Advertisement

ನೀಟ್ ಪರೀಕ್ಷೆ ಬರೆದಿದ್ದ ಕಲಬುರಗಿ ವಿದ್ಯಾರ್ಥಿನಿ ಆತ್ಮಹತ್ಯೆ

[ad_1]

Kalaburagi Student 2

ಕಲಬುರಗಿ: ಮೇ 3 ರಂದು ನಡೆದಿದ್ದ ನೀಟ್ ಪರೀಕ್ಷೆ (NEET) ಬರೆದಿದ್ದ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯ ಕೋರ್ಟ್ ವೃತ್ತದ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಶನಿವಾರ (ಇಂದು) ನಡೆದಿದೆ.

ಭಾಗ್ಯಶ್ರೀ (18) ಮೃತ ವಿದ್ಯಾರ್ಥಿನಿ (Student). ಮನೆಯಲ್ಲೇ ಸೀಲಿಂಗ್‌ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Kalaburagi Student

ವೈದ್ಯಕೀಯ ಶಿಕ್ಷಣದ (Medical Education) ಕನಸು ಕಂಡಿದ್ದ ಭಾಗ್ಯಶ್ರೀ, ಇತ್ತೀಚೆಗೆ ಮೇ 2ರಂದು ನೀಟ್ ಪರೀಕ್ಷೆ ಬರೆದಿದ್ದರು ಎಂದು ತಿಳಿದುಬಂದಿದೆ. ಮೇ 3 ರಂದು ನೀಟ್ ಪರೀಕ್ಷೆ ಬರೆದಿದ್ದ ಭಾಗ್ಯಶ್ರೀ ಗೆ ಪರೀಕ್ಷೆಯ ಬಗ್ಗೆ ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇತ್ತು. ಕೆಲವೊಂದು ಆತಂಕವೂ ಇತ್ತು. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕುಟುಂಬಸ್ಥರ ಹೇಳಿಕೆಯಂತೆ ಭಾಗ್ಯಶ್ರೀ ಸಾಮಾನ್ಯವಾಗಿ ಇದ್ದು, ಮನೆಯಲ್ಲಿ ಯಾವುದೇ ಗಂಭೀರ ಸಮಸ್ಯೆಗಳಿರಲಿಲ್ಲ. ಪಿಯುಸಿಯಲ್ಲಿ ಆಕೆ 92% ಅಂಕ ಪಡೆದ್ದಾಳೆ.

NEET 03

ಘಟನೆಯ ಬಳಿಕ ಮೃತಳ ತಂದೆ ರಾಜಶೇಖರ್ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ. ಅವಳು ಯಾವುದೇ ಕಾರಣ ಹೇಳಿಲ್ಲ. ನಾವು ಯಾರ ಮೇಲೂ ದೂರು ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಘಟನೆ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

[ad_2]

Source link publictv.in

Leave a Reply

Your email address will not be published. Required fields are marked *