Advertisement

ಗರ್ಭಿಣಿಯಾಗಿದ್ದರೂ ‘ಡೋಲಾ ರೇ’ ಹಾಡಿಗೆ ನೃತ್ಯ ಮಾಡಿದ ಮಾಧುರಿ ದೀಕ್ಷಿತ್ – ಡ್ಯಾನ್ಸರ್ ಹೇಳಿಕೆ ವೈರಲ್

[ad_1]

4 Month Pregnant Madhuri Dixit Struggled With Fever During Dola Re Shoot Reveals Dancer

– ಸಾಂಗ್ ಶೂಟಿಂಗ್‌ಗಾಗಿ ಸತತ 17 ದಿನ ಡ್ಯಾನ್ಸ್ ಪ್ರ‍್ಯಾಕ್ಟೀಸ್

ಮುಂಬೈ: ಮಾಧುರಿ ದೀಕ್ಷಿತ್(Madhuri Dixit) ಹಾಗೂ ಐಶ್ವರ್ಯ ರೈ ಬಚ್ಚನ್ ಅಭಿನಯದ ‘ಡೋಲಾ ರೇ ಡೋಲಾ’ ಹಾಡು (Dola Re Shoot) ಇಂದಿಗೂ ಬಾಲಿವುಡ್‌ನ (Bollywood) ಐಕಾನಿಕ್ ಹಾಡುಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಆದರೆ ಈ ಹಾಡಿನ ಚಿತ್ರೀಕರಣದ ವೇಳೆ ಮಾಧುರಿ ದೀಕ್ಷಿತ್ ಎದುರಿಸಿದ್ದ ಕಷ್ಟಗಳ ಬಗ್ಗೆ ಇದೀಗ ಹೊಸ ಮಾಹಿತಿ ಹೊರಬಂದಿದೆ.

2002ರಲ್ಲಿ ಬಿಡುಗಡೆಯಾದ ದೇವದಾಸ್ ಚಿತ್ರದ ಈ ಹಾಡಿಗೆ ಖ್ಯಾತ ನೃತ್ಯ ನಿರ್ದೇಶಕಿ ಸರೋಜ್ ಖಾನ್ ನೃತ್ಯ ಸಂಯೋಜನೆ ಮಾಡಿದ್ದರು. ಚಿತ್ರತಂಡದ ಸದಸ್ಯೆಯಾಗಿದ್ದ ರೂಬಿನಾ ಖಾನ್, ಶೂಟಿಂಗ್ ವೇಳೆ ನಡೆದ ಘಟನೆಗಳನ್ನು ಹಂಚಿಕೊAಡಿದ್ದಾರೆ.

ರೂಬಿನಾ ಖಾನ್ ಹೇಳುವಂತೆ, ‘ಡೋಲಾ ರೇ’ ಹಾಡಿನ ಚಿತ್ರೀಕರಣಕ್ಕೆ ಒಟ್ಟು 17 ದಿನಗಳು ಬೇಕಾಗಿತ್ತು. ಹಾಡಿನ ಅಭ್ಯಾಸ ಮಾತ್ರ ಒಂದು ತಿಂಗಳ ಕಾಲ ನಡೆದಿತ್ತು. ಪ್ರಮುಖ ಕಲಾವಿದರು ಪ್ರತ್ಯೇಕವಾಗಿ ಅಭ್ಯಾಸ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ.

ಹಾಡಿನ ಒಂದು ದೃಶ್ಯದಲ್ಲಿ ಮಾಧುರಿ ದೀಕ್ಷಿತ್ ತಿರುಗಿ ಕುಳಿತುಕೊಳ್ಳುವ ಸ್ಟೆಪ್ ಇತ್ತು. ಆ ದೃಶ್ಯವನ್ನು ಬೆಳಿಗ್ಗೆ 9 ಗಂಟೆಯಿAದ ರಾತ್ರಿ 10 ಗಂಟೆಯವರೆಗೆ ಮರುಚಿತ್ರೀಕರಿಸಲಾಗುತ್ತಿತ್ತು. ಆ ಸಮಯದಲ್ಲಿ ಮಾಧುರಿ ದೀಕ್ಷಿತ್ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು ಎಂದು ರೂಬಿನಾ ಖಾನ್ ತಿಳಿಸಿದ್ದಾರೆ.

ಗರ್ಭಿಣಿಯಾಗಿದ್ದ ಕಾರಣ ಅವರಿಗೆ ಸರಿಯಾಗಿ ತಿರುಗಲು ಕಷ್ಟವಾಗುತ್ತಿತ್ತು. ಜೊತೆಗೆ ಜ್ವರ ಹಾಗೂ ತಲೆಸುತ್ತು ಇತ್ತು ಎಂದು ಹೇಳಿದ್ದಾರೆ. ಆದರೂ ಅವರು ಯಾವುದೇ ಸ್ಟೆಪ್ ಬದಲಾಯಿಸಬೇಕೆಂದು ಕೇಳಲಿಲ್ಲ. ಮಾಸ್ಟರ್‌ಜಿ ಹೇಳಿದ್ದೇ ಅಂತಿಮ ಎನ್ನುವ ರೀತಿಯಲ್ಲಿ ಮಾಧುರಿ ಕೆಲಸ ಮಾಡುತ್ತಿದ್ದರು ಎಂದು ರೂಬಿನಾ ಹೇಳಿದ್ದಾರೆ.

ದೇವದಾಸ್ ಚಿತ್ರವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ್ದರು. ಚಿತ್ರದಲ್ಲಿ ಶಾರುಖ್ ಖಾನ್, ಐಶ್ವರ್ಯಾ ರೈ ಬಚ್ಚನ್ ಮತ್ತು ಮಾಧುರಿ ದೀಕ್ಷಿತ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ರೂಬಿನಾ ಖಾನ್ ನೀಡಿದ ಸಂದರ್ಶನದ ಬಳಿಕ ‘ಡೋಲಾ ರೇ’ ಹಾಡಿನ ಶೂಟಿಂಗ್ ಹಿಂದಿನ ಕಠಿಣ ಪರಿಶ್ರಮದ ವಿಚಾರ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

[ad_2]

Source link publictv.in

Leave a Reply

Your email address will not be published. Required fields are marked *