Advertisement

ರೈಲು ಬೋಗಿಯಲ್ಲಿ ಶಿರಚ್ಛೇದ ಮಾಡಿದ ದೇಹ, ಕತ್ತರಿಸಿದ ರುಂಡ ಪತ್ತೆ !!

[ad_1]

ಛಪ್ರಾದಿಂದ ಲಕ್ನೋಗೆ ಸಂಚರಿಸುತ್ತಿದ್ದ ಗೋಮ್ತಿನಗರ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ಶಿರಚ್ಛೇದಿತ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ. 

ಛಪ್ರಾದಿಂದ ಲಕ್ನೋಗೆ ಪ್ರಯಾಣಿಸುತ್ತಿದ್ದ ಗೋಮ್ತಿನಗರ ಎಕ್ಸ್‌ಪ್ರೆಸ್‌ ರೈಲಿನ (Gomtinagar Express Train) ಬೋಗಿಯೊಂದರಲ್ಲಿ ಈ ಘಟನೆ ನಡೆದಿದೆ. ರೈಲಿನ ಸ್ವಚ್ಛತಾ ಸಿಬ್ಬಂದಿ ಎಸಿ ಸ್ಲೀಪರ್ ಕೋಚ್ ಬೋಗಿಯನ್ನು ಸ್ವಚ್ಛಗೊಳಿಸುತ್ತಿರುವಾಗ ಅನುಮಾಸ್ಪದವಾಗಿ ಚೀಲ ಮತ್ತು ಒಂದು ಬಾಕ್ಸ್ ಕಂಡು ಬಂದಿದೆ. ಅನುಮಾನಗೊಂಡ ಸಿಬ್ಬಂದಿ ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಚೀಲದಲ್ಲಿ ಏನಿದೆ ಎಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಶಿರಚ್ಛೇದಿತ ದೇಹ ಹಾಗೂ ಇತರೆ ಭಾಗಗಳನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಿಟ್ಟಿರುವುದು ಕಂಡುಬಂದಿದೆ. 

ಘಟನೆ ಸಂಬಂಧ ರೈಲ್ವೆ ರಕ್ಷಣಾ ಪಡೆ ಹಾಗೂ ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮೃತ ಮಹಿಳೆಯ ಗುರುತು ಪತ್ತೆ ಮಾಡಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ರೈಲ್ವೆ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದು, ಭಾನುವಾರ (ಮೇ 17) ಗೋಮ್ತಿನಗರ ಎಕ್ಸ್ಪ್ರೆಸ್ ರೈಲು ಸಂಖ್ಯೆ 15114 ರ ಎನ್‌ಇಆರ್ ಎಸ್ 1 ಕೋಚ್ ನಂ. 217570 ರಲ್ಲಿ ಒಂದು ಬ್ಯಾಗ್ ಮತ್ತು ಬಾಕ್ಸ್ ಪತ್ತೆಯಾಗಿದೆ. ರೈಲ್ವೆ ರಕ್ಷಣಾ ಅಧಿಕಾರಿಗಳು ಮತ್ತು ರೈಲ್ವೆ ಪೊಲೀಸ್ ತಂಡಗಳು ಪರೀಶಿಲನೆ ನಡೆಸಿದಾಗ ತುಂಡುತುಂಡಾಗಿ ಕತ್ತರಿಸಿದ ಶವ ಸಿಕ್ಕಿದೆ. ಮಹಿಳೆಯ ವಯಸ್ಸು 30 ರಿಂದ 35 ಇರಬಹುದೆಂದು ಅಂದಾಜಿಸಲಾಗಿದೆ. 

banner

ಇನ್ನೂ ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಯುತ್ತಿದೆ. ಜೊತೆಗೆ ಪ್ರಯಾಣಿಕರ ಚಲನವಲನ ಹಾಗೂ ನೆರೆಯ ಜಿಲ್ಲೆಗಳು ಮತ್ತು ರಾಜ್ಯಗಳಲ್ಲಿ ದಾಖಲಾಗಿರುವ ಕಾಣೆಯಾದವರ ಮಾಹಿತಿ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



[ad_2]

Source link

Leave a Reply

Your email address will not be published. Required fields are marked *