Advertisement

ಬಾದಾಮಿ ದೇಗುಲದ ಒಳಗಡೆ ಚಪ್ಪಲಿ ಧರಿಸಿ ಕುಳಿತ ಸ್ಟಾಫ್‌ – ಹಿಂದೂ ಪ್ರವಾಸಿ ಮಹಿಳೆಯಿಂದ ತರಾಟೆ

[ad_1]

Staff wearing slippers inside Badami temple scolded by Hindu tourist woman

ಬಾಗಲಕೋಟೆ: ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣವಾದ ಬಾದಾಮಿ (Badami) ಪಟ್ಟಣದ ದೇವಾಲಯದ ಆವರಣದಲ್ಲಿ ಮುಸ್ಲಿಂ ಸಿಬ್ಬಂದಿ (Muslim) ಚಪ್ಪಲಿ ಧರಿಸಿ ಕುಳಿತಿದ್ದಕ್ಕೆ ಹಿಂದೂ ಪ್ರವಾಸಿ ಮಹಿಳೆಯೊಬ್ಬರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ತರಾಟೆಗೆ ತೆಗೆದುಕೊಂಡಿದ್ದಾರೆ.

ಚಪ್ಪಲಿ ಧರಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಕೆಲಕಾಲ ತೀವ್ರ ವಾಗ್ವಾದ ನಡೆದಿದೆ. ಹಿಂದೂ ಮಹಿಳೆ ಮತ್ತು ಅಲ್ಲಿದ್ದ ಇತರ ಪ್ರವಾಸಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಗಾಬರಿಗೊಂಡ ಮುಸ್ಲಿಂ ಯುವತಿ ಸ್ಥಳದಲ್ಲೇ ಅಳುತ್ತಾ ತನ್ನ ಪರಿಚಿತರಿಗೆ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಹಿಂದೂ ಪ್ರವಾಸಿ ಮಹಿಳೆ, ಪವಿತ್ರವಾದ ದೇವಾಲಯದ ಆವರಣದಲ್ಲಿ ಚಪ್ಪಲಿ ಬಿಡುವಂತೆ ನಾನು ತಿಳಿಸಿದ್ದೆ.ಆದರೆ, ಎಷ್ಟು ಬಾರಿ ಹೇಳಿದರೂ ಯುವತಿ ಚಪ್ಪಲಿ ತೆಗೆಯದೆ ಹಠ ತೋರಿದ್ದಾಳೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ದೇವಾಲಯದ ಚಿನ್ನದಿಂದ ಹಣಗಳಿಸುವ ಯೋಜನೆಗಳಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ಯುವತಿಯ ವರ್ತನೆಯಿಂದ ಆಕ್ರೋಶಗೊಂಡ ಹಿಂದೂ ಮಹಿಳೆ, “ನಾವು ಎಂದಾದರೂ ನಿಮ್ಮ ದರ್ಗಾಕ್ಕೆ ಚಪ್ಪಲಿ ಹಾಕಿಕೊಂಡು ಹೋಗುತ್ತೀವಾ? ನಿಮಗೇಕೆ ಇಷ್ಟೊಂದು ಅಹಂಕಾರ? ಐಡಿಯಲ್ಲಿ ರೋಷನಿ ಮುಸ್ತಾಫಿ  ಅಂತ ಹೆಸರು ಇದೆ. ಧಾರ್ಮಿಕ ಸ್ಥಳಗಳಿಗೆ ಗೌರವ ಕೊಡುವುದನ್ನು ಕಲಿಯಿರಿ” ಎಂದು ಸ್ಥಳದಲ್ಲೇ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.  ಇದನ್ನೂ ಓದಿ: ಹಿಂದೂ ಮಹಿಳೆ ನೆರವು ಕೇಳಿದ್ದ ಮುಸ್ಲಿಂ ಮಹಿಳೆ ಅಮ್ಮ-ಮಗಳು: ಅಸಲಿ ಸತ್ಯ ಬಿಚ್ಚಿಟ್ಟು ಹೆಬ್ಬಾಳ್ಕರ್‌ಗೆ ಬಿಜೆಪಿ ತಿರುಗೇಟು

ಈ ಇಡೀ ಘಟನೆಯನ್ನು ಅಲ್ಲಿನ ಪ್ರವಾಸಿಗರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಸದ್ಯ ಬಾಗಲಕೋಟೆ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್‌ ಆಗುತ್ತಿದೆ.

[ad_2]

Source link publictv.in

Leave a Reply

Your email address will not be published. Required fields are marked *