Advertisement

ಸ್ಕೂಟಿಯಲ್ಲಿ ಆನೆಗೆ ಡಿಕ್ಕಿ ಹೊಡೆದು ದಂತ ಮುರಿದ ಮಹಿಳೆ!

[ad_1]

ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಯೊಬ್ಬರು ರಸ್ತೆ ದಾಟುವ ಆನೆಗೆ ಡಿಕ್ಕಿ ಹೊಡೆದು, ಆನೆಯ ದಂತವನ್ನು ಮುರಿದ ಅಚ್ಚರಿ ಘಟನೆ ಒಂದು ಉತ್ತರಕಾಂಡಲ್ಲಿ ನಡೆದಿದೆ. 

ಉತ್ತರಾಖಂಡ್ ನ ಚಕರ್ ಪುರದಲ್ಲಿ ಆನೆ ಕಾರಿಡಾರ್ ಬಳಿಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಶಿಕ್ಷಕಿ ನೇರವಾಗಿ ಆನೆಗೆ ಡಿಕ್ಕಿ ಹೊಡೆದಿದ್ದಾರೆ. ಘಟನೆಯಲ್ಲಿ ದಂತ ಮುರಿದುಕೊಂಡ ಆನೆ ಕಾಡಿನೊಳಗೆ ಓಡಿದೆ. ಘಟನೆಯಲ್ಲಿ ಮಹಿಳೆಗೆ ಗಾಯವಾಗಿದ್ದು, ಮಹಿಳೆಯ ಸ್ಕೂಟರ್​ ಚಿಂದಿ ಚಿಂದಿ ಆಗಿದೆ. ಮಾಹಿತಿ ಪಡೆದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅರಣ್ಯ ಇಲಾಖೆಯ ತಂಡ ಆನೆಯ ಮುರಿದ ದಂತವನ್ನು ಸ್ಥಳದಿಂದ ಕೊಂಡೊಯ್ದು ಅದನ್ನು ಕಚೇರಿಯಲ್ಲಿ ಸುರಕ್ಷಿತವಾಗಿರಿಸಿದೆ. ಆನೆಯ ಮೇಲೆ ನಿಗಾ ಇಡಲು ಸ್ಥಳದಲ್ಲೇ ಎರಡು ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.



[ad_2]

Source link

Leave a Reply

Your email address will not be published. Required fields are marked *