (Josh Hazlewood) ಮೊದಲ ಎಸೆತದಲ್ಲೇ ಸ್ಟೋಯ್ನಿಸ್‌ ಅವರ ವಿಕೆಟ್‌ ಉರುಳಿಸಿ ಪೆವಿಲಿಯನ್‌ಗಟ್ಟಿದರು. ಅಲ್ಲದೇ ಆ ಓವರ್‌ನಲ್ಲಿ ಕೇವಲ 7 ರನ್‌ ಬಿಟ್ಟುಕೊಟ್ಟರು. ಅಷ್ಟೇ ಅಲ್ಲ, 19ನೇ ಓವರ್‌ನಲ್ಲೂ ಕೇವಲ 7 ರನ್‌ ಬಿಟ್ಟುಕೊಟ್ಟ ಜೋಶ್‌ ಬಿಗಿ ಹಿಡಿತ ಸಾಧಿಸಿದ್ರು. ಇದು ಪಂದ್ಯದ ಗತಿಯನ್ನೇ ಬದಲಿಸಿತು.

200 ರನ್‌ ಗಡಿ ದಾಟದ ಪಂಜಾಬ್‌
ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 222 ರನ್‌ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಪಂಜಾಬ್‌ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 199 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಸದ್ಯ 4ನೇ ಸ್ಥಾನದಲ್ಲಿರುವ ಪಂಜಾಬ್‌ ಕಿಂಗ್ಸ್‌ಗೆ ಪ್ಲೇ ಆಫ್‌ ಹಾದಿ ಇನ್ನೂ ಕಠಿಣವಾಗಿದೆ.

Shashank Singh

ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ಪಂಜಾಬ್‌ 3.2 ಓವರ್‌ಗಳಲ್ಲಿ 19 ರನ್‌ ಗಳಿಸಿದ್ದಾಗಲೇ ಪ್ರಮುಖ 3 ವಿಕೆಟ್‌ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಬಂದ ಸೂರ್ಯಾಂಶ್ ಶೆಡ್ಜ್ (35 ರನ್‌), ಸ್ಟೋಯ್ನಿಸ್‌ (37 ರನ್‌) ಗಳಿಸಿ ಚೇತರಿಕೆ ನೀಡಿದ್ರು. ಇದರೊಂದಿಗೆ ಸ್ಫೋಟಕ ಅರ್ಧಶತಕ ಸಿಡಿಸಿದ ಶಶಾಂಕ್‌ ಸಿಂಗ್‌ 27 ಎಸೆತಗಳಲ್ಲಿ 56 ರನ್‌ ಬಾರಿಸಿದ್ದರು. ಆದಾಗ್ಯೂ ಆರ್‌ಸಿಬಿ ಬಿಗಿ ಬೌಲಿಂಗ್‌ ಹಿಡಿತಕ್ಕೆ ಸಿಲುಕಿದ ಪಂಜಾಬ್‌ 200 ರನ್‌ಗಳ ಗಡಿಯನ್ನೂ ದಾಟದೇ ಸೋಲೊಪ್ಪಿಕೊಂಡಿತು.

ಇದಕ್ಕೂ ಮುನ್ನ ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 222‌ ರನ್‌ ಬಾರಿಸಿತ್ತು. ಆರಂಭಿಕ ಜಾಕೊಬ್ ಬೆಥೆಲ್‌ (11) ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ಮತ್ತೆ ವಿಫಲರಾದರು.

RCB vs PBKS

2ನೇ ವಿಕೆಟ್‌ಗೆ ಆರಂಭಿಕ ಆಟಗಾರ ವಿರಾಟ್‌ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಜೋಡಿ ಭರ್ಜರಿ ಜೊತೆಯಾಟ ನೀಡಿತು. 42 ಎಸೆತಗಳಲ್ಲಿ ಈ ಜೋಡಿ 76 ರನ್‌ ಪೇರಿಸಿತು. ಈ ಹಂತದಲ್ಲಿ ದೇವದತ್ ಪಡಿಕ್ಕಲ್ 25 ಎಸೆತಗಳಲ್ಲಿ 45 ರನ್ ಬಾರಿಸಿದ್ದಾಗ ಹರ್ಪಿತ್ ಬ್ರಾರ್ ಖೆಡ್ಡಾಗೆ ಬಲಿಯಾದರು. ಬಳಿಕ ಕ್ರೀಸ್‌ಗಿಳಿದ ವೆಂಕಟೇಶ್‌ ಅಯ್ಯರ್‌ ನಿರೀಕ್ಷೆಯಂತೆ ವಿರಾಜ್‌ ಜೊತೆಗೂಡಿ ಪಂಜಾಬ್‌ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ದಂಡಿಸಿದರು.

3ನೇ ವಿಕೆಟ್‌ಗೆ ವಿರಾಟ್‌ ಕೊಹ್ಲಿ ಹಾಗೂ ವೆಂಕಟೇಶ್‌ ಅಯ್ಯರ್ ಜೋಡಿ ಸಹ ಉತ್ತಮ ಜೊತೆಯಾಟದ ಕೊಡುಗೆ ನೀಡಿತು. 35 ಎಸೆತಗಳನ್ನು ಎದುರಿಸಿದ ಈ ಜೋಡಿ ಕೇವಲ 35 ಎಸೆತಗಳಲ್ಲಿ ಸ್ಫೋಟಕ 60 ರನ್‌ ಬಾರಿಸಿತ್ತು. ಭರ್ಜರಿ ಫಾರ್ಮ್‌ನಲ್ಲಿರುವ ವಿರಾಟ್‌ ಕೊಹ್ಲಿ 37 ಎಸೆತಗಳಲ್ಲಿ 58 ರನ್‌ (4 ಬೌಂಡರಿ, 3 ಸಿಕ್ಸರ್‌) ಬಾರಿಸಿದರು.

RCB

ಅಯ್ಯರ್ ಫಿಫ್ಟಿ ಅಬ್ಬರ
ಈ ಲೀಗ್‌ನಲ್ಲಿ ಇದೇ ಮೊದಲ ಬಾರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡುವ ಅವಕಾಶ ಪಡೆದ ವೆಂಕಟೇಶ್‌ ಅಯ್ಯರ್ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಕೊನೇವರೆಗೂ ಔಟಾಗದೇ ಉಳಿದ ವೆಂಕಟೇಶ್‌ 40 ಎಸೆತಗಳಲ್ಲಿ 73 ರನ್‌ (8 ಬೌಂಡರಿ, 4 ಸಿಕ್ಸರ್) ಸಿಡಿಸಿದರು. ಇದರೊಂದಿಗೆ ಮಧ್ಯಮ ಕ್ರಮಾಂಕದ ಆಟಗಾರ ಟಿಮ್ ಡೇವಿಡ್ 28 ರನ್ (12 ಎಸೆತ, 2 ಸಿಕ್ಸರ್‌, 2 ಬೌಂಡರಿ) ಕೊಡುಗೆ ನೀಡಿದ್ರು.

ಪಂಜಾಬ್‌ ಪರ ಹರ್ಪಿತ್‌ ಬ್ರಾರ್‌ 2, ಅರ್ಷದೀಪ್ ಸಿಂಗ್, ಯುಜುವೇಂದ್ರ ಚಹಾಲ್ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.

[ad_2]

Source link publictv.in

Leave a Reply

Your email address will not be published. Required fields are marked *