Advertisement

Jn.NTR ಹುಟ್ಟುಹಬ್ಬಕ್ಕೆ ಡ್ರ್ಯಾಗನ್ ಚಿತ್ರದ ಫಸ್ಟ್ ಗ್ಲಿಂಪ್ಸ್ ರಿಲೀಸ್ – ಆಫ್ಘಾನ್ ಮಾಫಿಯಾ ಅನಾವರಣ ಮಾಡಿದ ಪ್ರಶಾಂತ್ ನೀಲ್

[ad_1]

Dragon Teaser Jr.NTR

– ಕೆಜಿಎಫ್ ನರಾಚಿ, ಸಲಾರ್ ಖಾನ್ಸಾರ್, ಡ್ರ್ಯಾಗನ್‌ನಲ್ಲಿ ಗೋಲ್ಡನ್ ಟ್ರಯಾಂಗಲ್ ಸಾಮ್ರಾಜ್ಯ ಸೃಷ್ಟಿಸಿದ ನೀಲ್
– ಮೈಂಡ್ ಬ್ಲಾಕಿಂಗ್ ಗ್ಲಿಂಪ್ಸ್; ರಗಡ್ ಮಾಸ್ ಲುಕ್‌ನಲ್ಲಿ ಜೂ.ಎನ್‌ಟಿಆರ್

ಬೆಂಗಳೂರು: ಜೂ.ಎನ್‌ಟಿಆರ್-ನೀಲ್ ಕಾಂಬಿನೇಷನ್‌ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಡ್ರ್ಯಾಗನ್ (Dragon Teaser) ಸಿನಿಮಾದ ಗ್ಲಿಂಪ್ಸ್ ಔಟ್ ಆಗಿದೆ. ಜ್ಯೂನಿಯರ್ ಎನ್‌ಟಿಆರ್ (Jr.NTR) ಬರ್ತ್‌ಡೇ ಹಿನ್ನೆಲೆ ಚಿತ್ರತಂಡ ಗ್ಲಿಂಪ್ಸ್ ರಿಲೀಸ್ ಮಾಡಿದೆ. ಮಧ್ಯರಾತ್ರಿ 11.59 ಕ್ಕೆ 4 ನಿಮಿಷ 35 ಸೆಕೆಂಡ್‌ನ ಬಹುದೊಡ್ಡ ಗ್ಲಿಂಪ್ಸ್ ರಿಲೀಸ್ ಆಗಿದ್ದು ಜೂ.ಎನ್‌ಟಿಆರ್‌ ಮಾಸ್ ಲುಕ್ ಮತ್ತು ಆ್ಯಕ್ಷನ್ ದೃಶ್ಯಗಳು ಗೂಸ್ ಬಂಪ್ಸ್ ತರಿಸುತ್ತಾ ಇದೆ. ಇದೇ ಜೂನ್ 11 ರಂದು ಸಿನಿಮಾ ರಿಲೀಸ್ ಆಗ್ತಾ ಇರೋದನ್ನ ಚಿತ್ರತಂಡ ಖಚಿತಪಡಿಸಿದೆ.

ಬ್ರಿಟಿಷ್ ಆಳ್ವಿಕೆ, ಆಫ್ಘಾನಿಸ್ತಾನದ ಮಾಫಿಯಾ ಮತ್ತು ಡ್ರಗ್ಸ್ ಕಳ್ಳ ಸಾಗಣೆಯ ಹಿನ್ನೆಲೆ ಇರೋದು ಗ್ಲಿಂಪ್ಸ್‌ನಲ್ಲಿ ಗೊತ್ತಾಗುತ್ತಾ ಇದೆ. ಕೆಜಿಎಫ್, ಸಲಾರ್ ಬಳಿಕ ಪ್ರಶಾಂತ್ ನೀಲ್ (Prashanth Neel) ಮತ್ತೊಂದು ದೊಡ್ಡ ಕಥಾಹಂದರವನ್ನ ಅನಾವರಣ ಮಾಡ್ತಾ ಇರೋದು ಗೊತ್ತಾಗ್ತಾ ಇದೆ. ಗ್ಲಿಂಪ್ಸ್ ಉದ್ದಕ್ಕೂ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟುಹಾಕಿದೆ. ಈ ಚಿತ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್ ಲುಜೆನ್‌ ಎಂಬ ಪ ಅಸ್ಸಾಸಿನ್ ಹಂತಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಆರ್ಥಿಕವಾಗಿ ಸ್ವತಂತ್ರರಾದ ನಂತರವೇ ಮದುವೆ ಬಗ್ಗೆ ಯೋಚಿಸಿ – ಮಹಿಳೆಯರಿಗೆ ಕಂಗನಾ ಕಿವಿಮಾತು

ಈ ಚಿತ್ರದಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್, ವಿಲನ್ ಆಗಿ ಅನಿಲ್ ಕಪೂರ್, ರಘುವೀರ್ ರಾಥೋಡ್ ಮತ್ತು ತೋವಿನೋ ಥಾಮಸ್ ಕಾಣಿಸಿಕೊಂಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದು, ರವಿ ಬಸ್ರೂರ್ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

[ad_2]

Source link publictv.in

Leave a Reply

Your email address will not be published. Required fields are marked *