[ad_1]
1
ಧರ್ಮಸ್ಥಳ ಗ್ರಾಮದ ಬುರುಡೆ ರಹಸ್ಯ ಪ್ರಕರಣದ ತನಿಖೆ ಮತ್ತೆ ಚುರುಕು ಪಡೆದುಕೊಂಡಿದ್ದು, 4 ತಿಂಗಳ ಹಿಂದೆ 7 ಅಸ್ಥಿಪಂಜರ ಪತ್ತೆಯಾಗಿದ್ದ ಬಂಗ್ಲೆಗುಡ್ಡೆ ಕಾಡಿನಲ್ಲಿ ಎಸ್ಐಟಿ ತಂಡವು ಮತ್ತೆ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಹಿನ್ನಲೆಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ತಂಡ (FSL Team) ಭೇಟಿ ನೀಡಿದೆ.


ಮೂವರು ಅಧಿಕಾರಿಗಳನ್ನೊಳಗೊಂಡ ಎಫ್‌ಎಸ್‌ಎಲ್ ಅಧಿಕಾರಿಗಳ ತಂಡ ಇಂದು ಬೆಂಗಳೂರಿನಿಂದ (Bengaluru) ಎಸ್‌ಐಟಿ ಅಧಿಕಾರಿಗಳೊಂದಿಗೆ ಬಂಗ್ಲೆಗುಡ್ಡೆ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದೆ. 4 ತಿಂಗಳ ಹಿಂದೆ 4 ತಿಂಗಳ ಹಿಂದೆ 7 ಅಸ್ಥಿಪಂಜರ ಸಿಕ್ಕಿದ್ದ ಜಾಗದಲ್ಲಿ ಪರಿಶೀಲನೆ ನಡೆಸಿದೆ. ಅಲ್ಲದೇ ಆರೋಪಿ ಪ್ರದೀಪ್ ಕುಲಾಲ್‌ನನ್ನ ಸ್ಥಳಕ್ಕೆ ಕರೆತಂದು ಪರಿಶೀಲನೆ ನಡೆಸಲಾಗಿದೆ. ಈ ಮೂಲಕ ಎಸ್ಐಟಿ ಅಧಿಕಾರಿಗಳು ಬಂಗ್ಲೆ ಗುಡ್ಡೆಯಲ್ಲಿ ಮತ್ತೆ ಕಾರ್ಯಾಚರಣೆಗೆ ಇಳಿದಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಮಾರು ತಿಂಗಳುಗಳ ನಂತರ ಮತ್ತೆ ಫೀಲ್ಡಿಗಿಳಿದಿರುವ ಎಸ್ಐಟಿ ಅಧಿಕಾರಿಗಳು, ಬಂಗ್ಲೆ ಗುಡ್ಡೆಗೆ ಎಫ್‌ಎಸ್‌ಎಲ್ ತಜ್ಞರ ಜೊತೆ ಬುರುಡೆ ಪ್ರಕರಣದಲ್ಲಿ ಎಸ್ಐಟಿ ವಿಚಾರಣೆಗೆ ಒಳಪಟ್ಟಿದ್ದ ಪ್ರದೀಪ್ ಕುಲಾಲ್ ಎಂಬಾತನನ್ನು ಸಹ ಕರೆತಂದಿದ್ದಾರೆ. ಬಂಗ್ಲಗುಡ್ಡೆ ಕಾಡಿನಲ್ಲಿ ರಾತ್ರಿ ಹೊತ್ತು ಬುರುಡೆ ಹೊರತೆಗೆಯುವ ವಿಡಿಯೋದಲ್ಲಿದ್ದ ಪ್ರದೀಪ್ ಕುಲಾಲ್, ಪ್ರಕರಣದ ಕುರಿತು BNSS ಸೆಕ್ಷನ್ 183 ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಈ ಹಿನ್ನೆಲೆ ಆತನನ್ನು ಬಂಗ್ಲಗುಡ್ಡಕ್ಕೆ ಕರೆತಂದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
[ad_2]
Source link

















Leave a Reply