Advertisement

ಜಾಮೀನು ನಿರಾಕರಿಸಿದ ಬಳಿಕ ಜೈಲಿನಲ್ಲಿ ದರ್ಶನ್ ಆತ್ಮಹ*ತ್ಯೆಗೆ ಯತ್ನ?‌ DGP ಅಶೋಕ್ ಕುಮಾರ್ ಸ್ಪಷ್ಟನೆ

[ad_1]

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಲೆ ಆರೋಪಿ ಆಗಿರುವ ನಟ ದರ್ಶನ್ ಜಾಮೀನು ಅರ್ಜಿ ಸಲ್ಲಿಸಿದ್ದು, ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣ ಸಂಬಂಧ ಉಳಿದ ಪ್ರಮುಖ ಆರೋಪಿಗಳ ವಿಚಾರಣೆಗೆ ಒಂದು ವರ್ಷ ಸಮಯ ನೀಡಿದ್ದು ಹಾಗಾಗಿ ನಟ ದರ್ಶನ್ ಇನ್ನೂ ಒಂದು ವರ್ಷ ಜೈಲಲ್ಲಿ ಕಾಲ ಕಳೆಯ ಬೇಕಾಗಿದೆ. ನಿನ್ನೆಯಷ್ಟೇ (ಮೇ 19) ದರ್ಶನ್‌ ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀಶ್‌ರನ್ನು ಭೇಟಿಯಾಗಿದ್ದಾರೆ. 

ಜಾಮೀನು ನಿರಾಕರಿಸಿದ ತೀರ್ಪು ಹೊರಬಿದ್ದ ಬೆನ್ನಲ್ಲೇ ಸೋಶಿಯಲ್‌ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಒಂದು ಸುದ್ದಿ ಹರಿದಾಡಿದೆ. ಸುಪ್ರೀಂಕೋರ್ಟ್ ಜಾಮೀನು ನಿರಾಕರಿಸಿದ ನಂತರ, ಅವರು ಆತ್ಮಹ*ತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಹರಡಿತ್ತು. ಇದು ʼದಾಸʼನ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು. ಆದರೆ ಈ ಬಗ್ಗೆ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರು ಸ್ಪಷ್ಟನೆ ನೀಡಿದ ಬಳಿಕ ಫ್ಯಾನ್ಸ್‌ ನಿರಾಳರಾಗಿದ್ದಾರೆ.

ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಈ ಬಗ್ಗೆ ಸ್ಪಷ್ಟಪಡಿಸಿದ್ದು, ದರ್ಶನ್ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದು ʼʼಈ ವದಂತಿ ಸಂಪೂರ್ಣವಾಗಿ ಆಧಾರ ರಹಿತ. ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಅಲೋಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ನಟನ ಅಭಿಮಾನಿಗಳು ಅಂತಹ ಸುಳ್ಳು ಮಾಹಿತಿಯನ್ನು ನಂಬಬೇಡಿ. ವದಂತಿಗಳು ಸತ್ಯದಿಂದ ದೂರವಾಗಿವೆ. ದರ್ಶನ್‌ ಚೆನ್ನಾಗಿದ್ದಾರೆ” ಎಂದು ಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.



[ad_2]

Source link

Leave a Reply

Your email address will not be published. Required fields are marked *