Advertisement

ಕೋಪಗೊಂಡು ರಾತ್ರೋತ್ರಿ ಅಪ್ಪನ ಪೆಟ್ರೋಲ್ ಬಂಕ್ ನಾಶ ಮಾಡಿದ ಮಗ!!

[ad_1]

ತಂದೆಯ ಮೇಲಿರುವ ಸಿಟ್ಟಿನಿಂದಾಗಿ ಮಗನೊಬ್ಬ ರಾತ್ರೋರಾತ್ರಿ ಬಂದು ತನ್ನ ತಂದೆಯ ಮಾಲೀಕತ್ವದ ಪೆಟ್ರೋಲ್ ಬಂಕ್ ಅನ್ನು ನಾಶ ಮಾಡಿರುವ ಅಘಾತಕಾರಿ ಘಟನೆ ಒಂದು ವಿಜಯಪುರದಲ್ಲಿ ನಡೆದಿದೆ.

ವಿಜಯಪುರದಲ್ಲಿ ಪಟ್ಟಣದ ನಾರಾಯಣಪೂರ ರಸ್ತೆಯಲ್ಲಿ ಸಂಗಣ್ಣ ಸಂಗಮ ಅವರು ಪವಾಡ ಬಸವೇಶ್ವರ ಇಂಡಿಯಲ್ ಆಯಿಲ್ ಬಂಕ್‌ ನಡೆಸುತ್ತಿದ್ದರು. ಅವರ ಪುತ್ರ ಮುತ್ತಣ್ಣ ಎಂಬುವನಿಂದಲೇ ಈ ಘಟನೆ ನಡೆದಿದೆ. 

ರಾತ್ರಿ ಏಕಾಏಕಿ ನುಗ್ಗಿ ತನ್ನ ಆವೇಶ ಪ್ರದರ್ಶಿಸಿದ ಬಂಕ್‌ನ ಮಾಲೀಕನ ಪುತ್ರ, ತೈಲ ಸರಬರಾಜು ಮಾಡುವ ಪೆಟ್ರೋಲ್ ಇಂಜಿನ್, ಗನ್, ಕಚೇರಿಯ ದಾಖಲೆಗಳು, ಲ್ಯಾಪ್‌ಟ್ಯಾಪ್ ಹಾಗೂ ಸಿಸಿ ಕ್ಯಾಮರಾಗಳನ್ನು ಮನಬಂದಂತೆ ದ್ವಂಸಗೊಳಸಿದ್ದಲ್ಲದೇ ಅಲ್ಲಲ್ಲಿ ನಿಲ್ಲಿಸಲಾಗಿದ್ದ ಹಲವು ವಾಹನಗಳಿಗೂ ಹಾನಿ ಮಾಡಿದ್ದಾನೆ. ಪಟ್ಟಣದಲ್ಲಿ ಒಂದೇ ಬಂಕ್ ಇರುವ ಪರಿಣಾಮ ವಾಹನಗಳ ಮಾಲೀಕರು ದೂರದ ಹಿರೇಮುರಾಳ ಹಾಗೂ ನಾರಾಯಣಪೂರ ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಸದ್ಯ ಘಟನೆಗೆ ಸಂಬಂಧಿಸಿದಂತೆ ಮುದ್ದೇಬಿಹಾಳ ಸಿಪಿಐ ಮಹ್ಮದ ಫಶೀವುದ್ದಿನ್ ಹಾಗೂ ಪಿಎಸ್‌ಐ ಸಂಜಯ ತಿಪ್ಪಾರಡ್ಡಿ ಬಂಕ್‌ನ ಧ್ವಂಸ ಸ್ಥಳಕ್ಕೆ ಭೇಟಿ ನೀಡಿ ಸಿಬ್ಬಂದಿ ವಿವರ ಪಡೆದುಕೊಂಡಿದ್ದು, ಘಟನೆ ನಡೆಸಿದ ಮುತ್ತಣ್ಣ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ, ವಶಕ್ಕೆ ಪಡೆದುಕೊಂಡಿದ್ದಾರೆ. ಪಟ್ಟಣದಲ್ಲಿ ಒಂದೇ ಬಂಕ್ ಇರುವ ಪರಿಣಾಮ ವಾಹನಗಳ ಮಾಲೀಕರು ದೂರದ ಹಿರೇಮುರಾಳ ಹಾಗೂ ನಾರಾಯಣಪೂರ ಹೋಗುವ ಸ್ಥಿತಿ ನಿರ್ಮಾಣವಾಗಿದೆ.

banner



[ad_2]

Source link

Leave a Reply

Your email address will not be published. Required fields are marked *