Advertisement

ನಮ್ಮ ದೇವಾಲಯಕ್ಕೆ ಚಪ್ಪಲಿ ಧರಿಸಿ ಬರಬೇಡ- ಬಾದಾಮಿ ಗುಹಾಲಯದಲ್ಲಿ ಮುಸ್ಲಿಂ ಯುವತಿಗೆ ಹಿಂದೂ ಯುವತಿ ಕ್ಲಾಸ್

[ad_1]

ಇತಿಹಾಸ ಪ್ರಸಿದ್ಧ ಬಾದಾಮಿ ಗುಹಾಲಯಗಳನ್ನು ವೀಕ್ಷಿಸಲು ಪ್ರತಿನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಈ ವೇಳೆ ಬಾದಾಮಿ ಗುಹಾಲಯದಲ್ಲಿ ಚಪ್ಪಲಿ ಧರಿಸಿ ಕುಳಿತಿದ್ದ ಮುಸ್ಲಿಂ ಯುವತಿಯೊಬ್ಬಳನ್ನು ನೋಡಿ ಹಿಂದೂ ಪ್ರವಾಸಿಗರೊಬ್ಬರು ಕೆಂಡಾಮಂಡಲವಾಗಿದ್ದು ಆಕೆಯನ್ನು ತರಾಟೆಗೆ ತೆಗೆದುಕೊಂಡ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು, ಬಾದಾಮಿಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆಯೊಬ್ಬರು ದೇವಾಲಯದ ಆವರಣದಲ್ಲಿ ಚಪ್ಪಲಿ ಧರಿಸಿ ಕುಳಿತಿದ್ದ ಯುವತಿಯನ್ನು ನೋಡಿ ಹಿಂದೂ ಯುವತಿ ಒಬ್ಬಳು ನಮ್ಮ ಹಿಂದೂ ದೇವಾಲಯದೊಳಗೆ ಚಪ್ಪಲಿ ಧರಿಸಿ ಬಂದು ನಮ್ಮ ನಂಬಿಕೆಗೆ ಧಕ್ಕೆ ತಂದಿರುವುದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಾನು ಇಲ್ಲಿನ ಸಿಬ್ಬಂದಿ ಎಂದು ಮುಸ್ಲಿಂ ಯುವತಿ ಹೇಳಿಕೊಂಡಿದ್ದು ಕುತ್ತಿಗೆಯಲ್ಲೂ ಒಂದು ಐಡಿ ಕಾರ್ಡ್ ಹಾಕಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನಮ್ಮ ಧಾರ್ಮಿಕ ಶ್ರದ್ಧಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರೆ ಇಲ್ಲಿನ ಸಂಪ್ರದಾಯವನ್ನು ಗೌರವಿಸುವದನ್ನೂ ಕಲಿಯಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.



[ad_2]

Source link

Leave a Reply

Your email address will not be published. Required fields are marked *