Advertisement

ವಿಶ್ವದಲ್ಲೇ ಅತ್ಯಂತ ಬಿಸಿ ನಗರ ಎಂಬ ಕುಖ್ಯಾತಿಗೆ ಪಾತ್ರವಾದ ಬಂಡಾ – 75 ವರ್ಷಗಳ ದಾಖಲೆ ಬ್ರೇಕ್

[ad_1]

Weather 8

ಲಕ್ನೋ: ಉತ್ತರ ಪ್ರದೇಶದ (Uttara Pradesh) ಬುಂದೇಲ್‌ಖಂಡ ಪ್ರದೇಶದ ಬಂಡಾ (Banda) ನಗರ ವಿಶ್ವದಲ್ಲೇ ಅತ್ಯಂತ ಗರಿಷ್ಠ ತಾಪಮಾನ ದಾಖಲಾದ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ಇತ್ತೀಚೆಗಷ್ಟೇ ಬಂಡಾ ನಗರದಲ್ಲಿ ಬರೋಬ್ಬರಿ 48 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಈ ಮೂಲಕ ವಿಶ್ವದಲ್ಲೇ ಅತ್ಯಂತ ಗರಿಷ್ಠ ತಾಪಮಾನ ದಾಖಲಾದ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.ಇದನ್ನೂ ಓದಿ: ಮೋದಿ,ಮೆಲೋನಿ ದ್ವಿಪಕ್ಷೀಯ ಸಭೆ – ಭಾರತಕ್ಕೆ ಸಿಕ್ಕಿದ್ದೇನು?

ಬಂಡಾ ನಗರದಲ್ಲಿ ಗರಿಷ್ಠ ಮಟ್ಟದ ತಾಪಮಾನ ದಾಖಲಾಗಿರುವುದು ಇದೇ ಮೊದಲಲ್ಲ. ಆದರೆ, ಈ ಬಾರಿಯ ತಾಪಮಾನ ಹಳೆಯ ಎಲ್ಲಾ ದಾಖಲೆಗಳನ್ನು ಮುರಿದಿದೆ. ಇದಕ್ಕೂ ಮುನ್ನ ಏ.27ರಂದು 47.6ರಷ್ಟು ಉಷ್ಣಾಂಶ ದಾಖಲಾಗಿತ್ತು.

1951ರಲ್ಲಿ 47.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಷ ದಾಖಲಾಗಿತ್ತು. ಇದು ಈವರೆಗಿನ ದಾಖಲೆಯಾಗಿತ್ತು. ಇದೀಗ 48 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಮೂಲಕ 75 ವರ್ಷಗಳ ದಾಖಲೆಯನ್ನು ಮುರಿದಿದೆ.

ತಾಪಮಾನದ ತೀವ್ರತೆಯಿಂದಾಗಿ ಮಧ್ಯಾಹ್ನದ ವೇಳೆಗೆ ಅಂಗಡಿ-ಮುಂಗಟ್ಟುಗಳು, ವ್ಯಾಪಾರ ಸಂಸ್ಥೆಗಳು ಸಂಪೂರ್ಣವಾಗಿ ಬಂದ್ ಆಗುತ್ತಿದ್ದು, ಅಘೋಷಿತ ಕರ್ಫ್ಯೂ ಮಾದರಿಯ ವಾತಾವರಣ ನಗರದಲ್ಲಿ ನಿರ್ಮಾಣವಾಗುತ್ತಿದೆ.ಇದನ್ನೂ ಓದಿ: RCB ಅಭಿಮಾನಿಗಳಿಗೆ ಗುಡ್‌ನ್ಯೂಸ್‌ – ಸ್ಟಾರ್‌ ಆಟಗಾರ ತಂಡಕ್ಕೆ ರಿಟರ್ನ್‌


[ad_2]

Source link publictv.in

Leave a Reply

Your email address will not be published. Required fields are marked *