Advertisement

‘3F’ ಗಳ ಬಗ್ಗೆ ಗಮನ ಹರಿಸಿ: ಭಾರತೀಯರಿಗೆ ನಿರ್ಮಲಾ ಸೀತಾರಾಮನ್‌ ಕರೆ

[ad_1]

nirmala sitharaman

ಮುಂಬೈ: ದೇಶವು ಇಂಧನ, ರಸಗೊಬ್ಬರ ಮತ್ತು ವಿದೇಶಿ ವಿನಿಮಯದತ್ತ ಗಮನಹರಿಸಬೇಕೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಮಧ್ಯಪ್ರಾಚ್ಯ ಯುದ್ಧದ ಪರಿಣಾಮವನ್ನು ತಪ್ಪಿಸಲು ಈಚೆಗೆ ಪ್ರಧಾನಿ ಮೋದಿ ಅವರು ಮಿತವ್ಯಯಕ್ಕೆ ಕರೆ ನೀಡಿದ್ದರು. ಇಂಧನ ಉಳಿತಾಯ, ವಿದೇಶಿ ವಿನಿಮಯ ಹಾಗೂ ಒಂದು ವರ್ಷ ಚಿನ್ನ ಖರೀದಿ ತಪ್ಪಿಸಿ ಎಂದು ಭಾರತೀಯರಿಗೆ ಮೋದಿ ಸಲಹೆ ನೀಡಿದ್ದರು. ಮೋದಿ ಹೇಳಿಕೆಗಳನ್ನು ನಿರ್ಮಲಾ ಸೀತಾರಾಮನ್‌ ಸಮರ್ಥಿಸಿಕೊಂಡಿದ್ದಾರೆ.

ಸಾಧ್ಯವಾದಷ್ಟು ವಿದೇಶಿ ವಿನಿಮಯವನ್ನು ಸಂರಕ್ಷಿಸಲು ಪ್ರಧಾನಿ ಕರೆ ನೀಡುವುದು ಬಹಳ ಮುಖ್ಯ. ಇಂಧನ, ರಸಗೊಬ್ಬರ ಮತ್ತು ವಿದೇಶಿ ವಿನಿಮಯ.. ಈ 3F ಗಳ ಮೇಲಿನ ಒತ್ತಡವನ್ನು ಈ ಸಂದರ್ಭದಲ್ಲಿ ನೋಡಬೇಕು ಎಂದು ಸಚಿವರು ತಿಳಿಸಿದ್ದಾರೆ.

ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ನಂತರ ಭಾರತವು ಏರುತ್ತಿರುವ ಕಚ್ಚಾ ತೈಲ ಬೆಲೆಗಳು ಮತ್ತು ಪೂರೈಕೆಯಲ್ಲಿನ ಅಡಚಣೆಗಳ ಪರಿಣಾಮದಿಂದ ತತ್ತರಿಸಿ ಹೋಗಿದೆ.

[ad_2]

Source link publictv.in

Leave a Reply

Your email address will not be published. Required fields are marked *