Advertisement

ಶ್ರೇಯಸ್‌ ಅಯ್ಯರ್‌ ಚೊಚ್ಚಲ ಶತಕ ತಂದ ಗೆಲುವು – ಪಂಜಾಬ್‌ಗೆ ಪ್ಲೇ ಆಫ್‌ ಕನಸು ಜೀವಂತ

[ad_1]

Shreyas Iyer

ಲಕ್ನೋ: ನಾಯಕ ಶ್ರೇಯಸ್‌ ಅಯ್ಯರ್‌ (Shreyas Iyer) ಚೊಚ್ಚಲ ಐಪಿಎಲ್‌ ಶತಕದ ನೆರವಿನೊಂದಿಗೆ ಪಂಜಾಬ್‌ ಕಿಂಗ್ಸ್‌ ತಂಡವು ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಸತತ 6 ಸೋಲುಗಳ ಬಳಿಕ ಗೆದ್ದ ಪಂಜಾಬ್‌ 19ನೇ ಆವೃತ್ತಿಯ ಪ್ಲೇ ಆಫ್‌ ಪ್ರವೇಶಿಸುವ ಕನಸು ಜೀವಂತವಾಗಿರಿಸಿಕೊಂಡಿದೆ.

ಮುಂಬೈ ಕೈನಲ್ಲಿ ಪಂಜಾಬ್‌ ಭವಿಷ್ಯ
ಲಕ್ನೋ ವಿರುದ್ಧದ ಗೆಲುವಿನ ಮೂಲಕ ಪಂಜಾಬ್‌ ಕಿಂಗ್ಸ್‌ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದರೂ ಪ್ಲೇ ಆಫ್‌ ಭವಿಷ್ಯ ಮುಂಬೈ ಇಂಡಿಯನ್ಸ್‌ ತಂಡದ ಗೆಲುವಿನ ಮೇಲೆ ನಿಂತಿದೆ. ಏಕೆಂದ್ರೆ ಪಂಜಾಬ್‌ ತನ್ನೆಲ್ಲಾ ಲೀಗ್‌ ಪಂದ್ಯಗಳನ್ನ ಮುಗಿಸಿದ್ದು, 15 ಅಂಕ ಪಡೆದುಕೊಂಡಿದೆ. ಆದ್ರೆ 13 ಪಂದ್ಯಗಳಲ್ಲಿ 7 ಪಂದ್ಯ ಗೆದ್ದಿರುವ ರಾಜಸ್ಥಾನ್‌ ರಾಯಲ್ಸ್‌ ತಂಡ 14 ಅಂಕ ಪಡೆದು 5ನೇ ಸ್ಥಾನದಲ್ಲಿದೆ. ಪಂಜಾಬ್‌ ಕಿಂಗ್ಸ್‌ಗಿಂತ ಕಡಿಮೆ ರನ್‌ರೇಟ್‌ ಹೊಂದಿದ್ದರೂ, ನಾಳೆ ಮುಂಬೈ ವಿರುದ್ಧ ಗೆದ್ದರೆ 16 ಅಂಕಗಳನ್ನು ಪಡೆಯುವ ಮೂಲಕ ರಾಜಸ್ಥಾನ್‌ ರಾಯಲ್ಸ್‌ ಪ್ಲೇ ಆಫ್‌ ಪ್ರವೇಶಿಸುವ ಅವಕಾಶ ಹೊಂದಿದೆ. ಒಂದು ವೇಳೆ ಮುಂಬೈ ಗೆದ್ದರೆ, ರಾಜಸ್ಥಾನ್‌ ಗಂಟು ಮೂಟೆ ಕಟ್ಟಲಿದೆ.

LSG

ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದ 68ನೇ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡ ಮುಖಾಮುಖಿಯಾಗಿದ್ದವು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 196 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಪಂಜಾಬ್‌ 18 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ಗೆ 200 ರನ್‌ ಬಾರಿಸಿ ಗೆದ್ದು ಬೀಗಿದೆ.

Shreyas Iyer 2

ಅಯ್ಯರ್‌-ಸಿಮ್ರನ್‌ ಶತಕದ ಜೊತೆಯಾಟ
2.2 ಓವರ್‌ಗಳಲ್ಲೇ 22 ರನ್‌ಗಳಿಗೆ 2 ಪ್ರಮುಖ ವಿಕೆಟ್‌ ಕಳೆದುಕೊಂಡಿದ್ದ ಪಂಜಾಬ್‌ ಕಿಂಗ್ಸ್‌ ತಂಡ ಮತ್ತೆ ಸಂಕಷ್ಟಕ್ಕೆ ಸಿಲುಕಿತ್ತು. ಆ ಬಳಿಕ ಭದ್ರವಾಗಿ ಕ್ರೀಸ್‌ನಲ್ಲಿ ನೆಲೆಯೂರಿದ ಪ್ರಭ್‌ ಸಿಮ್ರನ್‌ಸಿಂಗ್‌ – ಶ್ರೇಯಸ್‌ ಅಯ್ಯರ್‌ ಜೋಡಿ ಉತ್ತಮ ಇನ್ನಿಂಗ್ಸ್‌ ಕಟ್ಟುವಲ್ಲಿ ಯಶಸ್ವಿಯಾಯಿತು. 76 ಎಸೆತಗಳಲ್ಲಿ ಈ ಜೋಡಿ ಬರೋಬ್ಬರಿ 140 ರನ್‌ ಚಚ್ಚಿತ್ತು.

Josh Inglis

ಅಯ್ಯರ್‌ ಚೊಚ್ಚಲ ಶತಕ
ಇನ್ನೂ ಪಂಜಾಬ್‌ ಪರ ನಾಯಕನ ಆಟವಾಡಿದ ಅಯ್ಯರ್‌ 51 ಎಸೆತಗಳಲ್ಲಿ ಸ್ಫೋಟಕ 101 ರನ್‌ (5 ಸಿಕ್ಸರ್‌, 11 ಬೌಂಡರಿ) ಚಚ್ಚಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಪ್ರಭ್‌ ಸಿಮ್ರನ್‌ ಸಿಂಗ್‌ 39 ಎಸೆತಗಳಲ್ಲಿ 69 ರನ್‌ (2 ಸಿಕ್ಸರ್‌, 7 ಬೌಂಡರಿ), ಕೂಪರ್‌ ಕೊನೊಲಿ 18 ರನ್‌, ಸೂರ್ಯಾಂಶ್‌ ಶೆಡ್ಗೆ 9 ರನ್‌ ಕೊಡುಗೆ ನೀಡಿದರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಲಕ್ನೋ ಪರ ಜೋಶ್‌ ಇಂಗ್ಲಿಸ್‌ 72 ರನ್‌ ಚಚ್ಚಿದ್ರೆ, ಆಯುಷ್‌ ಬದೋನಿ ಸ್ಫೋಟಕ 43 ರನ್‌, ಪಂತ್‌ 26 ರನ್‌ ಹಾಗೂ ಅಬ್ದುಲ್‌ ಸಮದ್‌ 37 ರನ್‌ ಬಾರಿಸಿದ್ರು.



[ad_2]

Source link publictv.in

Leave a Reply

Your email address will not be published. Required fields are marked *