[ad_1]

ಬೆಂಗಳೂರು: ಮಾದಾವರ-ತುಮಕೂರು ಮೆಟ್ರೋ (Madavara -Tumakuru Metro) ರೈಲು ಯೋಜನೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಡಿಪಿಆರ್ ಸಲ್ಲಿಕೆ ಮಾಡಲಾಗಿದೆ.
ನಿನ್ನೆ ಸಂಜೆ ವಿಧಾನಸೌಧದಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ್ (Dr. G.Parameshwar) ಅವರು ಡಿಪಿಆರ್ ವರದಿ ಸ್ವೀಕರಿಸಿದ್ದಾರೆ. ಮಾದವಾರ-ತುಮಕೂರು ಮೆಟ್ರೋ ರೈಲು ಯೋಜನೆ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ ಸಾಧ್ಯತೆ ಇದೆ. ಡಿಪಿಆರ್ ಅನ್ನು ಬಿಎಮ್‌ಆರ್‌ಸಿಎಲ್ ಸಿದ್ಧಪಡಿಸಿದೆ. ಇದನ್ನೂ ಓದಿ: ಕ್ರೂಸರ್, ಲಾರಿ ಮಧ್ಯೆ ಭೀಕರ ಅಪಘಾತ – ಒಂದೇ ಕುಟುಂಬದ ಐವರ ದುರ್ಮರಣ
ಈ ಕುರಿತು ಮಾತನಾಡಿದ ಪರಮೇಶ್ವರ್, ತುಮಕೂರಿಗೆ ಮೆಟ್ರೋ ರೈಲು ಬೇಕು ಅನ್ನೋ ನಿಟ್ಟಿನಲ್ಲಿ ಬಹಳ ದಿನಗಳಿಂದ ಪ್ರಯತ್ನ ನಡೀತಿತ್ತು. ಕಳೆದ ಬಜೆಟ್‌ನಲ್ಲಿ ಫೀಸಿಬಿಲಿಟಿ ಅಧ್ಯಯನ ಮಾಡೋದಾಗಿ ಸಿಎಂ ಹೇಳಿದ್ರು. ಹೈದರಾಬಾದ್ ಸಂಸ್ಥೆಯಿಂದ 3.5 ಕೋಟಿ ರೂ. ಕರ್ಚು ಮಾಡಿ ವರದಿ ಪಡೆಯಲಾಗಿದೆ. ಈ ವರದಿಯಲ್ಲಿ ಮಾದಾವರ ಟು ತುಮಕೂರು ಮೆಟ್ರೋ ಯೋಜನೆ ಮಾಡಬಹುದು ಅಂತ ಹೇಳಲಾಗಿದೆ ಎಂದು ತಿಳಿಸಿದರು.
ಅದಾದ ನಂತರ ಡಿಪಿಆರ್ ವರದಿಗೆ ಟೆಂಡರ್ ಕೊಡಲಾಗಿತ್ತು. ಮೆಟ್ರೋದವ್ರೇ ಬೇರೊಂದು ಸಂಸ್ಥೆ ಮೂಲಕ ಡಿಪಿಆರ್ ವರದಿ ಸಿದ್ಧಪಡಿಸಿ ಕೊಟ್ಟಿದೆ. ಮೆಟ್ರೋ ಯೋಜನೆಯನ್ನು ಪಿಪಿಪಿ ಮಾಡೆಲ್‌ನಲ್ಲಿ ಮಾಡಲಾಗುತ್ತೆ. ಡಿಪಿಆರ್ ವರದಿಯಲ್ಲಿ 20 ಸಾವಿರ ಕೋಟಿ ಅಂದಾಜು ವೆಚ್ಚ ಹಾಕಲಾಗಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ನಂತರ ಟೆಂಡರ್ ಕರೆಯುತ್ತೇವೆ ಎಂದರು. ಇದನ್ನೂ ಓದಿ: ಇಂದು 19ನೇ ಉದ್ಯೋಗ ಮೇಳ – ಮೋದಿಯಿಂದ 50,000ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರ ವಿತರಣೆ
[ad_2]
Source link publictv.in

















Leave a Reply