Advertisement

ವೆಂಕಟೇಶ್ ಅಯ್ಯರ್ ಭೇಟಿಯಾದ ಅಲ್ಲು ಅರ್ಜುನ್ –  RCB ಆಟಗಾರನಿಂದ ಪುಷ್ಪರಾಜ ಪುತ್ರನಿಗೆ ಸಿಕ್ತು ವಿಶೇಷ ಜೆರ್ಸಿ 

[ad_1]

Allu Arjun and Venkatesh Iyer

ಹೈದರಾಬಾದ್: ಆರ್‌ಸಿಬಿ ತಂಡದ ಟ್ಯಾಲೆಂಟೆಡ್‌ ಪ್ಲೇಯರ್ ತನ್ನ ಭರ್ಜರಿ ಬ್ಯಾಟಿಂಗ್‌ನಿಂದ ಸದ್ದು ಮಾಡ್ತಿರುವ ವೆಂಕಟೇಶ್ ಅಯ್ಯರ್ (Venkatesh Iyer) ಅವರನ್ನು ಪ್ಯಾನ್ ಇಂಡಿಯಾ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅವರು ಭೇಟಿಯಾಗಿದ್ದಾರೆ.

ಈ ಕುರಿತು ಅಲ್ಲು ಅರ್ಜುನ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ವೆಂಕಟೇಶ್ ಅಯ್ಯರ್ ಅವರನ್ನು ಭೇಟಿಯಾಗಿದ್ದು ಖುಷಿಯಾಗಿದೆ. ಅಯನ್‌ಗೆ ವಿಶೇಷ ಸಹಿಯಿರುವ ಜೆರ್ಸಿ ನೀಡಿದ್ದಕ್ಕಾಗಿ ಧನ್ಯವಾದಗಳು. ಮುಂದೆ ನೀವು ಮಾಡುವ ಕೆಲಸಗಳಿಗೂ ಒಳ್ಳೆಯದಾಗಲಿ ಎಂದು ಶುಭಕೋರಿದ್ದಾರೆ. ಇದನ್ನೂ ಓದಿ: AI ವಿಡಿಯೋ ಹಲ್‌ಚಲ್‌, ದುರುಳರಿಗೆ ಎಚ್ಚರಿಕೆ ಕೊಟ್ಟ ʻಕನಕವತಿʼ – ಹಿಂದಿರುವ ಸೂತ್ರಧಾರ ಯಾರು?

ಭೇಟಿ ವೇಳೆ ಅಲ್ಲು ಅರ್ಜುನ್ ಪುತ್ರ ಅಯನ್‌ಗೆ ವೆಂಕಟೇಶ್ ಅಯ್ಯರ್ ಆರ್‌ಸಿಬಿಯ (RCB) ವಿಶೇಷ ಸಹಿಯಿರುವ ಜೆರ್ಸಿ ನೀಡಿದ್ದಾರೆ. ಇನ್ನೂ ಅಲ್ಲು ಅರ್ಜುನ್ ಅವರ ಪುತ್ರ ಅಯನ್ ಎಸ್‌ಆರ್‌ಹೆಚ್ ಅಭಿಮಾನಿಯಾಗಿದ್ದು, ಹೈದರಾಬಾದ್‌ನಲ್ಲಿ ನಡೆದ ಎಸ್‌ಆರ್‌ಹೆಚ್ ಮತ್ತು ಆರ್‌ಸಿಬಿ ಪಂದ್ಯದ ಬಳಿಕ ಭೇಟಿಯಾಗಿದ್ದಾರೆ ಎನ್ನಲಾಗ್ತಿದೆ.



[ad_2]

Source link publictv.in

Leave a Reply

Your email address will not be published. Required fields are marked *