Advertisement

ಸಿಇಟಿ: ಮೇ 26ರಿಂದ ವಿಶೇಷ ಚೇತನರ ವೈದ್ಯಕೀಯ ತಪಾಸಣೆ – ಕೆಇಎ | Public TV

[ad_1]

ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ವಿಶೇಷ ಚೇತನರ ಕೋಟಾದಡಿ ಕ್ಲೇಮ್ ಮಾಡಿರುವ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ ಮೇ‌ 26ರಿಂದ ಜೂನ್ 2ರವರೆಗೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (Karnataka Examination Authority) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ತಿಳಿಸಿದ್ದಾರೆ.

ಅರ್ಜಿಯಲ್ಲಿ ಕ್ಲೇಮ್ ಮಾಡಿರುವ ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ನಲ್ಲಿ ಇರುವ ಲಿಂಕ್ ಮೂಲಕ ಮುಂಗಡವಾಗಿ ದಿನಾಂಕ ನಿಗದಿಪಡಿಸಿಕೊಂಡು ತಪಾಸಣೆಗೆ ಆಸ್ಪತ್ರೆಗಳಿಗೆ ಹೋಗಬೇಕು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಐಫೋನ್ 18 ಬಳಿಕ ಐಫೋನ್ 20 ಮಾರುಕಟ್ಟೆಗೆ – 19ರ ಸರಣಿ ಮಾರುಕಟ್ಟೆಗೆ ಬರಲ್ಲ ಯಾಕೆ?

ಕಣ್ಣಿಗೆ ಸಂಬಂಧಿಸಿದಂತೆ ಮಿಂಟೊ ಆಸ್ಪತ್ರೆ ಹಾಗೂ ಇತರ ವೈಕಲ್ಯಗಳಿಗೆ ಸಂಬಂಧಿಸಿದಂತೆ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಮಂಡಳಿ ಮುಂದೆ ತಪಾಸಣೆಗೆ ಹಾಜರಾಗಬೇಕಾಗುತ್ತದೆ. ನಿಗದಿತ ದಿನಾಂಕದಂದು ತಪಾಸಣೆಗೆ ಹೋಗಬೇಕು. ಇಲ್ಲಿ ಅರ್ಹರಾದವರನ್ನು ಮಾತ್ರ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ. ವಿವರಗಳಿಗೆ ಕೆಇಎ ವೆಬ್‌ಸೈಟ್ ನೋಡಬಹುದು ಎಂದು ವಿವರಿಸಿದ್ದಾರೆ.

[ad_2]

Source link publictv.in

Leave a Reply

Your email address will not be published. Required fields are marked *