[ad_1]

ಬೆಂಗಳೂರು: ದೇಶದಲ್ಲಿ ಪೆಟ್ರೋಲ್ (Petrol Price) ಹಾಗೂ ಡೀಸೆಲ್ ದರ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ (Bengaluru) ಎಲೆಕ್ಟ್ರಿಕ್ ವಾಹನಗಳಿಗೆ ಫುಲ್ ಡಿಮ್ಯಾಂಡ್ ಶುರುವಾಗಿದೆ.
ಪಶ್ಚಿಮ ಏಷ್ಯಾದಲ್ಲಿನ ಸಮರದ ಎಫೆಕ್ಟ್‌ನಿಂದ ಇಂಧನ ಬಿಕ್ಕಟ್ಟು ಶುರುವಾಗಿದೆ. ಇಂಧನ ದರ ಏರಿಕೆಯಿಂದ ಪ್ರಯಾಣ ವೆಚ್ಚ ಹೆಚ್ಚಾಗಿದೆ. ಇದು ವಾಹನ ಸವಾರರ ಆರ್ಥಿಕ ಒತ್ತಡಕ್ಕೆ ಕಾರವಾಗಿದೆ. ಇತ್ತೀಚೆಗೆ ಪೆಟ್ರೋಲ್, ಡೀಸೆಲ್ ದರ ಪ್ರತಿ ಲೀಟರ್‌ಗೆ ಮೂರು ರೂಪಾಯಿ ಏರಿಕೆಯಾಗಿತ್ತು. ಇಂದು 90 ಪೈಸೆ ಏರಿಕೆಯಾಗಿದೆ. ವಾಹನ ಸವಾರರ ಆಕ್ರೋಶ ಸಹ ಇದಕ್ಕೆ ಜೋರಾಗಿದೆ. ಈ ನಡುವೆ ಮತ್ತೆ ಬಹುತೇಕ ಜನ ಎಲೆಕ್ಟ್ರಿಕ್ ಬೈಕ್ ಗಳಿಗೆ (Electric Bikes) ಶಿಫ್ಟ್ ಆಗ್ತಿದ್ದಾರೆ. ಇದನ್ನೂ ಓದಿ: ದೇಶದ ಜನರಿಗೆ ಬೆಳ್ಳಂಬೆಳಗ್ಗೆ ಶಾಕ್ – ಪೆಟ್ರೋಲ್, ಡೀಸೆಲ್ ದರ 90 ಪೈಸೆ ಹೆಚ್ಚಳ
ರಾಜಾಜಿನಗರದ ಇವಿ ಬೈಕ್ ಶೋರೂಂ ಅಂಗಡಿಗಳಿಗೆ ಜನ ನಿತ್ಯ ಇವಿ ಬೈಕ್ ಗಳ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಕೆಲವ್ರು ಬುಕ್ ಮಾಡ್ತಿದ್ದಾರೆ. ಪರಿಸರ ಸ್ನೇಹಿ, ಕಡಿಮೆ ನಿರ್ವಹಣಾ ವೆಚ್ಚ ಹಾಗೂ ಇಂಧನ ಖರ್ಚು ಕಡಿಮೆ ಇರುವ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳತ್ತ ಜನ ಮನಸ್ಸು ಮಾಡ್ತಿದ್ದಾರೆ.
ಕರ್ನಾಟಕ ಮೂಲದ ಹಲವು ಉದ್ಯಮಿಗಳು ಈ ನೂತನ ಹೊಸ ಇವಿ ಬೈಕ್‌ಗಳನ್ನು ತಯಾರಿಸಿದ್ದು, ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಹಲವು ಫಿಚರ್ಸ್ ಹಾಗೂ ಕಡಿಮೆ ಬಜೆಟ್ ನಲ್ಲಿ ಬೈಕ್ ದರ ನಿಗದಿ ಮಾಡಲಾಗಿದೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ – ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಹೇಗಿದೆ ಇಂದಿನ ದರ?
[ad_2]
Source link publictv.in

















Leave a Reply