Advertisement

ಇಶಾನ್‌ ಬೆಂಕಿ ಆಟ, ಚೆನ್ನೈಗೆ ಸನ್‌ ಸ್ಟ್ರೋಕ್‌ – ಹೈದರಾಬಾದ್‌ಗೆ ಸೂಪರ್‌ ಜಯ, ಪ್ಲೇಆಫ್‌ಗೆ ಎಂಟ್ರಿ

[ad_1]

SRH 1

ಚೆನ್ನೈ: ಇಶಾನ್‌ ಕಿಶನ್‌ (Ishan Kishan) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಸನ್‌ ರೈಸರ್ಸ್‌ ಹೈದರಾಬಾದ್‌ (SRH) ಚೆನ್ನೈ ಸೂಪರ್‌ ಕಿಂಗ್ಸ್‌ (CSK) ವಿರುದ್ಧ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಪ್ಲೇಆಫ್‌ ಪ್ರವೇಶಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಬೀಸಿದ ಚೆನ್ನೈ 7 ವಿಕೆಟ್‌ ನಷ್ಟಕ್ಕೆ 180 ರನ್‌ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್‌ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್‌ ನಷ್ಟಕ್ಕೆ 181 ರನ್‌ ಹೊಡೆದು ಜಯ ಸಾಧಿಸಿತು.

ತವರಿನಲ್ಲಿ ಚೆನ್ನೈ ಸೋತ ಕಾರಣ ಐಪಿಎಲ್‌ ಪ್ಲೇಆಫ್‌ ಕನಸು ಕ್ಷೀಣಿಸಿದೆ. ಮುಂದೆ ಪಂಜಾಬ್‌, ರಾಜಸ್ಥಾನ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಾವಾಡುವ ಎಲ್ಲಾ ಪಂದ್ಯಗಳನ್ನು ಸೋತರಷ್ಟೇ ಪ್ಲೇಆಫ್‌ ಪ್ರವೇಶಿಸಬಹುದು.

ಚೇಸಿಂಗ್‌ ಶುರುಮಾಡಿದ ಸನ್‌ರೈಸರ್ಸ್‌ ಹೈದರಾಬಾದ್‌ 18 ರನ್‌ಗೆ ಮೊದಲ ವಿಕೆಟ್‌ ಕಳೆದುಕೊಂಡಿತು. ಆರಂಭದಲ್ಲಿ ಎಡವಿದರೂ ಕೂಡ ಅಭಿಷೇಕ್‌ ಶರ್ಮಾ ಹಿಡಿತ ಸಾಧಸಿದರು. ಆನಂತರ ಕ್ರೀಸ್‌ಗೆ ಬಂದ್‌ ಇಶಾನ್‌ ಕಿಶನ್ ಹಾಗೂ ಹೆನ್ರಿಚ್‌ ಕ್ಲಾಸೇನ್‌ 41 ಎಸೆತಕ್ಕೆ ಬರೋಬ್ಬರಿ 75 ರನ್‌ಗಳ ಜೊತೆಯಾಟವಾಡಿದರು.

ಅಭಿಷೇಕ್‌ ಶರ್ಮಾ 21 ಎಸೆತಗಳಲ್ಲಿ 26 ರನ್‌, ಹೆನ್ರಿಚ್‌ ಕ್ಲಾಸೇನ್‌ 26 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸ್‌ ಬಾರಿಸಿ 47 ರನ್‌ ಗಳಿಸಿದರು. ಇಶಾನ್‌ ಕಿಶನ್‌ 47 ಎಸೆತಗಳಲ್ಲಿ 3 ಸಿಕ್ಸ್‌, 7 ಬೌಂಡರಿ ಬಾರಿಸಿ, 70 ರನ್‌ ಚಚ್ಚಿದರು. ಚೆನ್ನೈ ಪರ ಬೌಲಿಂಗ್‌ ಮಾಡಿದ ಮುಖೇಶ್‌ ಚೌಧರಿ 2 ವಿಕೆಟ್‌, ಅಕೇಲ್‌ ಹೊಸೈನ್‌ ಹಾಗೂ ನೂರ್‌ ಅಹ್ಮದ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಇದಕ್ಕೂ ಮುನ್ನ‌ ಬ್ಯಾಟಿಂಗ್‌ ಮಾಡಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಉತ್ತಮ ಆರಂಭವನ್ನೇ ನೀಡಿತು. 2.3 ಓವರ್‌ ಹೊತ್ತಿಗೆ 27 ರನ್‌ಗಳಿಸಿದ್ದ ಸಂಜು ಕಮ್ಮಿನ್ಸ್ ಎಸೆದ ಆಫ್-ಸ್ಟಂಪ್ ಬೌಲ್‌ಗೆ ಬ್ಯಾಟ್‌ ಬೀಸಿ, ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಿದರು. ಬಳಿಕ ಡೆಲಾವ್ಡ್‌ ಬ್ರೆವಿಸ್‌, ಕಾರ್ತಿಕ್‌ ಶರ್ಮಾ ತಂಡವನ್ನು ಮುನ್ನಡೆಸಿದರು. ಉತ್ತಮ ಬ್ಯಾಟಿಂಗ್‌ ಪ್ರದರ್ಶನದಿಂದ 180 ರನ್‌ಗಳ ಮೊತ್ತ  ಪೇರಿಸಲು ಸಹಕಾರಿಯಾದರು.

ಸಂಜು ಸ್ಯಾಮ್ಸನ್‌ 13 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸ್‌ ಬಾರಿಸಿ 27 ರನ್‌, ಕಾರ್ತಿಕ್‌ ಶರ್ಮಾ 19 ಎಸೆತಗಳಲ್ಲಿ 32 ರನ್‌, ಡೆಲಾವ್ಡ್‌ ಬ್ರೆವಿಸ್‌ 27 ಎಸೆತಗಳಲ್ಲಿ 44 ರನ್‌, ಶಿವಂ ದುಬೆ 23 ಎಸೆತಗಳಲ್ಲಿ 26 ರನ್‌ ಗಳಿಸಿದರು. ಹೈದರಾಬಾದ್‌ ಪರ ಬೌಲಿಂಗ್‌ ಮಾಡಿದ ಪ್ಯಾಟ್‌ ಕಮ್ಮಿನ್ಸ್‌ 3 ವಿಕೆಟ್‌ ಕಿತ್ತರು. ಸಕೀಬ್‌ ಹುಸೇನ್‌ 2 ವಿಕೆಟ್‌, ಮಾಲಿಂಗ್‌, ಹಿಂಗೆ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡರು.

[ad_2]

Source link publictv.in

Leave a Reply

Your email address will not be published. Required fields are marked *