Advertisement

ಮೋದಿ,ಮೆಲೋನಿ ದ್ವಿಪಕ್ಷೀಯ ಸಭೆ – ಭಾರತಕ್ಕೆ ಸಿಕ್ಕಿದ್ದೇನು?

[ad_1]

Giorgia Meloni Narendra Modi India Italy

ರೋಮ್‌/ನವದೆಹಲಿ: ಭಾರತ ಮತ್ತು ಇಟಲಿ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ಹೊಸದೊಂದು ಐತಿಹಾಸಿಕ ಅಧ್ಯಾಯ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ(Giorgia Meloni) ಅವರ ನಡುವೆ ನಡೆದ ಇಂದಿನ ಉನ್ನತ ಮಟ್ಟದ ದ್ವಿಪಕ್ಷೀಯ ಸಭೆಯು, ಉಭಯ ದೇಶಗಳ ಬಾಂಧವ್ಯವನ್ನು ವಿಶೇಷ ಕಾರ್ಯತಂತ್ರದ ಪಾಲುದಾರಿಕೆ (Special Strategic Partnership) ಮಟ್ಟಕ್ಕೆ ಏರಿಸಿದೆ.

ಕಳೆದ 26 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಇಟಲಿಗೆ ನೀಡಿದ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದ್ದು, ಭಾರತದ (India) ಆರ್ಥಿಕತೆ, ರಕ್ಷಣೆ ಮತ್ತು ತಂತ್ರಜ್ಞಾನ ವಲಯಕ್ಕೆ ಈ ಪ್ರವಾಸದಿಂದ ಅಭೂತಪೂರ್ವ ಲಾಭಗಳು ದೊರೆಯಲಿವೆ.

ಭಾರತಕ್ಕೆ ಸಿಕ್ಕಿದ್ದೇನು?
ಉತ್ಪಾದನಾ ವಲಯದಲ್ಲಿ ಹೂಡಿಕೆ: ಇಟಲಿಯ ಪ್ರಮುಖ ಕೈಗಾರಿಕಾ ಉದ್ಯಮಿಗಳೊಂದಿಗೆ ನಡೆದ ಜಂಟಿ ಸಭೆಯ ಫಲವಾಗಿ, ಭಾರತದ ‘ಮೇಕ್ ಇನ್ ಇಂಡಿಯಾ’ ಮತ್ತು ಉತ್ಪಾದನಾ ವಲಯದಲ್ಲಿ ಇಟಲಿ ಕಂಪನಿಗಳ ಹೂಡಿಕೆ ಗಣನೀಯವಾಗಿ ಹೆಚ್ಚಾಗಲಿದೆ.

ವ್ಯಾಪಾರ ವಿಸ್ತರಣೆ: 2023 ರಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟು 14 ಶತಕೋಟಿ ಯುರೋಗಳಷ್ಟಿತ್ತು. 2029ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 20 ಬಿಲಿಯನ್ ಯರೋಗೆ ಹೆಚ್ಚಿಸುವ ಗುರಿಯನ್ನು ಹಾಕಲಾಗಿದೆ.

ಕೃಷಿ ಮತ್ತು ಕಡಲ ಸಾರಿಗೆ: ಭಾರತದ ಕೃಷಿ ವಲಯದ ಆಧುನೀಕರಣ, ಆಹಾರ ಭದ್ರತೆಗೆ ಉತ್ತೇಜನ ಹಾಗೂ ಕಡಲ ಸಾರಿಗೆಯ ಸುಧಾರಣೆಗೆ ಸಂಬಂಧಿಸಿದಂತೆ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.  ಇದನ್ನೂ ಓದಿ: ಸಂಬಂಧಗಳನ್ನು ಸಿಹಿಗೊಳಿಸುತ್ತಿದ್ದೇವೆ – ಮೋದಿ ಕೊಟ್ಟ ‘ಮೆಲೋಡಿ’ ಟಾಫಿಗೆ ಪಾರ್ಲೆ ಫನ್ನಿ ರಿಯಾಕ್ಷನ್

Giorgia Meloni Narendra Modi India Italy 1

ರಕ್ಷಣೆ ಮತ್ತು ಸುಧಾರಿತ ತಂತ್ರಜ್ಞಾನ ಮೈತ್ರಿ
ಮಿಲಿಟರಿ ಬಲವರ್ಧನೆ: ರಕ್ಷಣಾ ಉತ್ಪಾದನೆ ಹಾಗೂ ಉಭಯ ದೇಶಗಳ ಮಿಲಿಟರಿ ತಂತ್ರಜ್ಞಾನ ವಿನಿಮಯಕ್ಕೆ ಈ ಸಭೆಯಿಂದ ಹೊಸ ಶಕ್ತಿ ಸಿಕ್ಕಿದೆ.

ಹೈಟೆಕ್ ನೆರವು: ಕೃತಕ ಬುದ್ಧಿಮತ್ತೆ (AI), ಸೆಮಿಕಂಡಕ್ಟರ್‌ಗಳು, ಕ್ಲೀನ್ ಎನರ್ಜಿ (ಸ್ವಚ್ಛ ಇಂಧನ) ಮತ್ತು ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತಕ್ಕೆ ಇಟಲಿಯ ಅತ್ಯಾಧುನಿಕ ತಾಂತ್ರಿಕ ನೆರವು ಸಿಗಲಿದೆ.

ವಿಶೇಷ ಖನಿಜಗಳ ಒಪ್ಪಂದ: ಭಾರತದ ಭವಿಷ್ಯದ ಇವಿ (EV) ಬ್ಯಾಟರಿ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಅತ್ಯಂತ ಅಗತ್ಯವಿರುವ ಪ್ರಮುಖ ಖನಿಜಗಳ (Critical Minerals) ಸುಗಮ ಪೂರೈಕೆಗಾಗಿ ಮಹತ್ವದ ಒಪ್ಪಂದ ಏರ್ಪಟ್ಟಿದೆ.

ಉದ್ಯೋಗ ಮತ್ತು ಉನ್ನತ ಶಿಕ್ಷಣ
ವಲಸೆ : ಈ ಒಪ್ಪಂದದ ಅನ್ವಯ ಭಾರತೀಯ ಸಂಶೋಧಕರು, ಶಿಕ್ಷಣ ತಜ್ಞರು ಮತ್ತು ವೃತ್ತಿಪರರಿಗೆ ಇಟಲಿಯಲ್ಲಿ ಹೆಚ್ಚಿನ ಉದ್ಯೋಗ ಹಾಗೂ ಸಂಶೋಧನಾ ಅವಕಾಶಗಳು ಮುಕ್ತವಾಗಲಿವೆ.

ಶೈಕ್ಷಣಿಕ ವಿನಿಮಯ: ಭಾರತ ಹಾಗೂ ಇಟಲಿಯ ಉನ್ನತ ಶಿಕ್ಷಣ ಸಂಸ್ಥೆಗಳ ನಡುವೆ ಜ್ಞಾನ ವಿನಿಮಯಕ್ಕಾಗಿ ಪ್ರಮುಖ ಒಪ್ಪಂದಗಳಿಗೆ ಚಾಲನೆ ನೀಡಲಾಗಿದೆ.

ಜಾಗತಿಕ ರಾಜತಾಂತ್ರಿಕ ಯಶಸ್ಸು
IMEC ಯೋಜನೆಗೆ ಇಟಲಿ ಸಾಥ್: ಚೀನಾಕ್ಕೆ ಕೌಂಟರ್ ನೀಡಬಲ್ಲ ಜಾಗತಿಕ ಮಹತ್ವಾಕಾಂಕ್ಷೆಯ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEC) ಯೋಜನೆಗೆ ಇಟಲಿ ಸಂಪೂರ್ಣ ಬೆಂಬಲ ಸೂಚಿಸಿದೆ. ಇದು ಜಾಗತಿಕ ಮಟ್ಟದಲ್ಲಿ ಭಾರತದ ವ್ಯಾಪಾರ ಮಾರ್ಗವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.  

ಐದು ವರ್ಷಗಳ ರೋಡ್‌ಮ್ಯಾಪ್:  2025 ರಿಂದ 2029 ರವರೆಗಿನ ಜಂಟಿ ಕಾರ್ಯತಂತ್ರದ ಕ್ರಿಯಾ ಯೋಜನೆಯಡಿ (Joint Strategic Action Plan), ಮುಂದಿನ ಐದು ವರ್ಷಗಳ ಕಾಲ ಉಭಯ ದೇಶಗಳ ಸಂಬಂಧಗಳು ಹೇಗೆ ಮುಂದುವರಿಯಬೇಕು ಎಂಬ ಪ್ರಾಯೋಗಿಕ ಚೌಕಟ್ಟನ್ನು ಸಿದ್ಧಪಡಿಸಲಾಗಿದೆ.

ಸಂಸ್ಕೃತಿ ಮತ್ತು ಮ್ಯೂಸಿಯಂ ಸಹಕಾರ: ಭಾರತ ಮತ್ತು ಇಟಲಿಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಮ್ಯೂಸಿಯಂಗಳ ನಡುವೆ ಸಹಕಾರಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ

ಹಣಕಾಸು ಅಪರಾಧಗಳ ತಡೆ: ಆರ್ಥಿಕ ಮತ್ತು ಹಣಕಾಸು ಅಪರಾಧಗಳನ್ನು ಜಂಟಿಯಾಗಿ ಎದುರಿಸಲು ಕಾನೂನು ಜಾರಿ ಸಂಸ್ಥೆಗಳ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ

26 ವರ್ಷದ ಬಳಿಕ ದ್ವಿಪಕ್ಷೀಯ ಭೇಟಿ:
ಮೋದಿಯವರು ಈ ಹಿಂದೆ (2021 ಮತ್ತು 2024 ರಲ್ಲಿ) G20 ಮತ್ತು G7 ಶೃಂಗಸಭೆಗಳಲ್ಲಿ ಭಾಗವಹಿಸಲು ಇಟಲಿಗೆ ತೆರಳಿದ್ದರು. ಆದರೆ ದ್ವಿಪಕ್ಷೀಯ ಮಾತುಕತೆಗೆ ತೆರಳಿದ್ದು ಇದೇ ಮೊದಲು. ಇದಕ್ಕೂ ಮುನ್ನ, 2000ನೇ ಇಸವಿಯಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂತಹ ದ್ವಿಪಕ್ಷೀಯ ಭೇಟಿ ನೀಡಿದ್ದರು.



[ad_2]

Source link publictv.in

Leave a Reply

Your email address will not be published. Required fields are marked *