Advertisement

ವಿರಾಜಪೇಟೆ | ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಕಾಡಾನೆ ಹಿಂಡು

[ad_1]

ELEPHANT 1

ಮಡಿಕೇರಿ: ಕಾಡಾನೆಗಳನ್ನು (Elephant) ಕಾಡಿಗೆ ಅಟ್ಟುವ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ (Forest Department) ಸಿಬ್ಬಂದಿ ತಂಡವನ್ನು ಕಾಡಾನೆಗಳು ಬೆನ್ನಟ್ಟಿದ ಘಟನೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗುಹ್ಯ ಗ್ರಾಮದಲ್ಲಿ ನಡೆದಿದೆ.

ಗುಹ್ಯ ಗ್ರಾಮ ಹಾಗೂ ನೆಲ್ಲಿ ಹುದಿಕೇರಿ ಗ್ರಾಮದ ಬೆಟ್ಟದ ಕಾಡು ಸುತ್ತಮುತ್ತಲಿನ ಪ್ರದೇಶದ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡು ಬಿಟ್ಟು ಹಾವಳಿ ನಡೆಸುತ್ತಿದ್ದವು. ಅವುಗಳನ್ನು ಕಾಡಿಗಟ್ಟುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಗುಂಪಿನಲ್ಲಿದ್ದ ಕಾಡಾನೆಗಳು ಕೋಪಗೊಂಡು ಕಾರ್ಯಾಚರಣೆ ತಂಡವನ್ನು ಬೆನ್ನಟ್ಟಿವೆ. ಕಾಫಿ ತೋಟದ ತುಂಬೆಲ್ಲ ಅಟ್ಟಾಡಿಸಿವೆ. ಇದನ್ನೂ ಓದಿ: ಒಂದೆಡೆ ಪ್ರವಾಸೋದ್ಯಮ, ಇನ್ನೊಂದೆಡೆ ಮೃತ್ಯುರೂಪಿ ಆನೆ – ಪಳಗಿದರೂ ಮರೆಯದ ವನ್ಯಗುಣ, ಹೊಣೆ ಯಾರು?

ಕಾಡಾನೆಗಳಿಂದ ತಪ್ಪಿಸಿಕೊಳ್ಳಲು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಆನೆ ಕಾರ್ಯಪಡೆ ಸಿಬ್ಬಂದಿ ಕಾಫಿ ತೋಟದೊಳಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಆದರೆ ಗುಂಪಿನಲ್ಲಿದ್ದ ಬಹುತೇಕ ಕಾಡಾನೆಗಳು ಕಾಫಿ ತೋಟಗಳಿಂದ ಹೊರಕ್ಕೆ ಹೋಗಲು ಹಿಂದೇಟು ಹಾಕಿದವು ಎಂದು ಸಿಬ್ಬಂದಿ ತಿಳಿಸಿದರು.

ಒಂದು ಗುಂಪಿನ ಕಾಡಾನೆಗಳು ಗುಹ್ಯ ಗ್ರಾಮದಲ್ಲಿ ಹಾಗೂ ನೆಲ್ಲಿ ಹುದಿಕೇರಿ ಗ್ರಾಮದ ಬೆಟ್ಟದ ಕಾಡು ನದಿ ತೀರದ ಬಳಿ ಉಳಿದುಕೊಂಡಿದೆ. 5ಮರಿಯಾನೆಗಳು ಸೇರಿದಂತೆ 21ಕ್ಕೂ ಅಧಿಕ ಕಾಡಾನೆಗಳು ಗುಂಪಿನಲ್ಲಿವೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ದುಬಾರೆ ದುರಂತ – ಇಬ್ಬರು ಅರಣ್ಯ ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತ ಕೇಸ್

[ad_2]

Source link publictv.in

Leave a Reply

Your email address will not be published. Required fields are marked *