Advertisement

IPL 2026 | ಗೆದ್ದು ಆಟ ಮುಗಿಸಿದ ಡೆಲ್ಲಿ – ಸೋಲಿನೊಂದಿಗೆ ವಿದಾಯ ಹೇಳಿದ ಕೋಲ್ಕತ್ತಾ

[ad_1]

KL Rahul

ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್‌ ಮೈದಾನದಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಟೂರ್ನಿಯ ಲೀಗ್ ಹಂತದ ಕೊನೇ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 40 ರನ್‌ಗಳ ಭರ್ಜರಿ ಜಯ ಗಳಿಸಿದೆ. ಈ ಮೂಲಕ ಗೆಲುವಿನೊಂದಿಗೆ 19ನೇ ಆವೃತ್ತಿಯ ಐಪಿಎಲ್‌ಗೆ ವಿದಾಯ ಹೇಳಿದ್ರೆ, ಕೆಕೆಆರ್‌ ಸೋಲಿನೊಂದಿಗೆ ಈ ಆವೃತ್ತಿಗೆ ಗುಡ್‌ಬೈ ಹೇಳಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 203 ರನ್‌ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 18.4 ಓವರ್‌ಗಳಲ್ಲಿ 163 ರನ್‌ ಗಳಿಸಿ ಆಲೌಟ್‌ ಆಯಿತು.

 DC Vs KKR

ಕೆಕೆಆರ್ ಬೌಲರ್‌ಗಳ ಎದುರು ಅಬ್ಬರದ ಆಟವಾಡಿದ ಕನ್ನಡಿಗ ಕೆ.ಎಲ್. ರಾಹುಲ್ ಕೇವಲ 30 ಎಸೆತಗಳಲ್ಲಿ 4 ಸಿಕ್ಸರ್‌ 5 ಬೌಂಡರಿ ನೆರವಿನಿಂದ 60 ರನ್ ಗಳಿಸಿ ಮಿಂಚಿದರು. ನಾಯಕ ಅಕ್ಷರ್ ಪಟೇಲ್ 2 ಸಿಕ್ಸರ್‌ 3 ಬೌಂಡರಿ ಸಿಡಿಸಿ 39 ರನ್, ಡೇವಿಡ್ ಮಿಲ್ಲರ್ 3 ಸಿಕ್ಸರ್‌ ಸಿಡಿಸಿ 28 ರನ್ ಗಳಿಸಿದರು. ಇದು ತಂಡದ ಮೊತ್ತ 200ರ ಗಡಿ ದಾಟಿತು.

ಕೆಕೆಆರ್ ಪರ ಸೌರಭ್ ದುಬೇ 2 ವಿಕೆಟ್ ಪಡೆದರೆ, ಅನುಕೂಲ್ ರಾಯ್, ಸುನಿಲ್ ನಾರಾಯಣ್ ಮತ್ತು ವರುಣ್ ಚಕ್ರವರ್ತಿ ಒಂದೊಂದು ವಿಕೆಟ್ ಪಡೆದರು.

ಕೋಲ್ಕತ್ತಾ ಪರ ಅಜಿಂಕ್ಯ ರಹಾನೆ 39 ಎಸೆತಗಳಲ್ಲಿ 4 ಸಿಕ್ಸರ್‌, 4 ಬೌಂಡರಿ ಸಿಡಿಸಿ 63 ರನ್‌, ಮನಿಷ್‌ ಪಾಂಡ್ಯ 16 ಎಸೆತಗಳಲ್ಲಿ 2 ಸಿಕ್ಸರ್‌, 2 ಬೌಂಡರಿ ಸಿಡಿಸಿ 25 ರನ್‌ ಕಲೆ ಹಾಕಿದರು.

[ad_2]

Source link publictv.in

Leave a Reply

Your email address will not be published. Required fields are marked *