Advertisement

ರಾಜೀವ್ ಹತ್ಯೆಗೈದ LTTE ಮುಖ್ಯಸ್ಥ ಪ್ರಭಾಕರನ್‌ಗೆ ವಿಜಯ್ ಶೃದ್ಧಾಂಜಲಿ – ರಾಹುಲ್‌ ವಿರುದ್ಧ ಬಿಜೆಪಿ ವ್ಯಂಗ್ಯ

[ad_1]

Vijay Pays Tribute To Ex LTTE Chief V Prabhakaran BJP Targets Rahul Gandhi

– ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕರೆ ಸಾಕು:ಬಿಜೆಪಿ
– ಭಾರತದಲ್ಲಿ ಎಲ್‌ಟಿಟಿಇ ನಿಷೇಧ

ನವದೆಹಲಿ: ತಮಿಳುನಾಡಿನ ನೂತನ ಮುಖ್ಯಮಂತ್ರಿ ಹಾಗೂ ಟಿವಿಕೆ (TVK) ಪಕ್ಷದ ಸಂಸ್ಥಾಪಕ ನಟ ವಿಜಯ್ ಅವರು ಶ್ರೀಲಂಕಾದ ಮುಲ್ಲಿವೈಕ್ಕಲ್ ಸ್ಮರಣಾರ್ಥ ದಿನದಂದು (Mullivaikkal Remembrance Day) ಎಲ್‌ಟಿಟಿಇ (LTTE) ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಅವರಿಗೆ ಪರೋಕ್ಷವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದು ಈಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ನಟ ಮತ್ತು ಸಿಎಂ ವಿಜಯ್ ಅವರು ತಮ್ಮ ಟಿವಿಕೆ ವಿಜಯ್‌ ಖಾತೆಯಲ್ಲಿ, “ಮುಲ್ಲಿವೈಕ್ಕಲ್ ನೆನಪುಗಳನ್ನು ನಮ್ಮ ಹೃದಯದಲ್ಲಿ ಇಟ್ಟುಕೊಳ್ಳೋಣ. ಸಮುದ್ರದಾಚೆ ವಾಸಿಸುವ ನಮ್ಮ ತಮಿಳು ಬಾಂಧವರ ಹಕ್ಕುಗಳಿಗಾಗಿ ನಾವು ಯಾವಾಗಲೂ ಜೊತೆಯಾಗಿ ನಿಲ್ಲುತ್ತೇವೆ” ಎಂದು ತಮಿಳಿನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಶ್ರೀಲಂಕಾದಲ್ಲಿ ತಮಿಳು ನಾಗರಿಕರ ಮೇಲಿನ ದೌರ್ಜನ್ಯ ಕೊನೆಗೊಂಡ ಹಾಗೂ ಪ್ರಭಾಕರನ್ ಸಾವನ್ನಪ್ಪಿದ ಮೇ 18 ರ ದಿನವನ್ನು ತಮಿಳು ನರಮೇಧದ ನೆನಪಿನ ದಿನವನ್ನಾಗಿ ಆಚರಿಸಲಾಗುತ್ತದೆ.

ಯಾಕೆ ವಿವಾದ?
1991 ರಲ್ಲಿ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದ ಕಾರಣಕ್ಕಾಗಿ ಭಾರತದಲ್ಲಿ ಎಲ್‌ಟಿಟಿಇ (LTTE) ಸಂಘಟನೆಯನ್ನು ನಿಷೇಧಿಸಲಾಗಿದೆ. ಪ್ರಭಾಕರನ್ ಈ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದನು. ಇದನ್ನೂ ಓದಿ: ಜಯಲಲಿತಾ ಆರಂಭಿಸಿದ್ದ ಅಮ್ಮ ಕ್ಯಾಂಟೀನ್ ನವೀಕರಣಕ್ಕೆ ಸಿಎಂ ವಿಜಯ್ ಆದೇಶ

ತಮಿಳುನಾಡಿನ ಪ್ರಮುಖ ರಾಜಕೀಯ ಪಕ್ಷಗಳಾದ ಡಿಎಂಕೆ, ಎಐಡಿಎಂಕೆ ಸಾಮಾನ್ಯವಾಗಿ ಪ್ರಭಾಕರನ್ ಅವರನ್ನು ಬಹಿರಂಗವಾಗಿ ಬೆಂಬಲಿಸುವುದರಿಂದ ದೂರ ಉಳಿಯುತ್ತವೆ. ಆದರೆ ವಿಜಯ್ ಅವರ ಈ ನಿಲುವು ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು, ತಂದೆಯನ್ನು ಹತ್ಯೆ ಮಾಡಿದ ಎಲ್‌ಟಿಟಿಇ ಮುಖ್ಯಸ್ಥನಿಗೆ ತಮಿಳುನಾಡಿನ ಹೊಸ ಮುಖ್ಯಮಂತ್ರಿ ಗೌರವ ಸಲ್ಲಿಸುತ್ತಿದ್ದರೂ ರಾಹುಲ್ ಗಾಂಧಿ ಅವರಿಗೆ ಯಾವುದೇ ತೊಂದರೆ ಇಲ್ಲ. ಕಾಂಗ್ರೆಸ್‌ಗೆ ಕೇವಲ ಅಧಿಕಾರದ ಸವಿ ಸವಿಯಲು ಸಿಕ್ಕರೆ ಸಾಕು. ಈ ಹಿಂದೆ ಎಲ್‌ಟಿಟಿಇ ಬೆಂಬಲಿಸುತ್ತಿದ್ದ ಡಿಎಂಕೆ ಜೊತೆಗೂ ಕಾಂಗ್ರೆಸ್ ಅತ್ಯಂತ ಆರಾಮದಾಯಕವಾಗಿ ಮೈತ್ರಿ ಮಾಡಿಕೊಂಡಿತ್ತು ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಮೈತ್ರಿಕೂಟ ಮತ್ತು ರಾಹುಲ್ ಗಾಂಧಿ ಅವರ ನಿಲುವನ್ನು ಪ್ರಶ್ನಿಸಿರುವ ಬಿಜೆಪಿ, ಅಧಿಕಾರದ ಆಸೆಗಾಗಿ ರಾಹುಲ್ ಗಾಂಧಿ ತಮ್ಮ ತಂದೆಯ ಹತ್ಯೆಯ ಇತಿಹಾಸವನ್ನೇ ಮರೆತರಾ? ಎಂದು ಕಿಡಿಕಾರಿದೆ.

ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ತನ್ನ ನಾಯಕನ ನಡೆಯನ್ನು ಸಮರ್ಥಿಸಿಕೊಂಡಿದೆ. ಶ್ರೀಲಂಕಾ ತಮಿಳರ ಹಕ್ಕುಗಳಿಗಾಗಿ ಮತ್ತು ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಅಮಾಯಕ ನಾಗರಿಕರ ಪರವಾಗಿ ಧ್ವನಿ ಎತ್ತುವುದು ತಮಿಳು ಐಡೆಂಟಿಟಿಯ ಭಾಗ ಎಂದು ಪಕ್ಷ ಹೇಳಿದೆ. ವಿಜಯ್ ಅವರ ಅಲ್ಪಸಂಖ್ಯಾತ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡುತ್ತಿರುವ ಎಲ್‌ಟಿಟಿಇ ಪರ ನಿಲುವಿನ ವಿಸಿಪಿ (VCK) ಪಕ್ಷವೂ ಇವರ ಬೆಂಬಲಕ್ಕೆ ನಿಂತಿದೆ.



[ad_2]

Source link publictv.in

Leave a Reply

Your email address will not be published. Required fields are marked *