[ad_1]

ರಾಜ್ಯಾದ್ಯಂತ ಇಂದಿನಿಂದ 4 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಬೆಂಗಳೂರಿನಲ್ಲಿ ಮುಂದಿನ 3 ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಗಳಿಗೆ ಇಂದು ಆರೆಂಜ್ ಅಲರ್ಟ್, ಇನ್ನುಳಿದ 19 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ವಿಜಯಪುರ, ಬಾಗಲಕೋಟೆ, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಮೇ 22 ರಂದು ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಮತ್ತು 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 32-22
ಮಂಗಳೂರು: 31-26
ಶಿವಮೊಗ್ಗ: 32-23
ಬೆಳಗಾವಿ: 31-23
ಮೈಸೂರು: 32-23

ಮಂಡ್ಯ: 32-23
ಮಡಿಕೇರಿ: 28-21
ರಾಮನಗರ: 32-23
ಹಾಸನ: 29-22
ಚಾಮರಾಜನಗರ: 33-23
ಚಿಕ್ಕಬಳ್ಳಾಪುರ: 32-22

ಕೋಲಾರ: 33-22
ತುಮಕೂರು: 32-22
ಉಡುಪಿ: 32-27
ಕಾರವಾರ: 31-28
ಚಿಕ್ಕಮಗಳೂರು: 27-21
ದಾವಣಗೆರೆ: 32-24

ಹುಬ್ಬಳ್ಳಿ: 31-23
ಚಿತ್ರದುರ್ಗ: 32-23
ಹಾವೇರಿ: 31-24
ಬಳ್ಳಾರಿ: 34-25
ಗದಗ: 31-23
ಕೊಪ್ಪಳ: 33-24

ರಾಯಚೂರು: 37-26
ಯಾದಗಿರಿ: 37-26
ವಿಜಯಪುರ: 35-24
ಕಲಬುರಗಿ: 37-26
ಬಾಗಲಕೋಟೆ: 33-24
[ad_2]
Source link publictv.in

















Leave a Reply