Advertisement

ದೆಹಲಿ ಸ್ಫೋಟ ಪ್ರಕರಣ – AI ಬಳಸಿ ಬಾಂಬ್‌ ತಯಾರಿಸಿದ್ದ ಟೆರರ್‌ ಡಾಕ್ಟರ್ಸ್‌!

[ad_1]

Delhi Car Blast

ನವದೆಹಲಿ: ದೆಹಲಿ ಸ್ಫೋಟದ (Delhi Blast) ಆರೋಪಿಗಳು ಚಾಟ್‌ಜಿಪಿಟಿ (AI), ಯೂಟ್ಯೂಬ್‌ನಿಂದ ಮಾಹಿತಿ ಕಲೆಹಾಕಿ ಬಾಂಬ್‌ಗಳನ್ನು ತಯಾರಿಸಿದ್ದರು ಎಂಬ ಅಂಶ ಹೊರಬಿದ್ದಿದೆ.

ಕೆಂಪು ಕೋಟೆ (Red Fort) ಪ್ರದೇಶದಲ್ಲಿ ಕಾರು ಸ್ಫೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿದೆ. ತನಿಖೆಯಲ್ಲಿ ಜಾಗತಿಕ ಭಯೋತ್ಪಾದಕ ಸಂಘಟನೆ ಅಲ್-ಖೈದಾಕ್ಕೆ ಸೇರಿರುವ ಆರೋಪಿಯೊಬ್ಬ ಬಾಂಬ್‌ ತಯಾರಿಕೆಗೆ ಕೃತಕ ಬುದ್ಧಿಮತ್ತೆ (ಎಐ) ದುರುಪಯೋಗಪಡಿಸಿಕೊಂಡಿದ್ದ. ಅಲ್ಲದೇ ಆರೋಪಿಗಳು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ತಯಾರಿಸಿ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಖಾಜಿಗುಂಡ್ ಕಾಡಿನಲ್ಲಿ ಅವುಗಳನ್ನು ಪರೀಕ್ಷಿಸಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಇದನ್ನೂ ಓದಿ: ಫರಿದಾಬಾದ್‌ನಲ್ಲಿ ಜಪ್ತಿ ಮಾಡಿದ್ದ ಸ್ಫೋಟಕ ಶ್ರೀನಗರ ಠಾಣೆಯಲ್ಲಿ ಸ್ಫೋಟ – ಇದು ಆಕಸ್ಮಿಕ ಘಟನೆ; ಗೃಹಸಚಿವಾಲಯ, ಡಿಜಿಪಿ ಸ್ಪಷ್ಟನೆ

ಈ ಸಂಬಂಧ ಎನ್‌ಐಎ ಅಧಿಕಾರಿಗಳು ಮೇ 14 ರಂದು ವಿಶೇಷ ಎನ್‌ಐಎ ನ್ಯಾಯಾಲಯದ ಮುಂದೆ ಸಲ್ಲಿಸಿದ 7,500 ಪುಟಗಳ ಬೃಹತ್ ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳ ಸಂಚನ್ನು ಉಲ್ಲೇಖಿಸಲಾಗಿದೆ.

ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾದ ಆರೋಪಿಗಳಲ್ಲಿ ಒಬ್ಬ, ಭಾರತದಲ್ಲಿ ಅಲ್-ಖೈದಾಗೆ ಸಂಬಂಧಿಸಿರುವ ಅನ್ಸಾರ್ ಘಜ್ವತ್-ಉಲ್-ಹಿಂದ್ (ಎಜಿಯುಎಚ್) ಮಧ್ಯಂತರ ಭಯೋತ್ಪಾದನಾ ಮಾಡ್ಯೂಲ್‌ನ “ಇನ್-ಹೌಸ್ ಎಂಜಿನಿಯರ್” ಆಗಿ ಕಾರ್ಯನಿರ್ವಹಿಸುತ್ತಿದ್ದ. ಆರೋಪಿ ಜಾಸಿರ್ ಬಿಲಾಲ್ ವಾನಿ 2024-25ರ ಅವಧಿಯಲ್ಲಿ ಹರಿಯಾಣದ ಫರಿದಾಬಾದ್‌ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯದ ಆವರಣದಲ್ಲಿ ಎರಡರಿಂದ ಮೂರು ಬಾರಿ ತಂಗಿದ್ದ. ಈ ಪಿತೂರಿಗೆ ಈತ ತಾಂತ್ರಿಕ ಬೆಂಬಲ ನೀಡಿದ್ದ. ತನಿಖೆಯಲ್ಲಿ ಅಲ್ ಫಲಾಹ್ ವಿವಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ವೈದ್ಯರು ಸ್ಫೋಟದಲ್ಲಿ ಭಾಗಿಯಾಗಿದ್ದಾರೆಂದು ತಿಳಿದುಬಂದ ನಂತರ ವಿಶ್ವವಿದ್ಯಾಲಯದಲ್ಲಿ ತೀವ್ರ ತಪಾಸಣೆ ನಡೆಸಲಾಗಿತ್ತು.

Delhi Blast

ಇಂಧನ ತೈಲ ಮತ್ತು ಟ್ರಾನ್ಸ್‌ಫಾರ್ಮರ್‌ಗೆ ಬಳಸುವ ಆಯಿಲ್‌ನೊಂದಿಗೆ ಬೆರೆಸಿದ ಅಮೋನಿಯಂ ನೈಟ್ರೇಟ್ ಬಳಸಿ, ಪ್ರಬಲವಾದ ಸ್ಫೋಟಕ ಸಾಧನವನ್ನ ಉಮರ್ ತಯಾರು ಮಾಡಿದ್ದ. ಬಾಂಬ್ ಅನ್ನು 3 MM ಅಥವಾ 9 MM ಬ್ಯಾಟರಿ-ಚಾಲಿತ ಟೈಮಿಂಗ್ ಸಾಧನಕ್ಕೆ ತೆಳುವಾದ ಕೇಬಲ್‌ಗಳೊಂದಿಗೆ ಸಂಪರ್ಕಿಸಲಾಗಿತ್ತು. ಸರ್ಕ್ಯೂಟ್‌ಗೆ ಹಸ್ತಚಾಲಿತ ಸ್ವಿಚ್ ಅಗತ್ಯವಿತ್ತು, ಉಮರ್ ಸ್ಫೋಟವನ್ನ ಪ್ರಚೋದಿಸಲು ಮನೆಯ ಆನ್-ಆಫ್ ಸ್ವಿಚ್‌ನಂತೆ ಕಾರ್ಯನಿರ್ವಹಿಸಲು ರೆಡಿ ಮಾಡಿದ್ದ. ಈ ಬಾಂಬ್ ಜೋಡಣೆ ಪ್ರಕ್ರಿಯೆಯು ಕೇವಲ 5 ರಿಂದ 10 ನಿಮಿಷದಲ್ಲೇ ಮಾಡಿದ್ದ. ಜೊತೆಗೆ ಸ್ಫೋಟಕ್ಕೆ ಬಳಸುವ ಡಿಟೋನೇಟರ್‌ಗಳನ್ನ ಸಾಮಾನ್ಯ ಕಲ್ಲಿದ್ದಲು ಗಣಿಗಳಿಂದ ಸುಲಭವಾಗಿ ಪಡೆಯಬಹುದು ಎನ್ನಲಾಗಿದೆ. ಮೂರು ಗಂಟೆ ಪಾರ್ಕಿಂಗ್ ನಲ್ಲಿ ಕೂತಾಗಲೇ ಇದನ್ನೆಲ್ಲ ಉಮರ್‌ ಸೆಟ್ ಮಾಡಿಕೊಂಡಿರಬಹುದು ಎಂದು ಅಧಿಕಾರಿಗಳು ಅನುಮಾನಿಸಿದ್ದರು.

ನವೆಂಬರ್ 10 ರಂದು ಕೆಂಪು ಕೋಟೆಯ ಬಳಿ ಈ ಸ್ಫೋಟ ಸಂಭವಿಸಿತ್ತು. ಸ್ಫೋಟದ ತೀವ್ರತೆಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ವಿಡಿಯೋದಲ್ಲಿ ಬಾಂಬ್ ಸ್ಫೋಟಗೊಳ್ಳುತ್ತಿದ್ದಂತೆ ಇಡೀ ಮೆಟ್ರೋ ನಿಲ್ದಾಣದಲ್ಲಿ ಭೂಕಂಪನದ ಅನುಭವ ಉಂಟಾಗಿತ್ತು. ಸ್ಫೋಟದಲ್ಲಿ 11 ಜನರು ಸಾವನ್ನಪ್ಪಿ, ಹಲವಾರು ಜನ ಗಾಯಗೊಂಡಿದ್ದರು.  Delhi Blast | ಸ್ಫೋಟದ ರೂವಾರಿ ಉಮರ್‌ನ ನಿವಾಸ ಉಡೀಸ್

[ad_2]

Source link publictv.in

Leave a Reply

Your email address will not be published. Required fields are marked *