Advertisement

ದಪ್ಪ ಆಗಿದ್ದೀಯಾ, ನಿನಗೆ ಮಗು ಆಗಲ್ಲ ಅಂತ ಗಂಡ ಕಿರುಕುಳ – ಬೇಸತ್ತು ಗೃಹಿಣಿ ಆತ್ಮಹತ್ಯೆ | Public TV

[ad_1]

ನೆಲಮಂಗಲ: ದಪ್ಪ ಆಗಿದ್ದೀಯಾ, ನಿನಗೆ ಮಗು ಆಗಲ್ಲ ಅಂತ ಗಂಡ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದಲ್ಲಿ (Nelamangala) ನಡೆದಿದೆ.

ಶಿವಲೀಲಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಪೋಷಕರ ವಿರೋಧದ ನಡುವೆಯೂ ಲಕ್ಷ್ಮಣ ಎಂಬಾನನ್ನು ಈಕೆ ಪ್ರೀತಿಸಿ ವಿವಾಹವಾಗಿದ್ದರು. ಇದನ್ನೂ ಓದಿ: ಸ್ಕಾರ್ಪಿಯೋ, 1 ಕೋಟಿ ಮೌಲ್ಯದ ಚಿನ್ನ ಕೊಟ್ಟರು ತೀರದ ವರದಕ್ಷಿಣೆ ದಾಹ – ಪತಿಯ ಕಿರುಕುಳಕ್ಕೆ ಕಟ್ಟಡದಿಂದ ಜಿಗಿದು ಪ್ರಾಣಬಿಟ್ಟ ಮಹಿಳೆ

6 ವರ್ಷಗಳ ಹಿಂದೆ ಕಲಬುರಗಿಯಿಂದ ಕಾಟನ್ ಪೇಟೆಗೆ ಕೆಲಸ ಅರಸಿ ಬಂದಿದ್ದ ಶಿವಲೀಲಾಗೆ ಲಕ್ಷ್ಮಣನ ಮೇಲೆ ಪ್ರೀತಿಯಾಗಿತ್ತು. ಇಬ್ಬರೂ ಪ್ರೀತಿಸಿ 4 ವರ್ಷದ ಹಿಂದೆ ಪೋಷಕರ ವಿರೋಧ ಇದ್ದರೂ ಮದುವೆಯಾಗಿದ್ದರು.

ಮದುವೆಯಾದ ಬಳಿಕ, ‘ನಿನಗೆ ಮಕ್ಕಳು ಆಗಲ್ಲ’ ಅಂತ ಲಕ್ಷ್ಮಣ ನಿತ್ಯ ಕುಡಿದು ಬಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇಬ್ಬರ ನಡುವೆ ಸಾಕಷ್ಟು ಬಾರಿ ಜಗಳವಾಗಿದ್ದು, ವರದಕ್ಷಿಣೆ ತರಲು ಪೀಡಿಸುತ್ತಿದ್ದ ಎನ್ನಲಾಗಿದೆ. ಇಬ್ಬರು ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವನಪುರದಲ್ಲಿ ವಾಸವಾಗಿದ್ದರು. ಇದನ್ನೂ ಓದಿ: ರೈಲು ಬೋಗಿಯಲ್ಲಿ ಶಿರಚ್ಛೇದಿತ ದೇಹ, ಕತ್ತರಿಸಿದ ರುಂಡ ಪತ್ತೆ – ಹೌಹಾರಿದ ಸಿಬ್ಬಂದಿ

ಪ್ರೀತಿಸಿದ ಗಂಡನ ಕಿರುಕುಳ ತಾಳಲಾರದೆ ಕಳೆದ ರಾತ್ರಿ ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದು, ಗಂಡ ಲಕ್ಷ್ಮಣ ವಿರುದ್ಧ ಶಿವಲೀಲಾ ಪೋಷಕರು ಕಿರುಕುಳ ದೂರು ದಾಖಲಿಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

[ad_2]

Source link publictv.in

Leave a Reply

Your email address will not be published. Required fields are marked *