Advertisement

`ವೈಭವʼದ ಆಟಕ್ಕೆ ಲಕ್ನೋ ಅಪ್ಪಚ್ಚಿ – ರನ್‌ ಮಳೆಯಲ್ಲಿ ಗೆದ್ದ ರಾಜಸ್ಥಾನ

[ad_1]

Vaibhav Suryavanshi

ಜೈಪುರ: ತವರು ನೆಲದಲ್ಲಿ ವೈಭವ್‌ ಸೂರ್ಯವಂಶಿ (Vaibhav Suryavanshi) ಅಬ್ಬರದ ಆಟಕ್ಕೆ ರಾಜಸ್ಥಾನ ರಾಯಲ್ಸ್‌ ತಂಡ ಲಕ್ನೋ ಸೂಪರ್‌ ಜೆಂಟ್ಸ್‌ ವಿರುದ್ಧ 7 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಲಕ್ನೋ ಸೂಪರ್‌ ಜೆಂಟ್ಸ್‌ (Lucknow Super Giants) ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 220 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್‌ (Rajsthan Royals) 5 ಎಸೆತಗಳಿರುವಾಗಲೇ 3 ವಿಕೆಟ್‌ ನಷ್ಟಕ್ಕೆ 225 ರನ್‌ ಗಳಿಸಿ ಭರ್ಜರಿ ಜಯ ಗಳಿಸಿದೆ.

ಇಂದಿನ ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ ರಾಜಸ್ಥಾನ್‌ ಪ್ಲೇ-ಆಫ್‌ಗೆ ಎಂಟ್ರಿಕೊಡಲು ಇನ್ನೊಂದೇ ಮೆಟ್ಟಿಲು ಬಾಕಿಯಿದೆ. ಮುಂಬೈ ವಿರುದ್ಧದ ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಟಾಪ್‌-4ರಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ

Vaibhav Suryavanshi 1

ಚೇಸಿಂಗ್‌ ಆರಂಭಿಸಿ ರಾಜಸ್ಥಾನ ಪರ ಬ್ಯಾಟ್‌ ಬೀಸಿದ ಯಶಸ್ವಿ ಜೈಸ್ವಾಲ್‌ ಸೂಪರ್‌ ಸ್ಟಾರ್ಟ್‌ ನೀಡಿದರು. ಅದಕ್ಕೆ ಸಾಥ್‌ ನೀಡಿದ ವೈಭವ್‌ ಸೂರ್ಯವಂಶಿ ಬೌಲರ್‌ಗಳನ್ನು ಬೆಂಡೆತ್ತಿದರು.

ಯಶಸ್ವಿ ಜೈಸ್ವಾಲ್‌ 23 ಎಸೆತಗಳಲ್ಲಿ 43 ರನ್‌ ಚಚ್ಚಿದ್ರೆ, ವೈಭವ್‌ ಸೂರ್ಯವಂಶಿ 38 ಎಸೆತಗಳಲ್ಲಿ 10 ಸಿಕ್ಸ್‌, 7 ಬೌಂಡರಿ 93 ರನ್‌ ಬಾರಿಸಿದರು. ಧ್ರುವ್‌ ಜುರೆಲ್‌ 38 ಎಸೆತಗಳಲ್ಲಿ 53 ರನ್‌ ಗಳಿಸಿದರು. ಲಕ್ನೋ ಪರ ಬೌಲಿಂಗ್‌ ಮಾಡಿದ ಆಕಾಶ ಸಿಂಗ್‌ ಹಾಗೂ ಮೊಹ್ಸಿನ್‌ ಖಾನ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

Mitchell Marsh

ಮಿಚೆಲ್‌ ಕೈತಪ್ಪಿದ ಶತಕ:
ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್‌ ಜೆಂಟ್ಸ್‌ನ ಪರ ಮಿಚೆಲ್‌ ಮಾರ್ಷ್‌ ಸಿಕ್ಸರ್‌, ಬೌಂಡರಿಗಳ ಮಳೆಯನ್ನೇ ಸುರಿಸಿದರು. ಆರಂಭದಿಂದಲೇ ರಾಯಲ್ಸ್‌ ಬೌಲರ್‌ಗಳನ್ನು ದಂಡಿಸಿದ ಮಾರ್ಷ್‌ ಶತಕದ ಸನಿಹದಲ್ಲಿ ಔಟಾದರು. ಜೋಶ್‌ ಇಂಗ್ಲೀಸ್‌ ಜೊತೆಗೂಡಿ 50 ಎಸೆತಗಳಲ್ಲಿ ಬರೋಬ್ಬರಿ 109 ರನ್‌ ಕಲೆ ಹಾಕಿದರು.

ಮಿಚೆಲ್‌ ಮಾರ್ಷ್‌ 57 ಎಸೆತಗಳಲ್ಲಿ 5 ಸಿಕ್ಸ್‌, 7 ಬೌಂಡರಿ ಬಾರಿಸಿ 96 ರನ್‌ಗಳಿಸಿದರು. ಜೋಶ್‌ ಇಂಗ್ಲೀಸ್‌ 29 ಎಸೆತಗಳಲ್ಲಿ 60 ರನ್ ಹಾಗೂ ನಾಯಕ ರಿಷಬ್‌ ಪಂತ 23 ಎಸೆತಗಳಲ್ಲಿ 35 ರನ್‌ ಚಚ್ಚಿದರು. ರಾಜಸ್ಥಾನ್‌ ಪರ ಬೌಲಿಂಗ್‌ ಮಾಡಿದ ಯಶ್‌ ರಾಜ್‌ 2 ವಿಕೆಟ್‌ ಕಿತ್ತರೆ, ಆರ್ಚರ್‌ 1 ವಿಕೆಟ್‌ ಪಡೆದರು.

[ad_2]

Source link publictv.in

Leave a Reply

Your email address will not be published. Required fields are marked *