Advertisement

ಪರೀಕ್ಷೆ ಮುಗಿದ ಹತ್ತೇ ನಿಮಿಷದಲ್ಲಿ ಫಲಿತಾಂಶ ಪ್ರಕಟ – ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಿಂದ ಹೊಸ ದಾಖಲೆ

[ad_1]

VTU

-ಮೌಲ್ಯಮಾಪನಕ್ಕೆ ಡಿಜಿಟಲ್ ವ್ಯವಸ್ಥೆ ಅಳವಡಿಸಿದ ವಿಟಿಯು

ಬೆಳಗಾವಿ: ಪರೀಕ್ಷೆ ಮುಗಿದ ಹತ್ತೇ ನಿಮಿಷದಲ್ಲಿ ಫಲಿತಾಂಶ ಪ್ರಕಟಿಸಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಿಂದ (Visvesvaraya Technological University) ಹೊಸ ದಾಖಲೆ ನಿರ್ಮಿಸಿದೆ.

ಬೆಳಗಾವಿಯ (Belagavi) ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬಿಇ (BE), ಬಿಟೆಕ್ (B.Tech) ಅಂತಿಮ ವರ್ಷದ ವಿದ್ಯಾರ್ಥಿಗಳ ಫಲಿತಾಂಶವನ್ನು ಪರೀಕ್ಷೆ ಮುಗಿದ ಹತ್ತೇ ನಿಮಿಷದಲ್ಲಿ ಪ್ರಕಟಿಸಿದೆ. ಇದನ್ನೂ ಓದಿ: ವಿಳಾಸ ಕೇಳುವ ನೆಪದಲ್ಲಿ ಬಾಲಕನಿಗೆ ಇಂಜೆಕ್ಷನ್ ಹಾಕಿ ಮುಸುಕುಧಾರಿಗಳು ಎಸ್ಕೇಪ್

ಬಿಇ, ಬಿಟೆಕ್ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ಒಟ್ಟು 56,192 ವಿದ್ಯಾರ್ಥಿಗಳ ಹಾಜರಾಗಿದ್ದರು. ಇಂದು (ಮೇ 22) ಸಂಜೆ 5:30ಕ್ಕೆ ಪರೀಕ್ಷೆ ಅಂತ್ಯವಾಗಿದ್ದು, 5:40ಕ್ಕೆ ಫಲಿತಾಂಶ ಪ್ರಕಟವಾಗಿದ್ದು, ವಿವಿಯು ಶೇ.99.98ರಷ್ಟು ಫಲಿತಾಂಶ ಸಾಧಿಸಿದೆ.

ಹತ್ತೇ ನಿಮಿಷದಲ್ಲಿ ಫಲಿತಾಂಶ ಪ್ರಕಟಿಸುವುದರ ಜೊತೆಗೆ ವಿದ್ಯಾರ್ಥಿಗಳ ಮೊಬೈಲ್‌ನ ವಾಟ್ಸಪ್ ಸಂಖ್ಯೆಗೂ ಫಲಿತಾಂಶವನ್ನು ರವಾನಿಸಲಾಗಿದೆ. ಮೌಲ್ಯಮಾಪನದಲ್ಲಿ ಡಿಜಿಟಲ್ ವ್ಯವಸ್ಥೆ ಅಳವಡಿಸಿ ವಿಟಿಯು ಈ ಸಾಧನೆ ಮಾಡಿದೆ. ತ್ವರಿತ ಫಲಿತಾಂಶ ಪ್ರಕಟನೆಗೆ ಶ್ರಮಿಸಿದ ಸಿಬ್ಬಂದಿಗೆ ವಿಸಿ ಪ್ರೊ.ವಿದ್ಯಾಶಂಕರ ಅವರು ಅಭಿನಂದಿಸಿದ್ದಾರೆ.ಇದನ್ನೂ ಓದಿ: ಆನೇಕಲ್‌ನಲ್ಲಿ 80 ಸಾವಿರ ಆಸನ ಸಾಮರ್ಥ್ಯದ ಕ್ರಿಕೆಟ್‌ ಸ್ಟೇಡಿಯಂ – ಶನಿವಾರ ಸಿಎಂ ಶಂಕುಸ್ಥಾಪನೆ


[ad_2]

Source link publictv.in

Leave a Reply

Your email address will not be published. Required fields are marked *