Advertisement

ಅಡವಿಟ್ಟ ಚಿನ್ನಕ್ಕೆ ಹೆಚ್ಚಿನ ಬೆಲೆ ನೀಡುವುದಾಗಿ ವಂಚನೆ – ಮೈಸೂರಲ್ಲಿ ಚಿನ್ನದ ಹೆಸರಲ್ಲಿ ನೂರಾರು ಕೋಟಿ ದೋಖಾ

[ad_1]

Mysuru SDJ Gold Company Scam

ಮೈಸೂರು: ಅತಿ ಹೆಚ್ಚಿನ ಬಡ್ಡಿ ಆಸೆ ತೋರಿಸಿ ಸಾವಿರಾರು ಕೋಟಿ ವಂಚನೆ ಮಾಡಿರುವ ಪ್ರಕರಣ ಬೆಳಗಾವಿಯಲ್ಲಿ ಸದ್ದು ಮಾಡುತ್ತಿರುವ ಹೊತ್ತಿನಲ್ಲೇ ಮೈಸೂರಿನಲ್ಲಿ (Mysuru) ಚಿನ್ನದ (Gold) ಹೆಸರಿನಲ್ಲಿ ವ್ಯಕ್ತಿಯೊಬ್ಬ ನೂರಾರು ಜನರಿಗೆ ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಚಿನ್ನ ಖರೀದಿ ವಿಚಾರದಲ್ಲಿ ಮೈಸೂರಿನ ಸೌಂದರ್ ರಾಜ್ ಅಲಿಯಾಸ್ ಚಿನ್ನತಂಬಿ ಎಂಬಾತ ನೂರಾರು ಜನರಿಗೆ ವಂಚಿಸಿದ್ದಾನೆ. ಇವನ ವಿರುದ್ಧ ದೂರುಗಳನ್ನು ಕೊಡುವಂತೆ ಮೈಸೂರಿನ ಸಿಸಿಬಿ ಪೊಲೀಸರು (CCB Police) ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಚಿನ್ನಕ್ಕೆ ಹೆಚ್ಚಿನ ಬೆಲೆ ಕೊಡುವುದಾಗಿ ಗಿರಿವಿ ಇಟ್ಟುಕೊಂಡು ಮೋಸ ಮಾಡುತ್ತಿದ್ದ ಈತ, ಗ್ರಾಹಕರ ಮುಂದೆ ಕ್ಷಣಾರ್ಧದಲ್ಲಿ ಚಿನ್ನ ಕರಗಿಸುತ್ತಿದ್ದ. ಚಿನ್ನ ಕರಗಿಸಿದ ನಂತರ ನಿಮ್ಮದು ಅಪರಂಜಿ ಚಿನ್ನವಲ್ಲ ಎಂದು ವಂಚಿಸುತ್ತಿದ್ದ. ಕೊನೆಗೆ ಬಾಡಿಗಾರ್ಡ್‌ಗಳ ಮೂಲಕ ಹೆದರಿಸಿ ಕಡಿಮೆ ಹಣ ಕೊಟ್ಟು ಸೆಟ್ಲು ಮಾಡುತ್ತಿದ್ದ. ಇದನ್ನೂ ಓದಿ: ಸಂಬಂಧಗಳನ್ನು ಸಿಹಿಗೊಳಿಸುತ್ತಿದ್ದೇವೆ – ಮೋದಿ ಕೊಟ್ಟ ‘ಮೆಲೋಡಿ’ ಟಾಫಿಗೆ ಪಾರ್ಲೆ ಫನ್ನಿ ರಿಯಾಕ್ಷನ್

ಮೈಸೂರಿನಲ್ಲಿ ವಿವಿಧ ಹೆಸರಿನಡಿ 5ಕ್ಕೂ ಹೆಚ್ಚು ಚಿನ್ನ ಗಿರಿವಿ ಇಟ್ಟುಕೊಳ್ಳುವ ಮಳಿಗೆ ತೆರದಿದ್ದ ಚಿನ್ನತಂಬಿ, ರಾಜ್ಯದ ಹಲವು ಜಿಲ್ಲೆಗಳ ಜನರಿಗೆ ಮೋಸ ಮಾಡಿದ್ದಾನೆ. 2017 ರಿಂದ ಇಲ್ಲಿಯವರೆಗೆ ಪ್ರತಿ ನಿತ್ಯ ಅರ್ಧ ಕೆಜಿಗೂ ಹೆಚ್ಚು ಚಿನ್ನವನ್ನು ವಂಚಿಸಿದ್ದಾನೆ. ವಂಚನೆಗೊಳಗಾದ ಜನರು ದೂರು ಕೊಡಲು ಮುಂದಾದರೆ ಚಿನ್ನತಂಬಿ ಹಣಕೊಟ್ಟು ಸೆಟ್ಲುಮೆಂಟ್ ಮಾಡುತ್ತಿದ್ದ. ರೊಚ್ಚಿಗೆದ್ದ ಜನರು ನಗರ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ಮಾಡಿದ ಪರಿಣಾಮ ಎಫ್‌ಐಆರ್ ದಾಖಲಿಸಿ ಕೊಂಡು ಚಿನ್ನತಂಬಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ: 6,000 ಕೋಟಿ ಹೂಡಿಕೆಗೆ ಆ್ಯಕ್ಸಿಸ್‌ಕೇಡ್ಸ್‌ ಏರೊಸ್ಪೇಸ್‌ ಒಲವು: ಎಂ.ಬಿ ಪಾಟೀಲ್‌


[ad_2]

Source link publictv.in

Leave a Reply

Your email address will not be published. Required fields are marked *