[ad_1]

ನವದೆಹಲಿ: ಬಾಲಿವುಡ್ ನಟ ಧರ್ಮೇಂದ್ರ, ಮಹಿಳಾ ಟೀಂ ಇಂಡಿಯಾ ನಾಯಕಿ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್ ಸೇರಿದಂತೆ 66 ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು 2026ರ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಟ ಧರ್ಮೇಂದ್ರ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಅವರ ಪತ್ನಿ ಹೇಮಾ ಮಾಲಿನಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಪಿಟೀಲು ವಾದಕರಾದ ಎನ್.ರಾಜಮ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು, ಮಹಾರಾಷ್ಟ್ರದ ಮಾಜಿ ಗವ್ ಭಗತ್ ಸಿಂಗ್ ಕೋಶ್ಯಾರಿ ಮತ್ತು ಬ್ಯಾಂಕರ್ ಉದಯ್ ಕೋಟಕ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ. ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಟ ಪ್ರೊಸೆನ್‌ಜಿತ್ ಚಟರ್ಜಿ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಈ ಸಾಲಿನಲ್ಲಿ ಒಟ್ಟು 131 ಪದ್ಮ ಪ್ರಕಟವಾಗಿದೆ. 5 ಪದ್ಮ ವಿಭೂಷಣ, 13 ಪದ್ಮಭೂಷಣ, 113 ಪದ್ಮ ಶ್ರೀ ಪ್ರಕಟವಾಗಿತ್ತು. ಇಂದು 2 ಪದ್ಮ ವಿಭೂಷಣ, 6 ಪದ್ಮಭೂಷಣ, 58 ಪದ್ಮ ಶ್ರೀ ಪ್ರದಾನ ಮಾಡಲಾಯಿತು. ಇನ್ನುಳಿದವರಿಗೆ 2ನೇ ಹಂತದಲ್ಲಿ ಪ್ರದಾನ ಮಾಡಲಾಯಿತು.
[ad_2]
Source link publictv.in

















Leave a Reply